Slide
Slide
Slide
previous arrow
next arrow

ಸೇಂಟ್ ಜೋಸೆಫ್ಸ್ ಹೈಸ್ಕೂಲ್ ವಿದ್ಯಾರ್ಥಿಗಳ ನೃತ್ಯ ಪ್ರದರ್ಶನಕ್ಕೆ ಮೆಚ್ಚುಗೆ

300x250 AD

ಕಾರವಾರ: ಜಿಲ್ಲಾ ಕೇಂದ್ರದ ಪೊಲೀಸ್ ಪರೇಡ್ ಮೈದಾನದಲ್ಲಿ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸೇಂಟ್ ಜೋಸೆಫ್ಸ್ ಹೈಸ್ಕೂಲ್ (ಅನುದಾನಿತ) ವಿದ್ಯಾರ್ಥಿಗಳಿಂದ ಅದ್ಭುತ ನೃತ್ಯ ಪ್ರದರ್ಶನ ನಡೆಯಿತು.

ಸುಮಾರು 100 ವಿದ್ಯಾರ್ಥಿಗಳ ಗುಂಪು ನೃತ್ಯದಲ್ಲಿ ‘ಹೆಸರಾಯಿತು ಕನ್ನಡ ಉಸಿರಾಗಲಿ ಕರ್ನಾಟಕ’ ಎಂಬ ಧ್ಯೇಯ ವಾಕ್ಯದೊಂದಿಗೆ ರಾಜ್ಯದಲ್ಲಿ ವೈಭವ ಮೆರೆದ ರಾಜ ಮಹಾರಾಜರುಗಳು, ವೀರ ವನಿತೆಯರು, ವೀರ ಮಣಿಗಳು, ಕನ್ನಡಕ್ಕೆ ಮೆರಗನ್ನು ತಂದುಕೊಟ್ಟಂತಹ ಜ್ಞಾನಪೀಠ ಪುರಸ್ಕೃತರು ಇತ್ಯಾದಿ ವೈಭವಗಳನ್ನ ಬಿಂಬಿಸುವ ನೃತ್ಯ ನೆರೆದ ಎಲ್ಲ ಕನ್ನಡ ಅಭಿಮಾನಿಗಳ ಮನಸೂರೆಗೊಳಿಸಿತು.

300x250 AD

ಸಮಸ್ತರನ್ನು ನಾಡಿನ ಅಭಿಮಾನದಲ್ಲಿ ತೇಲುವಂತೆ ಮಾಡಿತು. ನೃತ್ಯ ಪರಿಕಲ್ಪನೆ ಶಾಲಾ ಶಿಕ್ಷಕರಾದ ಪ್ರಕಾಶ ಕುರಿಯನ್ ಅವರದಾಗಿತ್ತು. ಜಿಲ್ಲಾ ಉಸ್ತುವಾರಿ ಸಚಿವರಾದ ಮಂಕಾಳ ವೈದ್ಯ ಪಾರಿತೋಷಕ ವಿತರಿಸಿದರು. ನೃತ್ಯ ತಂಡ ಹಾಗೂ ಸಹಕರಿದವರೆಲ್ಲರನ್ನು ಶಾಲಾ ಆಡಳಿತ ಮಂಡಳಿ, ಶಾಲಾ ಮುಖ್ಯಾಧ್ಯಾಪಕ ರೆ.ಫಾ.ಜೊನ್ ವಿಲ್ಸನ್, ಭೋಧಕ- ಭೋಧಕೇತರ ವರ್ಗದವರು ಅಭಿನಂದಿಸಿದ್ದಾರೆ.

Share This
300x250 AD
300x250 AD
300x250 AD
Back to top