Slide
Slide
Slide
previous arrow
next arrow

ಸಣ್ಣಕೇರಿ ಕೆರೆಗೆ ಜೀವಜಲದ ಹೆಬ್ಬಾರರಿಂದ ಮರುಜೀವ

300x250 AD

ಮೂರು ಎಕರೆ ಕೆರೆ ಅಭಿವೃದ್ಧಿಗೆ ಚಾಲನೆ | ಜಲ ಸಂರಕ್ಷಣೆಗೆ ಟೊಂಕಕಟ್ಟಿ ನಿಂತ ಹೆಬ್ಬಾರ್

ಶಿರಸಿ: ನೀರಿನ ಕುರಿತಾಗಿ ನಮ್ಮ ಪೂರ್ವಜರಿಗೆ ಇದ್ದ ಕಾಳಜಿ, ಈಗಿನ ತಲೆಮಾರಿನವರಿಗೆ ಕಾಣುತ್ತಿಲ್ಲ. ‌ಅದರ ಪರಿಣಾಮದ ಕಾರಣಕ್ಕೆ ನೀರಿಗಾಗಿ ಹಾಹಾಕಾರ ಉಂಟಾಗಿದೆ ಎಂದು ಎಂದು ಜೀವಜಲ‌ ಕಾರ್ಯಪಡೆ ಅಧ್ಯಕ್ಷ ಶ್ರೀನಿವಾಸ ಹೆಬ್ಬಾರ್ ಹೇಳಿದರು.

ಸೋಮವಾರ ತಾಲೂಕಿನ ಇಸಳೂರು ಗ್ರಾಮ‌ ಪಂಚಾಯತ ವ್ಯಾಪ್ತಿಯ ಸಣ್ಣಕೇರಿಯ ಸರ್ವೆ ನಂಬರ್ ೪೪ರ ಮೂರು ಎಕರೆ ಕೆರೆ ಅಭಿವೃದ್ಧಿಗೆ ಚಾಲನೆ‌ ನೀಡಿ ಮಾತನಾಡಿದರು. ನೀರು ಬಾಟಲಿ ಹೋಗದ ತನಕ ಕೆರೆಗಳ ಅಭಿವೃದ್ಧಿ ಆಗದು. ಕೆರೆ ಅಭಿವೃದ್ದಿ ಮಾಡಿದರೆ ಮಾತ್ರ ಜಲದ‌ ಸಂರಕ್ಷಣೆ ಸಾಧ್ಯವಾಗಲಿದೆ. ನೀರಿನ ಬಗ್ಗೆ ಕಾಳಜಿ ಇದ್ದ ಹಿಂದಿನ ಎಸಿ ರಾಜು‌ ಮೊಗವೀರ ೨೦೧೭ರಲ್ಲಿ ಶಿರಸಿಯಲ್ಲಿ ನೀರು ಕೊರತೆ ಇದ್ದಾಗ ಜೀವ ಜಲ ಕಾರ್ಯಪಡೆಗೆ ಚಾಲನೆ‌ ನೀಡಲಾಯಿತು.

ಕಾರ್ಯಪಡೆ ಆರಂಭವಾದ ೨೪ ಗಂಟೆಯೊಳಗೆ ಆನೆಹೊಂಡ ಕೆರೆ ಅಭಿವೃದ್ದಿ ಕೂಡ ಸಿಕ್ಕಿತು. ಈವರೆಗೆ ೨೩ ಕೆರೆಗಳ ಅಭಿವೃದ್ದಿ‌ ಮಾಡಲಾಗಿದೆ. ಚಾಲನೆಯಾದ ವರ್ಷ ಚೊಕ್ಕ‌ಮಾಡಿದ ಕೆರೆ ಇದಾಗಿತ್ತು. ಈಗ ಪೂರ್ಣ ಬತ್ತಿ ಹೋಗಿದೆ. ಈಗ ಅಭಿವೃದ್ದಿಗೆ ಚಾಲನೆ‌ ನೀಡಲಾಗಿದೆ. ರಾಜರ ಕಾರ್ಯದಲ್ಲಿ ಜನ, ಜಾನುವಾರಿಗೆ, ಪ್ರಾಣಿ, ಪಕ್ಷಿಗಾಗಿ ಕೆರೆ ಅಭಿವೃದ್ದಿ ಮಾಡುತ್ತಿದ್ದರು. ಆದರೆ ಇಂದು ಕೆರೆ ಮುಚ್ಚಿ ಮನೆ ಕಟ್ಟುತ್ತಿದ್ದಾರೆ. ನೀರೇ ಇಲ್ಲದಾಗ ಏನು ಮಾಡಬೇಕು ಎಂಬ ಅರಿವಿಲ್ಲ ಅವರಿಗೆ. ಹುಟ್ಟಿದ ತಕ್ಷಣ‌ ಮತ್ತು ಸತ್ತ ನಂತರವೂ ನೀರು ಬೇಕು. ಆದರೆ, ಇಂದು‌ ನದಿ, ಕೆರೆ ನೀರು ಬಿಟ್ಟು ಬಾಟಲಿ ನೀರು ಕುಡಿಯುತ್ತಿದ್ದೇವೆ ಎಂದರು.

300x250 AD

ಸಾಮಾಜಿಕ ‌ಪ್ರಮುಖ ವೈಶಾಲಿ ವಿ.ಪಿ.ಹೆಗಡೆ, ಸಣ್ಣಕೇರಿಯ ದೊಡ್ಡ ಕೆರೆ ಅಭಿವೃದ್ದಿಗೆ ಚಾಲನೆ‌ ಸಿಕ್ಕಿದೆ. ಕೆರೆಯ ನೀರನ್ನು ಕೆರೆಗೆ ಚೆಲ್ಲುವವರು ಎಂದರು.ಉಳಿದಡೆ ಕೆರೆ ಬತ್ತಿದರೂ ಶಿರಸಿಯಲ್ಲಿ ಒಂದೇ ಒಂದು ಕೆರೆ ಬತ್ತಿಲ್ಲ. ಏಳು ವರ್ಷದ ಹಿಂದೆ ಕಾರ್ಯ ಆರಂಭವಾಗಿತ್ತು. ಹೆಬ್ಬಾರ್ ಅವರ ನೇತೃತ್ವದಲ್ಲಿ ನಡೆಯುತ್ತಿದೆ. ಅವರೇ ಕಾರ್ಯಪಡೆಯ‌ ಮೇನ್ ಫಿಲ್ಲರ್‌ ಎಂದರು.
ಇಸಳೂರು ಪಂಚಾಯತ್ ಸದಸ್ಯ‌ ಪ್ರಸನ್ನ ಹೆಗಡೆ, ಹನಿ‌ ಹನಿ‌ ನೀರಿನ ಮಹತ್ವ ತಿಳಿದು ಕಾರ್ಯಪಡೆ, ಹೆಬ್ಬಾರರು ಕೆಲಸ ಮಾಡುತ್ತಿದ್ದಾರೆ ಎಂದರು. ಪ್ರಮುಖರಾದ ನವೀನ ಶೆಟ್ಟಿ, ನಾರಾಯಣ ಶೆಟ್ಟಿ, ಅನಿಲ‌ ನಾಯಕ, ಶಿವಾನಂದ ಭಟ್ಟ ಇದ್ದರು. ಎಂ.ಎಂ.ಭಟ್ಟ ನಿರ್ವಹಿಸಿದರು.

ಹೆಬ್ಬಾರರು ಭಗೀರಥನಾಗಿ ಜಲದಾತರಾಗುತ್ತಿದ್ದಾರೆ. ಸಣ್ಣಕೆರೆಗೆ ಭಗೀರಥರಾದರು.– ಎಂ.ಎಂ.ಭಟ್ಟ ಕಾರೇಕೊಪ್ಪ, ಚಿಂತಕ

ನನಗೆ ಪಕ್ಷವಿಲ್ಲ.‌ ಒಳ್ಳೆ ಕೆಲಸ ಮಾಡುವವರ ಪರ. ನಾನು ರಾಜಕೀಯದವನಲ್ಲ. ಕೆಲವೆಡೆ ಕೆರೆ ಅಭಿವೃದ್ದಿ ಮಾಡುವಲ್ಲಿಯೂ ಕೂಡ ರಾಜಕೀಯ ಇರುತ್ತವೆ. ಆದರೆ‌ ನಮ್ಮ ಕಾರ್ಯವನ್ನು ಕರ್ತವ್ಯ ಎಂದು‌ ಮಾಡುತ್ತೇವೆ.–
ಶ್ರೀನಿವಾಸ ಹೆಬ್ಬಾರ್, ಅಧ್ಯಕ್ಷರು, ಜೀವಜಲ ಕಾರ್ಯಪಡೆ

Share This
300x250 AD
300x250 AD
300x250 AD
Back to top