ಜೋಯಿಡಾ: ಪ್ರಧಾನ ಮಂತ್ರಿ ಉಜ್ವಲ್ ಯೋಜನೆಯಡಿಯಲ್ಲಿ ಉಚಿತ ಗ್ಯಾಸ್ ಸಂಪರ್ಕ ಪಡೆಯದೇ ಅವಕಾಶ ವಂಚಿತರಾಗಿರುವ ಬಿಪಿಎಲ್ ಕಾರ್ಡ್ ಹೊಂದಿದ ಮಹಿಳೆಯರಿಗೆ ಆನಲೈನ್ ಅರ್ಜಿ ಕರೆಯಲಾಗಿದೆ.
ಪಿಎಂ ಉಜ್ವಲ್ ಯೋಜನಾ 2023 ಯೋಜನೆಯಡಿಯಲ್ಲಿ ಅರ್ಹ ಮಹಿಳೆಯರಿಗೆ ಉಚಿತ ಗ್ಯಾಸ್ ಸಂಪರ್ಕ ಒದಗಿಸಲಾಗುತ್ತದೆ.ಮಾತ್ರವಲ್ಲ, ಎಲ್.ಪಿ.ಜಿ. ಸಂಪರ್ಕ ಜೊತೆಗೆ, 800 ರೂಪಾಯಿಗಿಂತ ಹೆಚ್ಚು ಮೌಲ್ಯದ ಉಚಿತ ರಿಫಿಲ್, ಉಚಿತ ಸ್ಟೌವ್ ಒದಗಿಸಲಾಗುತ್ತದೆ. ಸರ್ಕಾರ ಈಚೆಗೆ ಭಾರೀ ಪ್ರಮಾಣದ ಸಬ್ಸಿಡಿ ಕೂಡ ಘೋಷಣೆ ಮಾಡಿರುವುದರಿಂದ ಬಡ ಕುಟುಂಬಗಳಿಗೆ ಈ ಯೋಜನೆ ಬಹಳ ಉಪಯುಕ್ತವಾಗಿದ್ದು,ಅರ್ಹ ಮಹಿಳೆಯರು ತಕ್ಷಣ ಅರ್ಜಿ ಸಲ್ಲಿಸುವ ಮೂಲಕ ಯೋಜನೆಯ ಲಾಭ ಪಡೆಯಬೇಕೆಂದು ನಂದಿಗದ್ದೆ ಗ್ರಾಂ.ಪಂ ಸದಸ್ಯ ಧವಳೋ ಗಣೇಶ ಸಾವರ್ಕರ್ ವಿನಂತಿಸಿದ್ದಾರೆ.