ದಾಂಡೇಲಿ : ತೀವ್ರ ಹದಗೆಟ್ಟಿದ್ದ ನಗರದ ಜೆ.ಎನ್.ರಸ್ತೆಯಲ್ಲಿ ಸುಗಮ ಸಂಚಾರಕ್ಕೆ ನಗರಸಭೆಯು ಅತ್ಯಂತ ತ್ವರಿತಗತಿಯಲ್ಲಿ ತಾತ್ಕಾಲಿಕ ಕ್ರಮ ಕೈಗೊಂಡಿದೆ.
ಕಳೆದ ಮೂರು ನಾಲ್ಕು ದಿನಗಳಿಂದ ಮಳೆಯ ಪ್ರಮಾಣ ಕಡಿಮೆಯಾದ ಬಳಿಕ ಜೆ.ಎನ್.ರಸ್ತೆಯಲ್ಲಿ ಸಂಚರಿಸುವುದೇ ಕಷ್ಟ ಸಾಧ್ಯವಾಗಿತ್ತು. ರಸ್ತೆಯ ಅಲ್ಲಲ್ಲಿ ಡಾಂಬರ್ ಕಿತ್ತು ಹೋಗಿದ್ದಲ್ಲದೇ, ಜಲ್ಲಿ ಕಲ್ಲುಗಳು ಮೇಲೆದ್ದು, ದ್ವಿಚಕ್ರ ವಾಹನಗಳು ಸ್ಕಿಡ್ ಆಗಲು ಕಾರಣವಾಗಿತ್ತು. ಇನ್ನೂ ರಸ್ತೆಯೆಲ್ಲ ಧೂಳುಮಯವಾಗಿ ಅನೇಕರ ಆರೋಗ್ಯದ ಮೇಲೆ ಪರಿಣಾಮ ಬೀರುವಂತಿತ್ತು.
ಈ ನಿಟ್ಟಿನಲ್ಲಿ ದಾಂಡೇಲಿ ನಗರಸಭೆ ಈ ರಸ್ತೆಯಲ್ಲಿ ಮೇಲೆದ್ದಿದ್ದ ಜಲ್ಲಿಕಲ್ಲುಗಳನ್ನು ಗುಡಿಸಿ, ಒಟ್ಟಗೂಡಿಸಿ, ತೆರವುಗೊಳಿಸುವ ಕಾರ್ಯಕ್ಕೆ ಎಂದು ಶುಕ್ರವಾರ ಬೆಳಗ್ಗೆ ಮುಂದಾಗಿದೆ. ನಗರಸಭೆ ಪೌರಕಾರ್ಮಿಕರು ಈ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಮಳೆಗಾಲ ಮುಗಿದ ನಂತರ ಗುಣಮಟ್ಟದಿಂದ ಈ ರಸ್ತೆ ಕಾಮಗಾರಿ ನಡೆಸಬೇಕೆಂಬುವುದೆ ನಗರದ ಜನತೆಯ ಆಶಯವಾಗಿದೆ.