ಶಿರಸಿ: ಭಾರತವನ್ನು ಅರ್ಥಮಾಡಿಕೊಳ್ಳದೇ, ಭಾರತದ ಸಂವಿಧಾನ ಅರ್ಥಮಾಡಿಕೊಳ್ಳಲಾಗದು. ಪ್ರಪಂಚದಲ್ಲಿ ಭಾರತದ ಸಂವಿಧಾನ ವೈಶಿಷ್ಟ ಪೂರ್ಣವಾಗಿದ್ದು, ಸಂವಿಧಾನ ಅರ್ಥಮಾಡಿಕೊಂಡು ದೇಶದ ಪ್ರತಿಯೊಬ್ಬ ಪ್ರಜೆಯು ನಡೆದುಕೊಳ್ಳಬೇಕೆಂದು ವಿಶ್ರಾಂತ ನ್ಯಾಯಮೂರ್ತಿ ಹೆಚ್.ಎನ್.ನಾಹಮೋಹನದಾಸ ಹೇಳಿದರು.
ಅವರು ಸಂವಿಧಾನ ಓದು ಅಭಿಯಾನದ ಎರಡು ದಿನದ ಉತ್ತರಕನ್ನಡ ಜಿಲ್ಲಾ ಮಟ್ಟದ ಕಾರ್ಯಗಾರದಲ್ಲಿ ಮಾತನಾಡಿದರು. ದೇಶದ ನೆಲ, ಜಲ, ಸಂಸ್ಕçತಿ, ಸಂಪ್ರದಾಯದ ಆಧಾರದ ಮೇಲೆ ಭಾರತದ ಸಂವಿಧಾನದಲ್ಲಿನ ತತ್ವ ಸಿದ್ಧಾಂತ ರಚಿತವಾಗಿದೆ. ಭಾಷೆ, ನೆಲ, ಜಲ, ಧರ್ಮದ ಆಧಾರಿತವಾಗಿ ವ್ಯಾಖ್ಯ, ಮಾರ್ಗ ಮತ್ತು ಪ್ರಾದೇಶಿಕ ಸಂಘರ್ಷ ಜರಗುತ್ತಿರುವುದು ವಿಷಾದಕರ. ಸಂವಿಧಾನ ಅಡಿಯಲ್ಲಿ ಶ್ವೆಚ್ಛಾಚಾರ, ಸರ್ವಾಧಿಕಾರ ಮತ್ತು ಕಾನೂನು ಬಾಹಿರ ಕೃತ್ಯಕ್ಕೆ ಅವಕಾಶವಿಲ್ಲ. ದೇಶದ ಮೌಲ್ಯ ಸಂವಿಧಾನದ ಆಶಯದಲ್ಲಿದೆ ಎಂದು ಅವರು ಹೇಳಿದರು.
ಎರಡು ದಿನದ ಶಿಬಿರದ ಸಮಾರೋಪ ಸಮಾರಂಭದ ಭಾಷಣವನ್ನು ಬಂಧು ವೇದಿಕೆಯ ಸಂಚಾಲಕ ಹಾಗೂ ಉಚ್ಛ ನ್ಯಾಯಾಲಯದ ನ್ಯಾಯವಾದಿ ಅನೀಲ ನಾಯ್ಕ ಮಾಡಿದರು. ಕಾರ್ಯಕ್ರಮದಲ್ಲಿ ಹಿರಿಯ ವಕೀಲ ರವೀಂದ್ರ ನಾಯ್ಕ ಉಪಸ್ಥಿತರಿದ್ದರು. ಶ್ಯಾಮಸನ್ ದಾಂಡೇಲಿಸಿದರು. ಹಿರಿಯ ವಂದಿಸಿದರು. ವಕೀಲ ಕೆ.ಹೆಚ್ ಪಾಟೀಲ್ ಧಾರವಾಡ ನಿರ್ವಹಿಸಿದರು. ವೇದಿಕೆಯ ಮೇಲೆ ರಾಜಶೇಖರ್, ರುದ್ರಪ್ಪ ಹಾವೇರಿ, ಅನಿಲ್ ಪಾಟೀಲ್ ಬೆಂಗಳೂರು, ಕರ್ನಾಟಕ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ.ಎನ್.ವಾಸರೆ ಉಪಸ್ಥಿತರಿದ್ದರು. ಶಿಬಿರಾರ್ಥಿಗಳಿಂದ ವಿಶ್ರಾಂತ ನ್ಯಾಯಮೂರ್ತಿ ಹೆಚ್ ಎನ್ ನಾಹಮೋಹನದಾಸ್ ಅವರಿಗೆ ಗೌರವಪೂರ್ವಕವಾಗಿ ಅಭಿನಂದಿಸಲಾಯಿತು.
ಸ0ವಾದ:
ದೇಶದ ಸಂವಿಧಾನದ ಚ್ಯುತಿ, ಮೂಲಭೂತ ಹಕ್ಕಿನ ವಂಚನೆ, ದೇಶದ ಸಂವಿಧಾನದ ತತ್ವ ಸಿದ್ಧಾಂತದ ತಿದ್ದುಪಡಿ ಮುಂತಾದ ವಿಷಯದ ಕುರಿತು ಶಿಬಿರಾರ್ಥಿಗಳು ಪ್ರಶ್ನಿಸುವ ಮೂಲಕ ಸಂವಾದ ಏರ್ಪಡಿಸಲಾಗಿರುವುದು ಕಾರ್ಯಗಾರದ ವಿಶೇಷವಾಗಿತ್ತು.