ಯಲ್ಲಾಪುರ: ವಜ್ರಳ್ಳಿ ಗ್ರಾ.ಪಂ ವ್ಯಾಪ್ತಿಯ ಅಂಬಗಾಂವ ಕಂಚಿಮನೆಯ ಯೋಗ ಸಾಧಕ ಸಜ್ಜನ ಶಿವರಾಮ ಗಾಂವ್ಕರ ಕಂಚೀಮನೆ ಅವರು ಶುಕ್ರವಾರ ಬೆಳಿಗ್ಗೆ ನಿಧನರಾದರು.
ಅದ್ಭುತ ಯೋಗಾಸನ ಪಟುವಾಗಿ ಜಿಲ್ಲೆಯಲ್ಲಿ ಹೆಸರಾಗಿದ್ದ ಅವರು, ಹಲವಾರು ಜನ ಆಸಕ್ತರಿಗೆ ಯೋಗ ತರಬೇತಿ ನೀಡಿದ್ದರು. ಇವರ ಸರಳತೆ ಸಜ್ಜನಿಕೆ ಸಮಾಜಕ್ಕೆ ಮಾದರಿಯಾಗಿತ್ತು. ತಾಲೂಕಿನ ಹಿರಿಯ ಯೋಗ ಸಾಧಕರಾಗಿದ್ದ ಇವರ ಯೋಗ ಸಾಧನೆಯ ಕುರಿತು ಅನೇಕ ಪತ್ರಿಕೆಯಲ್ಲಿ ವರದಿ ಪ್ರಕಟವಾಗಿದ್ದವು. ಅವರಿಗೆ 92 ವರ್ಷ ವಯಸ್ಸಾಗಿತ್ತು. ದಿವಂಗತರು ನಾಲ್ವರು ಪುತ್ರರು, ಇಬ್ಬರು ಪುತ್ರಿಯರು ಹಾಗೂ ಅಪಾರ ಬಂದು ಬಳಗವನ್ನು ಅಗಲಿದ್ದಾರೆ.
ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ನಿವೃತ್ತ ಶಿಕ್ಷಕ ಡಿ.ಜಿ.ಭಟ್ಟ, ಆರ್.ಜಿ.ಭಟ್ಟ , ಟಿ.ಸಿ.ಗಾಂವ್ಕರ್, ಪಿಎಲ್ಡಿ ಬ್ಯಾಂಕ್ ಸದಸ್ಯ ಎನ್.ಸಿ.ಗಾಂವ್ಕರ್, ಸಾಹಿತಿ ವನರಾಗಶರ್ಮ, ಜಿ.ಎಸ್.ಗಾಂವ್ಕರ್, ರವಿ ಭಟ್ ಹೊನ್ನಗದ್ದೆ ಮುಂತಾದವರು ಭಗವನತನಲ್ಲಿ ಪ್ರಾರ್ಥಿಸುವುದಾಗಿ ತಿಳಿಸಿದ್ದಾರೆ.