ಯಲ್ಲಾಪುರ: ಪಟ್ಟಣದ ಯಲ್ಲಾಪುರ ವಿವಿದೋದ್ದೇಶ ಪ್ರಾಥಮಿಕ ಕೃಷಿ ಸಹಕಾರಿ ಸಂಘ (ಎಲ್.ಎಸ್.ಎಂ.ಪಿ ಸೊಸೈಟಿ) ರೈತರ ಅಗತ್ಯತೆಗಳನ್ನು ಪೂರೈಸುತ್ತಿದ್ದು, 73 ನೇ ವರ್ಷದಲ್ಲಿ ಕಾಲಿಡುವ ಮೂಲಕ ತಾಲೂಕಿನ ಅತ್ಯುತ್ತಮ ಸಹಕಾರಿ ಸಂಘವಾಗಿ ಕಾರ್ಯ ನಿರ್ವಹಿಸುತ್ತಿದೆ. ತಾಲೂಕಿನ ಟಿ.ಎಂ.ಎಸ್. ಸಂಸ್ಥೆಯಲ್ಲಿ ಸಂಘದ ಮೂಲಕ ಅತೀ ಹೆಚ್ಚು ಅಡಿಕೆ ವಿಕ್ರಿ ಮಾಡಿದ್ದು, ಟಿ.ಎಂ.ಎಸ್. ಸಂಸ್ಥೆಯಿAದ 30 ಸಾವಿರ ಬಹುಮಾನ ಪಡೆದು ಗೌರವಕ್ಕೆ ಪಾತ್ರವಾಗಿದೆ. ಕಳೆದ 2022-23 ನೆ ಆರ್ಥಿಕ ವರ್ಷದಲ್ಲಿ ಸಂಘವು 39.39 ಲಕ್ಷ ರೂ. ನಿವ್ವಳ ಳಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ನಾಗರಾಜ ಕೌಡಿಕೇರಿ ಹೇಳಿದರು.
ಪಟ್ಟಣದ ಸಂಘದ ಕಚೇರಿಯಲ್ಲಿ ಶನಿವಾರ ಪತ್ರಿಕಾ ಗೋಷ್ಠಿಯಲ್ಲಿ ಸಂಘದ ಪ್ರಗತಿಯ ಕುರಿತು ಅವರು ಮಾಹಿತಿ ನೀಡಿದರು. ಸಂಘವು 3.45 ಕೋಟಿ ಶೇರು ಭಂಡವಾಲು ಹೊಂದಿದ್ದು, 33.43 ಕೋಟಿ ರೂ. ಠೇವಣಿ ಹೊಂದಿದೆ. 42.11 ಕೋಟಿ ರೂ. ಸಾಲ ವಿತರಿಸಲಾಗಿದೆ. 74.10 ಲಕ್ಷ ರೂ. ಕಾಯ್ದಿಟ್ಟ ನಿಧಿ ಇರುತ್ತಿದ್ದು, 1.83 ಕೋಟಿ ರೂ. ಇತರ ನಿಧಿಗಳನ್ನು ಹೊಂದಿದೆ. ಸದಸ್ಯರಿಗೆ ಶೇ. 6% ಲಾಭಾಂಶ ವಿತರಿಸಲು ಸಂಘದ ಆಡಳಿತ ಮಂಡಳಿ ನಿರ್ಧರಿಸಿದ್ದು, ವಾರ್ಷಿಕ ಮಹಾಸಭೆಗೆ ಪ್ರಸ್ತಾವನೆ ಸಲ್ಲಿದಲಿದೆ. ಸ. 25 ರಂದು ಮದ್ಯಾಹ್ನ 3 ಗಂಟೆಯಿAದ ಹುಲ್ಲೋರಮನೆ ಗಜಾನನಮಾರುತಿ ದೇವಸ್ಥಾನದ ಸಭಾಭವನದಲ್ಲಿ ಸಂಘದ ವಾರ್ಷಿಕ ಸರ್ವ ಸಾಧಾರಣ ಸಭೆ ನಡೆಯಲಿದೆ ಎಂದು ಅವರು ತಿಳಿಸಿದರು.
ನಂದೊಳ್ಳಿ ಮತ್ತು ಉಪಳೇಶ್ವರದಲ್ಲಿ ಶಾಖೆಗಳನ್ನು ಹೊಂದಿದ ಸಂಘವು ಪಟ್ಟಣದಲ್ಲಿ ವಾಣಿಜ್ಯ ಮಳಿಗೆ ಹೊಂದಿದ್ದು, ಉತ್ತಮ ಆಡಳಿತ ಕಚೇರಿ, ಸಭಾಭವನ ನಿರ್ಮಿಸುವ ಯೋಜನೆ ರೂಪಸಿದ್ದೇವೆ ಎಂದರು. ಈ ಸಂದರ್ಭದಲ್ಲಿ ನಿರ್ದೇಶಕರಾದ ನರಸಿಂಹ ಕೊಣೆಮನೆ, ತಿಮ್ಮಣ್ಣ ಭಟ್ಟ ಘಟ್ಟಿ, ಅಪ್ಪು ಆಚಾರಿ ಹುತ್ಕಂಡ, ಗ್ರಾಂಬ್ರಿಯಲ್ ಫರ್ನಾಂಡಿಸ್, ಪ್ರಭಾ ಭಾಗ್ವತ್, ಎಂ.ಎನ್.ಭಟ್ಟ ನಂದೊಳ್ಳಿ ಹಾಗೂ ಮುಖ್ಯ ಕಾರ್ಯ ನಿರ್ವಾಹಕ ಎಂ.ಎಸ್.ಹೆಗಡೆ ಇದ್ದರು.