ಹಳಿಯಾಳ: ಕೆಎಲ್ಎಸ್ ವಿಡಿಐಟಿ ಹಳಿಯಾಳದ ಕಂಪ್ಯೂಟರ್ ಸೈನ್ಸ್ ಮತ್ತು ಎಐ ಅಂಡ್ ಎಂಎಲ್ ವಿಭಾಗವು ಇತ್ತೀಚೆಗೆ ‘ಪೈಥಾನ್ ಯೂಸಿಂಗ್ ಜಂಗೋ’ ಎಂಬ ವಿಷಯದ ಮೇಲೆ ಒಂದು ದಿನದ ಪ್ರಾಯೋಗಿಕ ಕಾರ್ಯಗಾರವನ್ನು ಆಯೋಜಿಸಿತ್ತು .
ಸಂಪನ್ಮೂಲ ವ್ಯಕ್ತಿಗಳಾಗಿ ಈ ಕಾರ್ಯಕ್ರಮಕ್ಕೆ ಉದ್ಯಮಿ ಹಾಗೂ ಮಹಾವಿದ್ಯಾಲಯದ ಮಾಜಿ ವಿದ್ಯಾರ್ಥಿ ವಿನಯ್ ಹುಂಡೆಕರ್ ಆಗಮಿಸಿ,
ಸಾಫ್ಟ್ವೇರ್ ಕ್ಷೇತ್ರದ ರೂಪುರೇಷೆಯನ್ನು ಬದಲಿಸಿರುವ ಪೈಥಾನ್ ತಂತ್ರಾಂಶ ಬಳಸಿಕೊಂಡು ವೆಬ್ ಅಪ್ಲಿಕೇಶನ್ ಅಭಿವೃದ್ಧಿಪಡಿಸುವ ಕುರಿತು ವಿವರಿಸಿದರು. ಪೈಥಾನ್ ಜಂಗೋ ತಂತ್ರಾಂಶವು ಉಳಿದ ತಂತ್ರಾಂಶಗಳಿಗಿಂತ ಹೇಗೆ ವಿಭಿನ್ನ ಹಾಗೂ ದಕ್ಷ ಎಂದು ಪ್ರಾಯೋಗಿಕವಾಗಿ ವಿವರಿಸಿದರು. ವೆಬ್ ಡಿಸೈನ್ ಕ್ಷೇತ್ರದಲ್ಲಿ ಸಾಫ್ಟ್ವೇರ್ ಇಂಜಿನಿಯರ್ಸ್ ಗಳಿಗಿರುವ ಅವಕಾಶಗಳ ಕುರಿತು ತಿಳಿಸಿದರು.
ಕಂಪ್ಯೂಟರ್ ಸೈನ್ಸ್ ವಿಭಾಗದ ಮುಖ್ಯಸ್ಥ ಡಾ.ಶ್ರೀನಿವಾಸ ಸರ್ದೇಶಪಾಂಡೆ ಕಾರ್ಯಕ್ರಮದ ಪರಿಕಲ್ಪನೆ ನೀಡುತ್ತ ಸಭಿಕರನ್ನು ಸ್ವಾಗತಿಸಿದರು. ಎಐ ಅಂಡ್ ಎಂಎಲ್ ವಿಭಾಗದ ಮುಖ್ಯಸ್ಥ ಡಾ. ವೆಂಕಟೇಶ ಶಂಕರ್ ವಂದಿಸಿದರು. ಪ್ರೊ. ಜಯಶ್ರೀ ಇಂಚಲ್ ಮತ್ತು ಪ್ರೊ. ಫರಜಾನ ನದಾಫ್ ಕಾರ್ಯಕ್ರಮ ಸಂಯೋಜಿಸಿದ್ದರು. 120ಕ್ಕೂ ಅಧಿಕ ವಿದ್ಯಾರ್ಥಿಗಳು ಈ ಪ್ರಾಯೋಗಿಕ ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು. ಸಾಫ್ಟ್ವೇರ್ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ತಂತ್ರಾಂಶದ ಕುರಿತು ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವ ಉದ್ದೇಶದಿಂದ ಈ ಕಾರ್ಯಗಾರವನ್ನು ಹಮ್ಮಿಕೊಳ್ಳಲಾಗಿತ್ತು ಎಂದು ಪ್ರಾಚಾರ್ಯ ಡಾ. ವಿ ಎ ಕುಲಕರ್ಣಿ ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.