Slide
Slide
Slide
previous arrow
next arrow

ಶ್ರೀಲಕ್ಷ್ಮಿವೆಂಕಟೇಶ ದೇವಾಲಯಕ್ಕೆ ಪರ್ತಗಾಳಿ ಶ್ರೀ ಭೇಟಿ

300x250 AD

ಸಿದ್ದಾಪುರ: ಪಟ್ಟಣದ ಶ್ರೀಲಕ್ಷ್ಮಿವೆಂಕಟೇಶ ದೇವಾಲಯದ ಶಿಲಾಮೂರ್ತಿ ಪ್ರತಿಷ್ಠಾಪನೆಯ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಗೋಕರ್ಣ ಪರ್ತಗಾಳಿ ಮಠಾಧೀಶರಾದ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿಯವರನ್ನು ಗೌಡಸಾರಸ್ವತ ಬ್ರಾಹ್ಮಣ ಸಮಾಜ ಬಾಂಧವರು, ಶಿಷ್ಯವೃಂದದವರು, ಪೂರ್ಣಕುಂಭದೊಂದಿಗೆ ಸ್ವಾಗತಿಸಿ ದೇವಾಲಯದ ಎದುರು ಬರಮಾಡಿಕೊಂಡರು.

ನಂತರ ಶ್ರೀಗಳು ನವೀಕೃತ ವಿದ್ಯಾಧಿರಾಜ ಕಲಾಮಂದಿರವನ್ನು ಲೋಕಾರ್ಪಣೆ ಮಾಡಿದರು ಕಲಾಮಂದಿರದಲ್ಲಿ ನಡೆದ ಸಭಾಕಾರ್ಯಕ್ರಮವನ್ನು ಶ್ರೀಗಳು ಉದ್ಘಾಟಿಸಿ ಆಶೀರ್ವಚನ ನೀಡಿ ಶ್ರೀರಾಮ ಮಂತ್ರದ ಮಹತ್ವವನ್ನು ಶಿಷ್ಯರಿಗೆ ತಿಳಿಸಿದರು.
ದೇವಾಲಯದ ಅಧ್ಯಕ್ಷರಾದ ಕೃಷ್ಣ ವಾಮನ ಮಹಾಲೆ ಸ್ವಾಗತಿಸಿದರು. ಕಾರ್ಯಾಧ್ಯಕ್ಷ ಜೈವಂತ ಶಾನಭಾಗ, ಉಪಧ್ಯಕ್ಷರಾದ ನರಸಿಂಹ ಗೋಪಾಲ ಕಾಮತ ಇತರಿರದ್ದರು.

300x250 AD
Share This
300x250 AD
300x250 AD
300x250 AD
Back to top