Slide
Slide
Slide
previous arrow
next arrow

ಅ.21, 22ಕ್ಕೆ ಶಿರಾಲಿಯಲ್ಲಿ ಕಥಾಕಮ್ಮಟ

300x250 AD

ಭಟ್ಕಳ: ವೀರಲೋಕ ಪ್ರಕಾಶನ ಬೆಂಗಳೂರು, ಭಟ್ಕಳ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಡಾ.ಸಯ್ಯದ್ ಜಮೀರುಲ್ಲಾ ಷರೀಫ್ ಸಾಹಿತ್ಯ ಪ್ರತಿಷ್ಠಾನದ ಸಹಯೋಗದಲ್ಲಿ ಅ.21 ಮತ್ತು 22ರಂದು ಇಲ್ಲಿನ ಶಿರಾಲಿಯ ಜನತಾ ವಿದ್ಯಾಲಯದಲ್ಲಿ ಜಿಲ್ಲಾ ಮಟ್ಟದ ಕಥಾ ಕಮ್ಮಟ ನಡೆಯಲಿದೆ.

ಆಸಕ್ತ 30 ಶಿಬಿರಾರ್ಥಿಗಳಿಗೆ ಮಾತ್ರ ಕಮ್ಮಟದಲ್ಲಿ ಭಾಗವಹಿಸಲು ಅವಕಾಶವಿದ್ದು, ಮೊದಲು ಹೆಸರು ನೋಂದಾಯಿಸಿದ ಆಸಕ್ತರಿಗೆ ಅವಕಾಶ ಕಲ್ಪಿಸಲಾಗುವುದು. ಎರಡು ದಿನಗಳ ಕಾಲ ನಡೆಯುವ ಕಮ್ಮಟದಲ್ಲಿ ಭಾಗವಹಿಸುವವರಿಗೆ ಊಟ ಮತ್ತು ವಸತಿ ವ್ಯವಸ್ಥೆಯನ್ನು ಕಲ್ಪಿಸಲಾಗುವುದು.

ಹಿರಿಯ ಕಥೆಗಾರ ಶ್ರೀಧರ ಬಳಿಗಾರ ಅವರ ಮಾರ್ಗದರ್ಶನದಲ್ಲಿ ಕಥಾಕಮ್ಮಟ ನಡೆಯಲಿದ್ದು ನಾಡಿನ ಪ್ರಮುಖ ಕಥೆಗಾರರು ಭಾಗವಹಿಸಿ ಕಥೆ ಕಟ್ಟುವಿಕೆ ಮತ್ತು ಅದರ ಸೂಕ್ಷ್ಮತೆಗಳ ಕುರಿತು ಅವಲೋಕಿಸುವರಲ್ಲದೇ ಶಿಬಿರಾರ್ಥಿಗಳೊಂದಿಗೆ ಸಂವಾದ ನಡೆಸಲಿದ್ದಾರೆ ಎಂದು ಕಮ್ಮಟದ ಜಿಲ್ಲಾ ಸಂಚಾಲಕರಾದ ಸಾಹಿತಿ ಡಾ.ಸೈಯ್ಯದ್ ಜಮೀರುಲ್ಲಾ ಷರೀಫ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

300x250 AD

ಕಥಾ ಕಮ್ಮಟದಲ್ಲಿ ಭಾಗವಹಿಸಲು ಆಸಕ್ತರು ವೀರಲೋಕ ಬುಕ್.ಕಾಮ್ ಜಾಲತಾಣದಿಂದ ಅರ್ಜಿಯನ್ನು  ಡೌನಲೋಡ್ ಮಾಡಿಕೊಂಡು ಅ.15ರ ಒಳಗೆ +919448007703 ನಂಬರಿಗೆ ವಾಟ್ಸಪ್ ಮೂಲಕ ಕಳಿಸುವಂತೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ +9199002426956 / +918310093198 / +919141111611 ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸುವಂತೆ ಕೋರಿದ್ದಾರೆ.

Share This
300x250 AD
300x250 AD
300x250 AD
Back to top