ಕಾರವಾರ: ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಸ್ಥಳೀಯ ಎಂಪಿಇ ಸೊಸೈಟಿಯ ಎಸ್‌ಡಿಎಂ ಪದವಿ ಮಹಾವಿದ್ಯಾಲಯದ ಸಂಯುಕ್ತ ಆಶ್ರಯದಲ್ಲಿ ರಾಜ್ಯದ 71ನೇ ಐಪಿ ಸೆಲ್‌ನ ಉದ್ಘಾಟನೆಯನ್ನು ಕೆಎಸ್‌ಸಿಎಸ್‌ಟಿ ಸಂಸ್ಥೆಯ ಕಾರ್ಯದರ್ಶಿ ಡಾ.ಯು.ಟಿ.ವಿಜಯ ನೆರವೇರಿಸಿದರು.
ಆಡಳಿತ ಮಂಡಳಿಯ ಅಧ್ಯಕ್ಷ ಕೃಷ್ಣಮೂರ್ತಿ ಭಟ್ಟ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕೆಎಸ್‌ಸಿಎಸ್‌ಟಿ ಸಂಸ್ಥೆಯ ಸಹಯೋಜನಾಧಿಕಾರಿಗಳಾದ ನಾಗಾರ್ಜುನ್ ಹಾಗೂ ಪ್ರಿಯಾಂಕಾ ಅವರು ಐಪಿಆರ್ ಹಾಗೂ ಪೇಟೆಂಟ್ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.
ಕಾರವಾರದ ಎನ್‌ಆರ್‌ಡಿಎಂಎಸ್ ತಾಂತ್ರಿಕಾಧಿಕಾರಿ ಅನಿಲ್ ಆರ್.ನಾಯ್ಕ, ಐಪಿ ಘಟಕದ ಕುರಿತು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಹೊನ್ನಾವರ ಪ್ರಾಚಾರ್ಯ ಡಾ.ಪಿ.ಎಂ. ಸ್ವಾಗತಿಸಿದರು. ಐಕ್ಯೂಎಸಿ ಸಂಯೋಜಕ ಡಾ.ಎಸ್.ಸುರೇಶ ವಂದಿಸಿದರು. ಉಪನ್ಯಾಸಕಿ ವೆಲೆನ್‌ಸ್ಟಿಯಾ ಡಿಸೋಜಾ ನಿರ್ವಹಿಸಿದರು. ಎಂಪಿಇ ಸಂಸ್ಥೆಯ ಕಾರ್ಯದರ್ಶಿ ಎಸ್.ಎಂ.ಭಟ್ಟ, ಜಂಟಿ ಕಾರ್ಯದರ್ಶಿ ಜಿ.ಪಿ.ಹೆಗಡೆ, ಡಾ.ಶಿವರಾಮ ಶಾಸ್ತ್ರಿ, ಸಿಇಓ ಕಿರಣ್ ಕುಡ್ತಲ್ಕರ್, ಪದವಿ ಕಾಲೇಜಿನ ವಿಜ್ಞಾನ ವಿಭಾಗದ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.