ಯಲ್ಲಾಪುರ: ಆಕಸ್ಮಿಕವಾಗಿ ಬೆಂಕಿ ತಗುಲಿ ಹುಲ್ಲಿನ ಬಣವೆ ಸುಟ್ಟು ಹೋದ ಘಟನೆ ತಾಲೂಕಿನ ಕವಡಿಕೆರೆ ಗ್ರಾಮದಲ್ಲಿ ನಡೆದಿದೆ. ಕವಡಿಕೆರೆಯ ವೆಂಕಟ್ರಮಣ ಭಟ್ಟ ಅವರಿಗೆ ಸೇರಿದ ಹುಲ್ಲಿನ ಬಣವೆಯ ಮೇಲ್ಭಾಗದಲ್ಲಿ ಹಾದು ಹೋದ ವಿದ್ಯುತ್ ಲೈನ್ ಶಾರ್ಟ್ ಆದ ಪರಿಣಾಮ ಬಣವೆಗೆ ಬೆಂಕಿ ತಗುಲಿ, ಆಹುತಿಯಾಗಿದೆ. ವಿಷಯ ತಿಳಿದ ಅಗ್ನಿಶಾಮಕ ದಳದವರು ಸ್ಥಳಕ್ಕೆ ಆಗಮಿಸಿ, ಸ್ಥಳೀಯರ ನೆರವಿನೊಂದಿಗೆ ಬೆಂಕಿ ಆರಿಸಿದ್ದಾರೆ. ಅಗ್ನಿಶಾಮಕ ದಳದ ಉಲ್ಲಾಸ ನಾಗೇಕರ್, ಗಣೇಶ ಶೇಟ್, ನಾಗೇಶ ದೇವಾಡಿಗ, ಗಜೇಂದ್ರ ಬೊಬ್ರುಕರ್, ಸುನಿಲ್ ಬಡಿಗೇರ, ಹನುಮಂತ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.