Slide
Slide
Slide
previous arrow
next arrow

ರಾಜ್ಯೋತ್ಸವದ ನಿಮಿತ್ತ ಆಶ್ರಮವಾಸಿಗಳಿಗೆ ಊಟದ ವ್ಯವಸ್ಥೆ

300x250 AD

ಅಂಕೋಲಾ: ಕರ್ನಾಟಕ ರಕ್ಷಣಾ ವೇದಿಕೆಯ ಮಹಿಳಾ ಜಿಲ್ಲಾಧ್ಯಕ್ಷೆ ಸುಜಾತಾ ಗಾಂವಕರ ನೇತೃತ್ವದಲ್ಲಿ ಕರ್ನಾಟಕ ರಾಜ್ಯೋತ್ಸವದ ನಿಮಿತ್ತ ಪಟ್ಟಣದ ಅಜ್ಜಿಕಟ್ಟಾದಲ್ಲಿರುವ ಕ್ರೈಸ್ತಮಿತ್ರ ಆಶ್ರಮವಾಸಿಗಳಿಗೆ ಬಿರಿಯಾನಿ ನೀಡಿದರು. ನಂತರ ಅವರು ಮಾತನಾಡಿ, ಕರ್ನಾಟಕ ರಾಜ್ಯೋತ್ಸವದ ನಿಮಿತ್ತ ಕಳೆದ ಹಲವು ವರ್ಷಗಳಿಂದ ನಿರಂತರವಾಗಿ ಆಶ್ರಮವಾಸಿಗಳಿಗೆ ಊಟ ನೀಡುತ್ತ ಬಂದಿದ್ದೇವೆ. ಇದನ್ನು ಮುಂದುವರೆಸಿಕೊಂಡು ಹೋಗಲಾಗುವುದು ಎಂದರು.

ಈ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ತಾಲೂಕು ಅಧ್ಯಕ್ಷ ಉದಯಕುಮಾರ ನಾಯ್ಕ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಂಜುನಾಥ ನಾಯ್ಕ, ಪ್ರಮುಖರಾದ ನಾಗಪ್ಪ ನಾಯ್ಕ, ಪಾಂಡು ನಾಯ್ಕ, ಮೋನಪ್ಪ ನಾಯ್ಕ, ಆಶಿಫ್ ಮುಜಾವರ್, ತಹಸೀಲ್ದಾರ್ ಬಿ.ಜಿ.ಕುಲಕರ್ಣಿ, ಶಿಕ್ಷಣಾಧಿಕಾರಿ ಮಂಗಳಲಕ್ಷ್ಮೀ ಪಾಟೀಲ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಜಗದೀಶ ಜಿ. ನಾಯಕ ಹೊಸ್ಕೇರಿ ಇತರರು ಉಪಸ್ಥಿತರಿದ್ದರು.

300x250 AD
Share This
300x250 AD
300x250 AD
300x250 AD
Back to top