Slide
Slide
Slide
previous arrow
next arrow

ದಾಂಡೇಲಿಯಲ್ಲಿ ಮನೆ ಕಳ್ಳತನ : ದೂರು ದಾಖಲು

300x250 AD

ದಾಂಡೇಲಿ : ನಗರದ ಟೌನಶಿಪ್’ನಲ್ಲಿ ಮನೆಯೊಂದರಲ್ಲಿ ಕಳ್ಳತನವಾಗಿದ್ದು, ಇನ್ನೊಂದು ಮನೆಯಲ್ಲಿ ಕಳ್ಳತನಕ್ಕೆ ಯತ್ನ ನಡೆದಿದೆ. ಈ ಬಗ್ಗೆ ದಾಂಡೇಲಿ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.

ಟೌನಶಿಪ್’ನ ರೋನಾಲ್ಡ್ ಎಂಬವರ ಮನೆಗೆ ಮನೆಯಲ್ಲಿ ಯಾರು ಇಲ್ಲದಿದ್ದ ಸಮಯದಲ್ಲಿ ಇಬ್ಬರು ಕಳ್ಳರು ಬಾಗಿಲು ಮುರಿದು ಒಳ ನುಗ್ಗಿದ್ದಾರೆ. ಆದರೆ ಅಲ್ಲಿ ಕಳ್ಳತನಕ್ಕೆ ವಿಫಲ ಯತ್ನ ನಡೆಸಿದ ಕಳ್ಳರು ಅದರ ಪಕ್ಕದಲ್ಲಿರುವ ಅಶೋಕ ಎಂಬವರ ಮನೆಗೆ ಈ ಇಬ್ಬರು ಕಳ್ಳರು ನುಗ್ಗಿದ್ದಾರೆ. ಅಶೋಕ ಅವರ ಮನೆಯಲ್ಲಿಯೂ ಯಾರು ಇಲ್ಲದಿದ್ದ ಸಮಯದಲ್ಲಿ ಅಂದರೆ ಗುರುವಾರ ನಸುಕಿನ ವೇಳೆಯಲ್ಲಿ ಕಳ್ಳತನ ಕೃತ್ಯ ನಡೆದಿದೆ. ಇಲ್ಲಿ ಈ‌ ಮನೆಯ ಕಪಾಟಿನಲ್ಲಿಟ್ಟಿದ್ದ ಚಿನ್ನ ಹಾಗೂ ಬೆಳ್ಳಿಯ ಆಭರಣಗಳನ್ನು ಕಳ್ಳರು ಕದ್ದೊಯ್ದಿದ್ದಾರೆ. ಕದ್ದೊಯ್ದಿರುವ ಚಿನ್ನ ಮತ್ತು ಬೆಳ್ಳಿಯ ಆಭರಣಗಳ ಒಟ್ಟು ಮೌಲ್ಯ ರೂ: 12,30,000/- ಎಂದು ಅಂದಾಜಿಸಲಾಗಿದೆ.

ಇನ್ನೂ ಹಳೆದಾಂಡೇಲಿಯಲ್ಲಿ ಡಾ.ಬಿ.ಪಿ.ಮಹೇಂದ್ರ ಕುಮಾರ್ ಅವರ ರೆಸಾರ್ಟ್ ಕಟ್ಟಡದಲ್ಲಿಯೂ ಸಣ್ಣಪುಟ್ಟ ಕಳ್ಳತನವಾಗಿರುವ ಬಗ್ಗೆ ಮಾಧ್ಯಮಕ್ಕೆ ಮಾಹಿತಿ ಲಭ್ಯವಾಗಿದೆ.

300x250 AD

ಈ ಬಗ್ಗೆ ನಗರ ಠಾಣೆಯಲ್ಲಿ ದೂರು ದಾಖಲಾಗಿದ್ದು, ನಗರ ಠಾಣೆಯ ಪೊಲೀಸರು ಕಳ್ಳರನ್ನು ಬಂಧಿಸಲು ಕಾರ್ಯತಂತ್ರಗಳನ್ನು ಹೆಣೆದಿದ್ದಾರೆ.

Share This
300x250 AD
300x250 AD
300x250 AD
Back to top