ಹೊನ್ನಾವರ: ಮಂಕಿಯ ಪಟ್ಟಣ ಪಂಚಾಯತ ಎದುರುಗಡೆ ನೂತನವಾಗಿ ಆರಂಭಗೊಂಡ ಕರ್ನಾಟಕ ಒನ್ ಸೇವಾ ಕೇಂದ್ರವನ್ನು ತಹಶೀಲ್ದಾರ ರವಿರಾಜ ದೀಕ್ಷಿತ್ ಉದ್ಘಾಟಿಸಿದರು.
ನಂತರ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷಿ ಯೋಜನೆಯ ಫಲಾನುಭವಿಗಳಿಗೆ ಮಂಜೂರಾತಿ ಪತ್ರ ವಿತರಿಸಿದರು. ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತ ಮುಖ್ಯಾಧಿಕಾರಿ ಎಚ್.ಅಕ್ಷತಾ, ಉಪತಹಸಿಲ್ದಾರು, ಕಂದಾಯ ನೀರಿಕ್ಷಕರು, ಗ್ರಾಮ ಲೇಕ್ಕಾಧಿಕಾರಿ, ಪಟ್ಟಣ ಪಂಚಾಯತ ಸಿಬ್ಬಂದಿಗಳು ಹಾಗೂ ಸಾರ್ವಜನಿಕರು, ಕೇಂದ್ರದ ಮುಖ್ಯಸ್ಥರಾದ ಉಷಾ ನಾಯ್ಕ ಉಪಸ್ಥಿತರಿದ್ದರು.