Slide
Slide
Slide
previous arrow
next arrow

ಇಂದು ಕಂಚಿಕೈ ರಂಗಮಂದಿರದಲ್ಲಿ ಗೌರವ ಸಮರ್ಪಣೆ: ಯಕ್ಷಗಾನ

300x250 AD

ಸಿದ್ದಾಪುರ: ಶಿರಸಿಯ ವಸುಂಧಾರಾ ಸಮೂಹ ಸೇವಾ ಸಂಸ್ಥೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತ ಆಶಯದಲ್ಲಿ ಗೌರವ ಸಮರ್ಪಣೆ ಮತ್ತು ಯಕ್ಷಗಾನ ಕಲಾ ಪ್ರದರ್ಶನ ತಾಲೂಕಿನ ಕಂಚಿಕೈ ಬಯಲು ರಂಗ ಮಂದಿರದಲ್ಲಿ ಇಂದು ಜನವರಿ 8 ರ ಸಂಜೆ 6 ಕ್ಕೆ ಏರ್ಪಡಿಸಲಾಗಿದೆ.

ಕಾರ್ಯಕ್ರಮದಲ್ಲಿ ಜನಪದ ಲೋಕ ಪ್ರಶಸ್ತಿ ಪುರಸ್ಕೃತ ಹಿರಿಯ ಕಲಾವಿದ ಜಿ.ಎಂ.ಭಟ್ಟ ಕೆವಿ ಅವರಿಗೆ ಗೌರವ ಸಮರ್ಪಿಸಲಾಗುತ್ತದೆ. ಹೆಗ್ಗರಣೆ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎಂ.ಎಲ್. ಭಟ್ಟ ಉದ್ಘಾಟಿಸುವರು. ನಿಲ್ಲುಂದ ಗ್ರಾಪಂ ಅಧ್ಯಕ್ಷ ರಾಜಾರಾಮ ಹೆಗಡೆ ಅಧ್ಯಕ್ಷತೆ ವಹಿಸುವರು. ಸಾಮಾಜಿಕ ಕಾರ್ಯಕರ್ತ ಎಸ್ ಕೆ. ಭಾಗವತ್, ಕಂಚಿಕೈ ಸೇವಾ ಸಹಕಾರಿ ಸಂಘದ ಅಧ್ಯಕ್ಷ ರಾಜು ಹೆಗಡೆ, ತಂಡಾ ಗುಂಡಿ ಗ್ರಾಪಂ ಅಧ್ಯಕ್ಷ ಪದ್ಮಾವತಿ ಗೌಡ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಮಂಗಲಾ ನಾಯ್ಕ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳುವರು. ಹಿರಿಯ ಕಲಾ ಪೋಷಕ ಪ್ರಭಾಕರ ಹೆಗಡೆ, ರಮೇಶ ಹೆಗಡೆ, ರಾಘವೇಂದ್ರ ಹೆಗಡೆ ಮತ್ತು ಸತೀಶ ಕಂಚಿಕೈ ಉಪಸ್ಥಿತರಿರುವರು,

ನಂತರ ಸುಧನ್ವ ಕಾಳಗ ಆಖ್ಯಾನದ ಯಕ್ಷಗಾನ ಕಲಾ ಪ್ರದರ್ಶನ ನಡೆಯಲಿದ್ದು ಹಿಮ್ಮೇಳದಲ್ಲಿ ಸರ್ವೇಶ್ವರ ಹೆಗಡೆ ಮೂರೂರು, ಎಂ,ಪಿ. ಹೆಗಡೆ, ಸುಬ್ರಹ್ಮಣ್ಯ ಭಟ್ಟ ಬಾಡ, ಗಜಾನನ ಹೆಗಡೆ ಮತ್ತು ಗಜಾನನ ಸಾಂತೂರು ಪಾಲ್ಗೊಳ್ಳುವವರು.

ಮುಮ್ಮೇಳದಲ್ಲಿ ಸುಬ್ರಹ್ಮಣ್ಯ ಹೆಗಡೆ ಚಿಟ್ಟಾಣಿ, ಚಂದ್ರಹಾಸ ಗೌಡ, ರಘುಪತಿ ನಾಯ್ಕ, ಸದಾನಂದ ಪಟಗಾರ ಮತ್ತು ಮಾರ್ಷಲ್ ಮೂರೂ ರು ಭಾಗವಹಿಸುವರು.

ಸಿದ್ದಾಪುರ ತಾಲೂಕಿನ ಹೆಗ್ಗರಣೆ ಸಮೀಪದ ಕೆಳಗಿನ ವಾಜಗಾರ ನಿವಾಸಿ ಜಿ. ಎಮ್. ಭಟ್ಟ ಕೆವಿ ಅವರು ಸಹಕಾರಿ ರಂಗದಲ್ಲಿ ಹಲವಾರು ವರ್ಷಗಳ ಕಾಲ ಸಾರ್ಥಕ ಸೇವೆ ಸಲ್ಲಿಸಿದ್ದಾರೆ.

ಎಳವೆಯಿಂದಲೇ ಯಕ್ಷಗಾನಾಸಕ್ತರಾದ ಗಜಾನನ ಮಂಜುನಾಥ ಭಟ್ಟ ಕೆಳಗಿನ ವಾಜಗಾರ ಅವರು ಹೊಸ್ತೋಟ ಮಂಜುನಾಥ ಭಾಗವತರು ಮತ್ತು ಕೆರೆಮನೆ ವೆಂಕಟಾಚಲ ಭಟ್ಟ ಮಾರ್ಗದರ್ಶನದಲ್ಲಿ ಶ್ರೇಷ್ಠ ತಾಳಮದ್ದಲೆ ಅರ್ಥಧಾರಿ ಮತ್ತು ಕಲಾವಿದರಾಗಿ ರೂಪಗೊಂಡರು. ಸುಮಾರು ಅರ್ಧ ಶತಮಾನಕ್ಕಿಂತಲೂ ಹೆಚ್ಚು ಕಾಲ ಯಕ್ಷಗಾನ ಮಂಡಳಿ ಕಂಚಿಕೈ, ಹೆಗ್ಗರಣಿ ಮತ್ತು ಹುಕ್ಕಲಮಕ್ಕಿ ಮೇಳಗಳಲ್ಲಿ ಪ್ರಮುಖ ಕಲಾವಿದರಾಗಿ ಸೇವೆ ಸಲ್ಲಿಸಿ ಕೀರ್ತಿ ಗಳಿಸಿದ್ದಾರೆ.

300x250 AD

ಚಿಗುರು ಬಳಗ, ಯಕ್ಷಚತ್ವಾರಿ, ಯಕ್ಷ ವೇದಿಕೆ ಸಂಘಟನೆಗಳನ್ನು ಹುಟ್ಟು ಹಾಕುವದರೊಂದಿಗೆ ಯುವ ಪ್ರತಿಭೆಗಳು ಯಕ್ಷರಂಗ ಪ್ರವೇಶ ಮಾಡುವಂತಾಗಲು ಜಿ.ಎಂ ಭಟ್ಟರ ಕೊಡುಗೆ ಅಪಾರವಾಗಿದೆ. ಮೂವತ್ತೂರು ಯಕ್ಷಗಾನ ಪ್ರಸಂಗಗಳನ್ನು ಎರಡು ಕವನ ಸಂಕಲನಗಳನ್ನು ರಚಿಸಿದ್ದಾರೆ. ಅಲ್ಲದೆ, ಹಲವಾರು ಲೇಖನಗಳನ್ನು ಬರೆದು ಸಾಹಿತ್ಯ ಕ್ಷೇತ್ರಕ್ಕೂ ಕೊಡುಗೆ ನೀಡಿದ್ದಾರೆ.ಜೀವವೈವಿಧ್ಯ ದಾಖಲಾತಿಯ ಮಾರ್ಗದರ್ಶಕರಾಗಿ ಕಾರ್ಯ ನಿರ್ವಹಿಸಿದ್ದಾರೆ.ತಮ್ಮ ಸಾಧನೆಗೆ ರಾಜ್ಯ ಮಟ್ಟದ ಜಾನಪದ ಲೋಕ ಪ್ರಶಸ್ತಿ ಸೇರಿದಂತೆ ನಾನಾ ಪ್ರಶಸ್ತಿ ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ.

Share This
300x250 AD
300x250 AD
300x250 AD
Back to top