Slide
Slide
Slide
previous arrow
next arrow

‘ಬೇಟಿ ಬಚಾವೋ ಬೇಟಿ ಪಡಾವೋ’ ಜಾಗೃತಿಗಾಗಿ ಬೀದಿ ನಾಟಕ

300x250 AD

ಸಿದ್ದಾಪುರ: ಬೇಟಿ ಬಚಾವೋ ಬೇಟಿ ಪಡಾವೋ ಜಾಗೃತಿ ಕುರಿತು ಬೀದಿ ನಾಟಕವನ್ನು ಸಿದ್ದಾಪುರ ಬಸ್ ನಿಲ್ದಾಣದ ಸರ್ಕಲ್ ಹತ್ತಿರ ಹಾಗೂ ತಾಲೂಕಿನ ಕಾನ್ಸೂರಿನಲ್ಲಿ ಪ್ರದರ್ಶಿಸಲಾಯಿತು.

ಸಿದ್ದಾಪುರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಶಿಶು ಅಭಿವೃದ್ಧಿ ಇಲಾಖೆಯ ಸಹಯೋಗದಲ್ಲಿ ಜನರಿಗೆ ಜಾಗೃತಿ ಮೂಡಿಸಲಾಯಿತು. ಈಶ್ವರ ಕಲಾ ಸಂಘ ಕಡಕೇರಿಯವರು ಬೀದಿ ನಾಟಕ ಮಾಡುವ ಮೂಲಕ ಹೆಣ್ಣು ಶಿಶು ಹತ್ಯೆ ತಡೆಯುವುದು.ಹೆಣ್ಣು ಶಿಶುಗಳ ಹತ್ಯೆಯಿಂದ ಸಮಾಜದ ಮೇಲೆ ಆಗುವ ಅಸಮತೋಲನಗಳ ಬಗ್ಗೆ ಅರಿವು ಮೂಡಿಸಿದರು. ಸಮಾಜದ ಮೇಲೆ ಪರಿಣಾಮ ಬೀರುವ ಹಾಡುಗಳನ್ನು ಹಾಡುವ ಮೂಲಕ ಎಚ್ಚರಿಕೆ ಸಂದೇಶಗಳನ್ನು ನೀಡಿದರು. ಶಿಶು ಅಭಿವೃದ್ಧಿ ಇಲಾಖೆ ಅಧಿಕಾರಿ ಪೂರ್ಣಿಮಾ, ಮೇಲ್ವಿಚಾರಕಿಯರು, ಅಂಗನವಾಡಿ ಕಾರ್ಯಕರ್ತೆಯರು ಉಪಸ್ಥಿತರಿದ್ದರು.

300x250 AD
Share This
300x250 AD
300x250 AD
300x250 AD
Back to top