ಹೊನ್ನಾವರ: ಅಖಿಲ ಕರ್ನಾಟಕ ಹಿಂದೂ ಮುಕ್ರಿ ಸಮಾಜ ಸಂಘ (ರಿ.) ಉತ್ತರ ಕನ್ನಡ ಜಿಲ್ಲೆ ಇದರ ಉದ್ಘಾಟನಾ ಕಾರ್ಯಕ್ರಮದ ಪೂರ್ವಭಾವಿಯಾಗಿ ಜ.21, ರವಿವಾರ ಬೆಳಿಗ್ಗೆ 10:00 ಗಂಟೆಗೆ ಸರಿಯಾಗಿ ಕುಮಟಾದ ಪ್ರವಾಸಿ ಮಂದಿರದಲ್ಲಿ ಸಮುದಾಯ ರಾಜ್ಯ ಸಂಘಟನೆಯ ಸಭೆಯನ್ನು ಕರೆಯಲಾಗಿದೆ.ಈ ಸಭೆಗೆ ಸಂಘದ ಪದಾಧಿಕಾರಿಗಳು ಮತ್ತು ಎಲ್ಲಾ ಜಿಲ್ಲೆಯ ಹಿಂದೂ ಮುಕ್ರಿ ಸಮುದಾಯ ಬಾಂಧವರು ಹಾಗೂ ಜಿಲ್ಲಾ ತಾಲೂಕು ಮಟ್ಟದ ಸಂಘಟನೆಯ ಪದಾಧಿಕಾರಿಗಳು ಸಮುದಾಯದ ಯಜಮಾನ ಬಾಂಧವರು ಸಮಯಕ್ಕೆ ಸರಿಯಾಗಿ ಬಂದು ಈ ಸಭೆಯನ್ನು ಯಶಸ್ಸುಗೊಳಿಸಬೇಕಾಗಿ ಈ ಮೂಲಕ ರಾಜ್ಯಾಧ್ಯಕ್ಷರು ಆದ ರಾಘವೇಂದ್ರ ನೀರ್ನಳ್ಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಈ tel:+918951188360 ನಂಬರನ್ನು ಸಂಪರ್ಕಿಸಬಹುದಾಗಿದೆ.