Slide
Slide
Slide
previous arrow
next arrow

ಚಿನ್ನದ ಬೇಟೆಯಾಡಿದ್ದ ವಿದ್ಯಾರ್ಥಿಗಳಿಗೆ ಅದ್ದೂರಿ ಸ್ವಾಗತ

300x250 AD

ಭಟ್ಕಳ: ನೇಪಾಳದ ಕಠ್ಮಂಡುವಿನಲ್ಲಿ ಭಾರತವನ್ನು ಪ್ರತಿನಿಧಿಸಿ ಚಿನ್ನದ ಬೇಟೆಯಾಡಿದ ಜಿಲ್ಲೆಯ ಭಟ್ಕಳದ ಶೊಟೋಕಾನ್ ಕರಾಟೆ ಶಾಲೆಯ ೫ ವಿದ್ಯಾರ್ಥಿಗಳನ್ನು ಭಟ್ಕಳದಲ್ಲಿ ನಾಗರಿಕರು ಹಾಗೂ ಸಂಘ ಸಂಸ್ಥೆಯ ಪ್ರತಿನಿಧಿಗಳು ಭಟ್ಕಳ ಸರ್ಕಲ್‌ನಲ್ಲಿ ಅದ್ದೂರಿ ಸ್ವಾಗತ ನೀಡಿದರು.

ನೇಪಾಳದ ಕಠ್ಮಂಡುವಿನಲ್ಲಿ ಜ.28 ರಿಂದ ಜ.30ರ ವರೆಗೆ ನಡೆದ ಸೌತ್ ಏಷಿಯನ್ ಸ್ಪೋರ್ಟ್ಸ್ 2023 ಕರಾಟೆ ಸ್ಪರ್ಧೆಯಲ್ಲಿ  ಶ್ರೀಲಂಕಾ, ಪಾಕಿಸ್ತಾನ, ಭೂತಾನ, ಬಾಂಗ್ಲಾದೇಶ ಮತ್ತು ಭಾರತದಿಂದ ಒಟ್ಟು ೩೫೦ ಸ್ಪರ್ಧಾಳುಗಳು ಭಾಗವಹಿಸಿದ್ದರು. ಭಾರತದಿಂದ ಒಟ್ಟೂ ೨೭ ಕ್ರೀಡಾಪಟುಗಳು ಭಾಗವಹಿಸಿದ್ದು ಅದರಲ್ಲಿ ಕರ್ನಾಟಕದಿಂದ ೫ ಕ್ರೀಡಾಳುಗಳು ಇದ್ದರು. ಭಟ್ಕಳ ಪಟ್ಟಣದ ಆರ್ಯನ್ ವಾಸುದೇವ ನಾಯ್ಕ, ಮಂಜುನಾಥ ಗಜಾನನ ದೇವಡಿಗ,ಪ್ರವೀಣ ಹರಿಜನ, ಭರಣಿ ಆದಿ ದ್ರಾವಿಡ, ತೇಜಸ್ವಿ ಮೊಗೇರ ಈ ಐದು ಜನ ವಿದ್ಯಾರ್ಥಿಗಳು ಪ್ರಥಮ ಸ್ಥಾನಿಯಾಗಿ ಜಯಗಳಿಸಿ ದೇಶಕ್ಕೆ ಕೀರ್ತಿ ತಂದಿದ್ದರು. ಇವರು ಭಟ್ಕಳಕ್ಕೆ ಆಗಮಿಸುತ್ತಿದ್ದಂತೆ ಭಟ್ಕಳದ ನಾಗರಿಕರು, ಸಂಘ ಸಂಸ್ಥೆಯ ಪ್ರಮುಖರು ಅದ್ದೂರಿಯ ಸ್ವಾಗತ ನೀಡಿದ್ದಾರೆ. ಚಂಡೆ ವಾದ್ಯಗಳಿಂದ ಬರಮಾಡಿಕೊಂಡು ಕರಾಟೆ ಶಾಲೆಯ ವಿದ್ಯಾರ್ಥಿಗಳು ಇವರೊಂದಿಗೆ ಜಾಥಾ ನಡೆಸಿದರು. ಸಂಶುದ್ದೀನ ಸರ್ಕಲಿನಿಂದ ಆರಂಭವಾದ ಮೆರವಣಿಗೆ ಹಳೆ ಬಸ್ ನಿಲ್ದಾಣದ ಮೂಲಕ ಸಾಗಿ ಬಳಿಕ ವಿದ್ಯಾಭಾರತಿ ಶಾಲೆಯ ಬಳಿಗೆ ಸಾಗಿ ಬಂದಿದೆ. ದೇಶಕ್ಕಾಗಿ ಚಿನ್ನ ಗೆದ್ದ ೫ ವಿದ್ಯಾರ್ಥಿಗಳು, ಅವರಿಗೆ ತರಬೇತಿ, ಮಾರ್ಗದರ್ಶನ ನೀಡಿದ ತರಬೇತಿದಾರರಿಗೆ, ಅವರಿಗೆ ನೇಪಾಳ ತೆರಳಲು ಆರ್ಥಿಕ ಸಹಾಯ ಮಾಡಿದ ಸಚಿವ ಮಂಕಾಳ ವೈದ್ಯರಿಗೆ ಸಂಘಟಕರು ಅಭಿನಂದನೆ ಸಲ್ಲಿಸಿದರು.

300x250 AD

Share This
300x250 AD
300x250 AD
300x250 AD
Back to top