ಹಳಿಯಾಳ: ತಾಲೂಕಿನ ಹುಣಸವಾಡ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿಯರು ಜೋಯಿಡಾ ತಾಲೂಕಿನ ರಾಮನಗರದಲ್ಲಿ ನಡೆದ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳ ಜಿಲ್ಲಾ ಮಟ್ಟದ ಖೋ ಖೋ ಆಟದಲ್ಲಿ ಪ್ರಥಮ ಸ್ಥಾನ ಪಡೆದು ರಾಮದುರ್ಗದಲ್ಲಿ ನಡೆಯುವ ಬೆಳಗಾವಿ ವಿಭಾಗ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ತೇಜಶ್ವಿನಿ ಉದಯ ಮಿರಾಶಿ, ಭಾರತಾ ಶಂಕರ ಕಲಘಟಕರ, ಪ್ರೀಯಾಂಕಾ ಶಂಭಾಜಿ ಉಮ್ಮನ್ನವರ, ರೇಣುಕಾ ದೀನಕರ ಕಶೀಲಕರ, ಲಕ್ಮ್ಮೀ ಸಂಜು ಮಡಿವಾಳ, ದ್ರಾಕ್ಷಾಯಿಣಿ ನಾರಾಯಣ ಭಂಡಾರಿ, ಐಶ್ವರ್ಯಾ ಭರತ ಕಶೀಲಕರ, ಗಾಯತ್ರಿ ಶಿವಾಜಿ ಭಂಡಾರಿ ಹಾಗೂ ನಾಗವೇಣಿ ಬಸವರಾಜ ಕಮ್ಮಾರ ಈ ವಿದ್ಯಾರ್ಥಿಗಳ ತಂಡ ದೈಹಿಕ ಶಿಕ್ಷಕರಾದ ಸಂಗಪ್ಪ ಎಮ್ ದೊಡ್ಡಮನಿ, ಶಾಲೆಯ ಹಳೆಯ ವಿದ್ಯಾರ್ಥಿಗಳಾದ ಜ್ಯೋತಿಬಾ ದುಸಗೇಕರ ಹಾಗೂ ಮೋಹನ ಮುಳ್ಳೋರಿ ಅವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳ ಕಠಿಣ ಪರಿಶ್ರಮದ ಫಲವಾಗಿ ಜಯ ಸಾಧಿಸಿದ್ದಾರೆ.
ವಿದ್ಯಾರ್ಥಿಗಳ ಜಯಕ್ಕೆ ಶಾಲೆಯ ಮುಖ್ಯೋಪಾಧ್ಯಾಯ ಪಿ.ಕೆ.ಮಾಂಗಜಿ, ಎಸ್‌ಡಿಎಮ್‌ಸಿ ಅಧ್ಯಕ್ಷ ರವಿದಾಸ ಚಿಬ್ಬುಲಕರ, ತಂಡದ ವ್ಯವಸ್ಥಾಪಕ ಗೋಪಾಲ ಪಿ.ತೋರ್ಲೆಕರ, ಶಾಲೆಯ ಶಿಕ್ಷಕರು ಹಾಗೂ ಊರಿನ ಗಣ್ಯರು ಹರ್ಷ ವ್ಯಕ್ತಪಡಿಸಿದ್ದಾರೆ