Slide
Slide
Slide
previous arrow
next arrow

ಶೋಭಾ ಭಟ್‌ರ ಪಂಚಮ ಸ್ವರ ಕವನ ಸಂಕಲನ ಲೋಕಾರ್ಪಣೆ

300x250 AD

ಶಿರಸಿ: ಪಂಚಮದಲ್ಲಿ ಕೋಗಿಲೆ ಇಂಪಾಗಿ ಹಾಡಿ ಜೀವಾತ್ಮ ಪರಮಾತ್ಮನನ್ನು ಸೇರುವಲ್ಲಿ ಸಂಭ್ರಮಿಸುತ್ತದೆ. ಇದು ಹೊಟ್ಟೆಯ ಹಸಿವಿಗಾಗಿ, ಸಂಗಾತಿಯ ಮಿಲನಕ್ಕಾಗಿ ತಹತಹಿಕೆ ಇರಬಹುದು, ತತ್ವಜ್ಞಾನ ಆಧ್ಯಾತ್ಮಿಕತೆಯ ಸೌಂದರ್ಯವನ್ನು ಅನುಭವಿಸುವುದರ ಸಲುವಾಗಿನ ಹಪಾಹಪಿ ಇರಬಹುದಾಗಿದೆ. ಈ ಪಂಚಮ ಸ್ವರ ಕವನ ಸಂಕಲನ ನವೋದಯ ಕಾಲದ ಶೈಲಿ, ಸೂಕ್ಷ್ಮತೆಯನ್ನು ಅಳವಡಿಸಿಕೊಂಡ ಸುಂದರ ಕವನಗಳ ಗುಚ್ಛವಾಗಿದೆ ಎಂದು ಕತೆಗಾರ್ತಿ, ಕವಯತ್ರಿ, ಹಿರಿಯ ಸಾಹಿತಿ ಭಾಗೀರಥಿ ಹೆಗಡೆ ಹೇಳಿದರು.

ಸಾಹಿತ್ಯ ಸಂಚಲನದ ಆಶ್ರಯದಲ್ಲಿ ಕಾರ್ಯಕ್ರಮವನ್ನು ದೀಪ ಬೆಳಗಿಸಿ ವಿದ್ಯುಕ್ತವಾಗಿ ಉದ್ಘಾಟಿಸಿ ಕವಯಿತ್ರಿ ಶೋಭಾ ಭಟ್ ಅವರ ಪಂಚಮ ಸ್ವರ ಕವನ ಸಂಕಲನವನ್ನು ಲೋಕಾರ್ಪಣೆ ಮಾಡಿ ಅವರು ಮಾತನಾಡುತ್ತಿದ್ದರು.

ಅಧ್ಯಕ್ಷೀಯ ಭಾಷಣದಲ್ಲಿ ನಿವೃತ್ತ ಬ್ಯಾಂಕ್ ಉದ್ಯೋಗಿ ವಿಶ್ವನಾಥ ಭಟ್ಟರು ‘ಪಂಚಮ ಸ್ವರ’ ಲೋಕಾರ್ಪಣೆಯಿಂದ ಶೋಭಾಳ ಸಂಭ್ರಮ ಮುಗಿಲು ಮುಟ್ಟಿದೆ. ಸಡಗರ ಇಮ್ಮಡಿಗೊಂಡಿದೆ. ಆಲೋಚನೆ, ಭಾವನೆಗಳು ಶಬ್ಧಗಳಿಂದ ಅಲಂಕೃತವಾಗಿವೆ. ಸಾಹಿತಿಗಳು, ಕವಿಗಳು ನಿಜವಾದ ಅರ್ಥದಲ್ಲಿ ಶಬ್ಧಬ್ರಹ್ಮರು. ‘ಮಾಸ್ಕೊ ಅಬ್ರಾಮ’ ಹೇಳಿರುವಂತೆ ಮನುಷ್ಯ ಹಂತ ಹಂತವಾಗಿ ತನ್ನ ಅವಶ್ಯಕತೆಗಳನ್ನು ಪೂರೈಸಿಕೊಳ್ಳಬೇಕು. ಇದರಲ್ಲಿ ಪ್ರಾಥಮಿಕತೆ, ಬದ್ಧತೆ, ಭಾವನಾತ್ಮಕ ಸಂಬಂಧ, ತನ್ನನ್ನು ಗುರುತಿಸಿ ಗೌರವಿಸಿಕೊಳ್ಳುವುದು ಅವಶ್ಯ. ಕೊನೆಗೆ ಶಕ್ತಿಯ ಪರಮಾವಧಿಗೆ ಮುಟ್ಟಿ ಆತ್ಮಸಂತೋಷವನ್ನು ಅನುಭವಿಸುವುದು. ಆತ್ಮವಿಶ್ವಾಸವನ್ನು ಬೆಳೆಸಿ, ಹೆಚ್ಚಿಸಿಕೊಂಡಾಗ ಸ್ಪರ್ಧಾತ್ಮಕ ಮನೋಭಾವ ಮುಪ್ಪುರಿಗೊಳ್ಳುತ್ತದೆ. ಆನಂದ, ಶಾಂತಿ, ನೆಮ್ಮದಿ, ಲವಲವಿಕೆ ಪ್ರಾಪ್ತವಾಗುತ್ತದೆ. ಆತ್ಮ ತೃಪ್ತಿಗೆ ಕಾರಣವಾಗುತ್ತದೆ. ಬದುಕಿನ ಸಾಮರ್ಥ್ಯ ಜೀವನದ ಸೌಂದರ್ಯದ ಕುರಿತಾಗಿ ಮನಮುಟ್ಟುವಂತೆ ಮಾತನಾಡಿದರು.

300x250 AD

ಕವಯತ್ರಿ ಯಶಸ್ವಿನಿ ಶ್ರೀಧರ ಮೂರ್ತಿ ಕೃತಿ ಪರಿಚಯಿಸಿ ಒಳಹೂರಣಗಳನ್ನು ಎಳೆ ಎಳೆಯಾಗಿ ತೆರೆದಿಟ್ಟು ಸುಂದರವಾಗಿ ವಿವರಿಸಿದರು. ಗೌರವ ಅತಿಥಿಗಳಾಗಿ ಉಪಸ್ಥಿತರಿದ್ದ ಅನಂತ ತಾಮ್ಹನಕರ ಕವಯಿತ್ರಿಗೆ ಶುಭಕೋರಿ ‘ಹೊತ್ತು ಮುಳುಗಿದರೇನು ಮತ್ತೆ ಬಾರದು ಸಮಯ..’ ಎಂಬ ಹಾಡನ್ನು ಶಾಸ್ತ್ರೀಯವಾಗಿ ಸುಶ್ರಾವ್ಯವಾಗಿ ಹಾಡಿ ಸಂಗೀತ ಪ್ರೇಮಿಗಳನ್ನು ರಂಜಿಸಿದರು. ಹಾಗೆ ಸಾಹಿತ್ಯ ಬದುಕಿನಲ್ಲಿನ ಸಿಹಿ ಕಹಿಯನ್ನು ಹಂಚಿಕೊಂಡರು. ಸಂಚಲನದ ಸಂಚಾಲಕ ಕೃಷ್ಣ ಪದಕಿ ಹಾಗೂ ಕೃತಿಗಾರ್ತಿ ಶೋಭಾ ಭಟ್ ಸಾಂದರ್ಭಿಕವಾಗಿ ಮಾತನಾಡಿದರು.

ಕಾರ್ಯಕ್ರಮವು ಕವಯತ್ರಿ ಗಂಗಾ ಹೆಗಡೆ ದೇವಿಸರ ಅವರ ಪ್ರಾರ್ಥನೆಯಿಂದ ಆರಂಭವಾಯಿತು. ಚಿಂತಕ ಅರ್ಥದಾರಿ ಗಣಪತಿ ಭಟ್, ವರ್ಗಾಸರ ಎಲ್ಲರನ್ನು ಸ್ವಾಗತಿಸಿ ಪರಿಚಯಿಸಿದರು. ಕವಯಿತ್ರಿ ರೇಣುಕಾ ಪಂಚಮ ಸ್ವರದ ಗೀತೆಯನ್ನು ಪ್ರಸ್ತುತಪಡಿಸಿದರು. ಶೋಭಾ ದಂಪತಿಗಳನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು. ಪ್ರೊ.ಡಿ.ಎಮ್.ಭಟ್ ಕುಳವೆ ಎಲ್ಲರನ್ನು ವಂದಿಸಿದರು. ಕವಯಿತ್ರಿ ದಾಕ್ಷಾಯಿಣಿ ಪಿ.ಸಿ.ಯವರು ಕಾರ್ಯಕ್ರಮದ ನಿರೂಪಣೆಯನ್ನು ಅತ್ಯಂತ ಅಚ್ಚುಕಟ್ಟಾಗಿ ಅರ್ಥಪೂರ್ಣವಾಗಿ ನೆರವೇರಿಸಿದರು.

Share This
300x250 AD
300x250 AD
300x250 AD
Back to top