Slide
Slide
Slide
previous arrow
next arrow

ಉದ್ಯೋಗಕ್ಕಾಗಿ ಅಭ್ಯರ್ಥಿಗಳ ಆಯ್ಕೆಗೆ ಆಪ್ತ ಸಮಾಲೋಚನೆ

300x250 AD

ಶಿರಸಿ: ತಾಲೂಕಿನ ಎಂಇಎಸ್ ಎಂಎಂ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯ, ಹಾಗೂ ದೇಶಪಾಂಡೆ ಸ್ಕಿಲಿಂಗ್, ಹುಬ್ಬಳ್ಳಿ ಇವರ ಸಹಯೋಗದಲ್ಲಿ 2023-24ನೇ ಸಾಲಿನ ಸ್ಕಿಲ್‌ ಪ್ಲಸ್‌-ಜಾಬ್‌ ನೆಕ್ಸ್ಟ್ ಯೋಜನೆಯಡಿ ತರಬೇತಿ ಹಾಗೂ ಉದ್ಯೋಗಕ್ಕಾಗಿ ಯುವಕ ಯುವತಿಯರ ಆಯ್ಕೆ ಪ್ರಕ್ರಿಯೆಯನ್ನು ಪ್ರಾರಂಭಿಸಲಾಗಿದೆ. ಜನವರಿ 8 ರಂದು ಸೋಮವಾರ ಬೆಳಿಗ್ಗೆ 10 ಗಂಟೆಗೆ ಎಂ.ಇ.ಎಸ್ ಎಂ.ಎಂ. ಕಲಾ ಮತ್ತು ವಿಜ್ಞಾನ ಕಾಲೇಜಿನ ಸಭಾಭವನದಲ್ಲಿ ಅಭ್ಯರ್ಥಿಗಳ ಆಯ್ಕೆಗಾಗಿ ಆಪ್ತ ಸಮಾಲೋಚನೆಯನ್ನು ಆಯೋಜಿಸಿದೆ.

ಕನಿಷ್ಟ ಯಾವುದೇ ಪದವಿ ಹೊಂದಿದವರಿಗೆ: 2020-2021,2021-2022 ಮತ್ತು 2022-2023 ಸಾಲಿನಲ್ಲಿ ಪದವಿ ಉತ್ತೀರ್ಣರಾಗಿ ಉದ್ಯೋಗ ಆಕಾಂಕ್ಷಿಯಾಗಿರುವ ಅಭ್ಯರ್ಥಿಗಳಿಗೆ ಬ್ಯಾಂಕಿಂಗ್, ಫೈಟ್ಸ್, ಇನ್ಸುರೆನ್ಸ್, ಹಣಕಾಸು ಹಾಗೂ ಸರ್ವಿಸ್ ಕ್ಷೇತ್ರ ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ಉದ್ಯೋಗಾವಕಾಶಗಳಿದ್ದು, ವಿವಿಧ ಹುದ್ದೆಗಳಿಗೆ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ.

300x250 AD

ಆಪ್ತ ಸಮಾಲೋಚನೆಯಲ್ಲಿ ಭಾಗವಹಿಸಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಶಿರಸಿಯ ಎಂ.ಇ.ಎಸ್. ಎಂ ಎಂ ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ ತರಬೇತಿಯನ್ನು ನೀಡಿ ಆಯ್ಕೆಯಾದ ಕ್ಷೇತ್ರಕ್ಕೆ ಅನುಗುಣವಾಗಿ ಶೇ.100 ಪ್ರತಿಶತ ಉದ್ಯೋಗಾವಕಾಶಕ್ಕೆ ಮಾರ್ಗದರ್ಶನ ನೀಡಲಾಗುತ್ತದೆ. ಹೆಸರನ್ನು ನೋಂದಣಿ ಮಾಡಿಕೊಳ್ಳಲು ಮತ್ತು ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ TEL:+918123605835 ಹಾಗೂ TEL:+917019344182 ಸಂಪರ್ಕಿಸಬಹುದಾಗಿದೆ.
ಅಭ್ಯರ್ಥಿಗಳು ಆಪ್ತ ಸಮಾಲೋಚನೆಗೆ ಈ ಕೆಳಗಿನ ಲಿಂಕ್ ಅನ್ನು ಬಳಸುವ ಮುಖಾಂತರ ರಿಜಿಸ್ಟ್ರೇಷನ್ ಮಾಡಿಕೊಳ್ಳಬಹುದು.
https://docs.google.com/forms/d/e/1FAIpQLSd0ipLczsSx2YfbHn19ism-M3unS2dl0IzD6J7ARxYpQCYG1g/viewform?usp=sf_link

Share This
300x250 AD
300x250 AD
300x250 AD
Back to top