ಹೊನ್ನಾವರ: ಉತ್ತರ ಕನ್ನಡ ರಾಮಕ್ಷತ್ರೀಯ ವಿದ್ಯಾವರ್ಧಕ ಸಂಘ (ರಿ.) ಹಳದೀಪುರ ವತಿಯಿಂದ ಪಿಯುಸಿ ಮತ್ತು ಎಸ್.ಎಸ್.ಎಲ್.ಸಿ ಯಲ್ಲಿ 2024 ನೇ ಸಾಲಿನ 90% ಕ್ಕಿಂತ ಹೆಚ್ಚಿನ ಅಂಕಗಳಿಸಿದ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಹೊನ್ನಾವರ ಶ್ರೀ ಲಕ್ಷ್ಮಿನಾರಾಯಣ ದೇವಸ್ಥಾನದ ಸಭಾಭವನದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಕೌಶಿಕ ಸದಾನಂದ ನಾಯ್ಕ ಸಹಾಯಕ ಇಂಜಿನಿಯರ್ ಪಿ.ಡಬ್ಲ್ಯೂ.ಡಿ. ಇಲಾಖೆ ಶಿರ್ಶಿಯಿಂದ ಮಾತನಾಡಿದರು ಮುಂದಿನ ಶಿಕ್ಷಣವೆಂದರೆ ಕೇವಲ ಎಮ್.ಬಿ.ಬಿ.ಎಸ್./ ಇಂಜಿನಿಯರಿಂಗ್/ ಐ.ಎ.ಎಸ್/ ಐ.ಎಫ್.ಎಸ್. ಇದರ ಹೊರತಾಗಿ Business ಸಹ ಒಂದು ವೃತ್ತಿ ಎಂದರು. ಇಂದು ವಿವಿಧ ವ್ಯವಹಾರಗಳಲ್ಲಿ ಉನ್ನತಿ ಹೊಂದಿದವರನ್ನು ನಾವು ಬದುಕಿನಲ್ಲಿ ಕಾಣುತ್ತೇವೆ ಎಂದರು. ಪತ್ರಿಕೆ ಓದುವುದು, ಉತ್ತಮ ಗೆಳೆತನ ಹೊಂದುವುದು ನಿರ್ದಿಷ್ಟ ಗುರಿಯೊಂದಿಗೆ ಬದ್ಧತೆಯಿಂದ ಓದಿ ಗ್ರಹಿಕೆ ಮಾಡಿಕೊಳ್ಳುವುದು ಅತ್ಯವಶ್ಯಕ. ಹಿಡಿದ ಕಾರ್ಯಕ್ರಮದಲ್ಲಿ ಸಫಲತೆ ಆಗದೆ ಇದ್ದರೆ ಕಾರಣವೆನೆಂದು ನೀವೆ ವಿಚಾರಮಾಡಿ ತಿಳಿದುಕೊಳ್ಳಬೇಕು. ಎಷ್ಟಕ್ಕೂ ಧೈರ್ಯಬಿಡಬಾರದು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ಪ್ರಶಾಂತ ಪಿ. ನಾಯ್ಕ ವಹಿಸಿದ್ದರು. ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕೆ ವಿದ್ಯಾವರ್ಧಕ ಸಂಘ ಸದಾ ಸಹಕಾರ ಮಾಡುತ್ತದೆ. ಇದರ ಪ್ರಯೋಜನ ವಿದ್ಯಾರ್ಥಿಗಳು ಪಡೆದುಕೊಳ್ಳಬೇಕು ಎಂದರು. ವೇದಿಕೆಯಲ್ಲಿ ಎಚ್. ಆರ್. ನಾಯ್ಕ ಅಧ್ಯಕ್ಷರು ರಾಮಕ್ಷತ್ರೀಯ ಸಂಘ ಮಂಕಿ, ಸತೀಶ ಎಸ್. ನಾಯ್ಕ ಉಪಾಧ್ಯಕ್ಷರು ವಿದ್ಯಾವರ್ಧಕ ಸಂಘ, ಜನಾರ್ಧನ ಕಾಣಕೋಣ ಇದ್ದರು. ಪಿಯುಸಿಯ 37 ಹಾಗೂ ಎಸ್.ಎಸ್.ಎಲ್.ಸಿ ಯ 28 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.
ಆನಂದ ವೈ. ನಾಯ್ಕ ಪ್ರಧಾನ ಕಾರ್ಯದರ್ಶಿ ವಿದ್ಯಾವರ್ಧಕ ಸಂಘ 1927 ರಿಂದ ಸಮಾಜದ ಹಿರಿಯರಿಂದ ಪ್ರಾರಂಭವಾದ ಸಂಘದ ಹಿನ್ನಲೆ ತಿಳಿಸಿ ಸರ್ವರನ್ನು ಸ್ವಾಗತಿಸಿದರು. ಕಾರ್ಯಕ್ರಮದ ಸಂಚಾಲಕರಾದ ಅಜಿತ್ ಸಾಳೇಹಿತ್ತಲ್ ವಂದಿಸಿದರು, ಸತೀಶ ನಾಯ್ಕ ಹಳದೀಪುರ ನಿರೂಪಿಸಿದರು, ಸದಸ್ಯರಾದ ಪರಮೇಶ್ವರ ಕೆ. ನಾಯ್ಕ, ನಾರಾಯಣ ನಾಯ್ಕ, ದಾಮೋದರ ನಾಯ್ಕ ಹಳದೀಪುರ ಮೊದಲಾವರು ಉಪಸ್ಥಿತರಿದ್ದರು.