Slide
Slide
Slide
previous arrow
next arrow

ಜ.20ಕ್ಕೆ ರಾಜ್ಯ ಮಟ್ಟದ ವಿಶೇಷ ತರಬೇತಿ: ವಿವಿಧ ಉಪನ್ಯಾಸ ಕಾರ್ಯಕ್ರಮ

300x250 AD

ಕುಮಟಾ: ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿ., ಬೆಂಗಳೂರು, ಉತ್ತರ ಕನ್ನಡ ಜಿಲ್ಲಾ ಸಹಕಾರ ಯೂನಿಯನ್ ನಿ.,ಕುಮಟಾ, ಸಹಕಾರ ಇಲಾಖೆ ಹಾಗೂ ಕೆನರಾ ಡಿಸ್ಟ್ರಿಕ್ಟ್ ಸೆಂಟ್ರಲ್ ಕೋ-ಆಪರೇಟಿವ್ ಬ್ಯಾಂಕ್ ಲಿ.,ಶಿರಸಿ ಇವರುಗಳ ಸಂಯುಕ್ತ ಆಶ್ರಯದಲ್ಲಿ ಬೆಳಗಾವಿ ವಿಭಾಗದ ಆಯ್ದ ಪತ್ತಿನ ಸಹಕಾರ ಸಂಘಗಳ ಪದಾಧಿಕಾರಿಗಳು ಹಾಗೂ ಮುಖ್ಯ ಕಾರ್ಯನಿರ್ವಾಹಕರಿಗೆ ರಾಜ್ಯ ಮಟ್ಟದ ವಿಶೇಷ ತರಬೇತಿ ಕಾರ್ಯಕ್ರಮವನ್ನು ಜ:20, ಸೋಮವಾರದಂದು, ಬೆಳಿಗ್ಗೆ 10-00 ಗಂಟೆಗೆ, ಕೆನರಾ ಡಿಸ್ಟ್ರಿಕ್ಟ್ ಸೆಂಟ್ರಲ್ ಕೋ-ಆಪರೇಟಿವ್ ಬ್ಯಾಂಕ್ ಲಿ., ಶಿರಸಿಯ ಸುಂದರರಾವ್ ಪಂಡಿತ ಸ್ಮಾರಕ ಸಭಾಭವನದಲ್ಲಿ ಸಂಘಟಿಸಲಾಗಿದೆ.

ಕಾರ್ಯಕ್ರಮದಲ್ಲಿ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿ.,ಬೆಂಗಳೂರಿನ ಅಧ್ಯಕ್ಷರಾದ ಜಿ.ಟಿ. ದೇವೇಗೌಡರು ಸಭೆಯ ಘನ ಅಧ್ಯಕ್ಷತೆಯನ್ನು ವಹಿಸಿಕೊಳ್ಳಲಿದ್ದು ಉದ್ಘಾಟನೆಯನ್ನು ಯಲ್ಲಾಪುರ ಮತ್ತು ಮುಂಡಗೋಡ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ಕೆ.ಡಿ.ಸಿ.ಸಿ ಬ್ಯಾಂಕ್ ಶಿರಸಿಯ ಅಧ್ಯಕ್ಷರಾದ ಶಿವರಾಮ ಹೆಬ್ಬಾರ್ ನೆರವೇರಿಸುವರು. ಸಹಕಾರ ಪಿತಾಮಹರ ಭಾವಚಿತ್ರಕ್ಕೆ ಪುಷ್ಪಾರ್ಪಣೆಯನ್ನು ಉತ್ತರ ಕನ್ನಡ ಜಿಲ್ಲಾ ಸಹಕಾರ ಯೂನಿಯನ್ನಿನ ಅಧ್ಯಕ್ಷರಾದ ವ್ಹಿ.ಎನ್. ಭಟ್ಟ, ಅಳ್ಳಂಕಿ ನೆರವೇರಿಸುವರು. 

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿ.,ಬೆಂಗಳೂರು  ಇದರ ಉಪಾಧ್ಯಕ್ಷರಾದ ಜಗದಿಶ ಎಂ. ಕವಟಗಿಮಠ, ನಾಮ ನಿರ್ದೇಶಿತ ನಿರ್ದೇಶಕರಾದ ಎನ್. ಗಂಗಣ್ಣ, ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿ.,ಬೆಂಗಳೂರು ಇದರ ನಿರ್ದೇಶಕರಾದ ಜಿ. ಪಿ. ಪಾಟೀಲ, ಬಸವರಾಜ ಎನ್. ಅರಬಗೊಂಡ, ಈರಣ್ಣ ಸಿ. ಪಟ್ಟಣಶೆಟ್ಟಿ, ವೃತ್ತಿಪರ ನಿರ್ದೇಶಕರಾದ ಬಾಪುಗೌಡ ಡಿ. ಪಾಟೀಲ, ಶ್ರೀಮತಿ ಕೆ. ಸಿ. ನಾಗರತ್ನ, ಟಿಎಂಎಸ್ ಲಿ., ಶಿರಸಿ ಅಧ್ಯಕ್ಷರಾದ ಜಿ. ಡಿ. ಹೆಗಡೆ ತಟ್ಟೀಸರ, ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿ.,ಬೆಂಗಳೂರು ಇದರ ವ್ಯವಸ್ಥಾಪಕ ನಿರ್ದೇಶಕರಾದ ಕೆ.ಎಸ್.ನವೀನ್, ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿ.,ಬೆಂಗಳೂರು ಇದರ ಕಾರ್ಯದರ್ಶಿಗಳಾದ ಲಕ್ಷ್ಮಿಪತಯ್ಯ, ಉತ್ತರ ಕನ್ನಡ ಜಿಲ್ಲಾ ಸಹಕಾರ ಯೂನಿಯನ್ನಿನ ಉಪಾಧ್ಯಕ್ಷರಾದ ಶ್ರೀಪಾದ ನಾರಾಯಣ ರಾಯ್ಸದ, ಕಾರವಾರ ಜಿಲ್ಲೆಯ ಸಹಕಾರ ಸಂಘಗಳ ಉಪನಿಬಂಧಕರಾದ ಜಿ.ಕೆ.ಭಟ್ಟ, ಸಹಕಾರ ಸಂಘಗಳ ಲೆಕ್ಕಪರಿಶೋಧನಾ ಇಲಾಖೆ ಉಪನಿರ್ದೇಶಕರಾದ ಸುಭಾಷ ತಳವಾರ, ಕೆ.ಡಿ.ಸಿ.ಸಿ. ಬ್ಯಾಂಕ್ ಲಿ., ಶಿರಸಿ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀಕಾಂತ ಜಿ. ಭಟ್ಟ, ಸಹಕಾರ ಸಂಘಗಳ ಸಹಾಯಕ ನಿಬಂಧಕರಾದ ಅಜಿತ ಶಿರಹಟ್ಟಿ. ಉತ್ತರ ಕನ್ನಡ ಜಿಲ್ಲಾ ಸಹಕಾರ ಯೂನಿಯನ್ ನಿ., ಕುಮಾಟಾ ಉಪಾಧ್ಯಕ್ಷರಾದ ಶ್ರೀಪಾದ ನಾರಾಯನ ರಾಯ್ಸದ್ ಭಾಗವಹಿಸುವರು. 

300x250 AD

ಕಾರ್ಯಕ್ರಮದಲ್ಲಿ ಪತ್ತಿನ ಸಹಕಾರ ಸಂಘಗಳು ಎದುರಿಸುತ್ತಿರುವ ಸವಾಲುಗಳು ಹಾಗೂ ಪರಿಹಾರಗಳ ಕುರಿತು ಚಾಟರ್ಡ್ ಅಕೌಂಟಂಟ್ ಬಿ.ವ್ಹಿ. ರವೀಂದ್ರನಾಥ ಸಾಗರ, ಆದಾಯ, ವೃತ್ತಿ ಹಾಗೂ ಸರಕು ಸೇವಾ ತೆರಿಗೆಗಳು (ಜಿ.ಎಸ್.ಟಿ) ಕುರಿತು ಚಾಟರ್ಡ್ ಅಕೌಂಟಂಟ್ ವರುಣ ಭಟ್ಟ ಸಾಗರ, ಹಾಗೂ ಸಹಕಾರ ಸಂಘಗಳಲ್ಲಿ ಆಡಳಿತ ನಿರ್ವಹಣೆ ಎಂಬ ವಿಷಯಗಳ ಕುರಿತು ಕಾರ್ಪೋರೇಟ್ ಟ್ರೇನರ್ ಧಾರವಾಡದ ಮಹೇಶ ಮಾಶಾಳ ಇವರು ಉಪನ್ಯಾಸ ನೀಡಲಿದ್ದಾರೆ. ಬೆಳಗಾವಿ ವಿಭಾಗದ  ಆಹ್ವಾನಿತ ಪತ್ತಿನ ಸಹಕಾರ ಸಂಘಗಳ ಪದಾಧಿಕಾರಿಗಳು ಹಾಗೂ ಮುಖ್ಯ ಕಾರ್ಯನಿರ್ವಾಹಕರು ಕಾರ್ಯಕ್ರಮದ ಪ್ರಯೋಜನವನ್ನು ಪಡೆದುಕೊಳ್ಳುವಂತೆ ಸಂಚಾಲಕರು ಈ ಪ್ರಕಟಣೆಯ ಮೂಲಕ ಕೋರಿರುತ್ತಾರೆ.

Share This
300x250 AD
300x250 AD
300x250 AD
Back to top