ಕಾರವಾರ: ವಿದ್ಯಾರ್ಥಿಗಳಲ್ಲಿ ಚದುರಂಗದ ಬಗ್ಗೆ ಜಾಗೃತಿ ಮೂಡಿಸಲು ಫೆ.11ರಂದು ರ‍್ಯಾಪಿಡ್ ಚೆಸ್ ಸ್ಪರ್ಧೆ ಸಂಘಟಿಸಲಾಗಿದ್ದು, ಆಸಕ್ತ ಸ್ಪರ್ಧಾಳುಗಳು ಪಾಲ್ಗೊಳ್ಳಲು ಅವಕಾಶವಿದೆ ಎಂದು ಸಂಘಟಕ ಮದನ ತಳೇಕರ ತಿಳಿಸಿದರು.
ಅವರು ನಗರದಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ, ನಗರದ ಸವಿತಾ ಹೊಟೆಲ್‌ನ ತ್ರಿಮೂರ್ತಿ ಕಟ್ಟಡದ ಸಭಾಂಗಣದಲ್ಲಿ ಫೆ. 11ರಂದು ಓಂ ಕೋಚಿಂಗ್ ಕ್ಲಾಸ್ ಆಶ್ರಯದಲ್ಲಿ 16 ವರ್ಷದೊಳಗಿನ, 16 ವರ್ಷ ಮೇಲ್ಪಟ್ಟ ಎರಡು ವಿಭಾಗದಲ್ಲಿ ಸ್ಪರ್ಧೆ ಸ್ಪರ್ಧೆ ನಡೆಯಲಿದೆ. ಈ ಭಾಗದಲ್ಲಿ ಚದುರಂಗದ ಬಗ್ಗೆ ಆಸಕ್ತಿ ಕಡಿಮೆಯಿದ್ದು, ಮಕ್ಕಳಲ್ಲಿ ಈ ಆಟದ ಕುರಿತು ಜಾಗೃತಿ ಮೂಡಿಸುವ, ಆಸಕ್ತಿ ಬೆಳೆಸುವ ನಿಟ್ಟಿನಲ್ಲಿ ಸ್ಪರ್ಧೆಯನ್ನು ಮಕ್ಕಳಿಗಾಗಿ ಸಂಘಟಿಸಲಾಗಿದೆ ಎಂದು ವಿವರಿಸಿದರು.
ಫೆ.10ರೊಳಗೆ ಪ್ರವೇಶ ಶುಲ್ಕ 300 ರೂ. ಪಾವತಿಸಿ ನೊಂದಣಿ ಮಾಡಿಕೊಳ್ಳಬಹುದಾಗಿದೆ. ಆಧಾರ್ ಹಾಗೂ ಜನ್ಮ ದಾಖಲೆ ಪತ್ರ ಸ್ಪರ್ಧಾಳುಗಳು ನೀಡಬೇಕು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ Tel:+917676802833 ಸಂಪರ್ಕಿಸಬಹುದಾಗಿದೆ ಎಂದು ತಿಳಿಸಿದರು. ಕ್ಷಮಾ ಬಾಡಕರ, ಶ್ವೇತಾ ಹೇಮಗಿರಿ ಪತ್ರಿಕಾಗೋಷ್ಟಿಯಲ್ಲಿದ್ದರು.