Slide
Slide
Slide
previous arrow
next arrow

ಶ್ರೀಪಾದ ಭಟ್ಟರಿಗೆ ಹೊಸ್ತೋಟ ಮಂಜುನಾಥ ಭಾಗವತ ಪ್ರಶಸ್ತಿ ಪ್ರದಾನ

300x250 AD

ಶಿರಸಿ: ಸೋಂದಾ ಸ್ವರ್ಣವಲ್ಲೀ ಮಹಾ ಸಂಸ್ಥಾನದ ಯಕ್ಷ ಶಾಲ್ಮಲಾ ಸಂಸ್ಥೆ ನೀಡುವ ರಾಜ್ಯ ಮಟ್ಟದ ಹೊಸ್ತೋಟ ಮಂಜುನಾಥ ಭಾಗವತ ಪ್ರಶಸ್ತಿಯನ್ನು ಹಿರಿಯ ಕಲಾವಿದ ಥಂಡಿಮನೆ ಶ್ರೀಪಾದ ಭಟ್ಟ ಅವರಿಗೆ ಪ್ರದಾನ ಮಾಡಲಾಯಿತು.

ಸ್ವರ್ಣವಲ್ಲೀಯಲ್ಲಿ ಆರಂಭಗೊಂಡ ಎರಡು ದಿನಗಳ ಯಕ್ಷೋತ್ಸವದಲ್ಲಿ ಶ್ರೀಮದ್‌ ಜಗದ್ಗುರು ಶಂಕರಾಚಾರ್ಯ ಸ್ವರ್ಣವಲ್ಲೀ ಶ್ರೀಗಂಗಾಧರೇಂದ್ರ ಸರಸ್ವತೀ ಮಹಾ ಸ್ವಾಮೀಜಿಗಳು ಪ್ರದಾನ ಮಾಡಿ, ಸಂಸ್ಕಾರ ಉಳಿಸಿ ಬೆಳಸುವ ಕಲೆ ಯಕ್ಷಗಾನವನ್ನು ಉಳಿಸಬೇಕು. ಯಕ್ಷಗಾಣ ಉಳಿಸಿದರೆ ಸಮಾಜದಲ್ಲಿ ಸಂಸ್ಕಾರ ಉಳಿಸಲು ಸಾಧ್ಯ ಎಂದರು.

ಪ್ರಶಸ್ತಿ ಸ್ವೀಕರಿಸಿದ ಥಂಡಿಮನೆ ಶ್ರೀಪಾದ ಭಟ್ಟ, ‘ಗುರುವಿನ ಹೆಸರಿನ ಪ್ರಶಸ್ತಿಯನ್ನು ಶ್ರೀಗುರುಗಳ ಕರಗಳಿಂದ ಪಡೆಯುವ ಕ್ಷಣವೇ ಧನ್ಯ. ಯಕ್ಷಗಾನಕ್ಕೆ ಹೊಸತು ಕೊಡಲಾಗದೇ ಇದ್ದರೂ ಹಳತನ್ನು ಉಳಿಸಿಕೊಂಡಿದ್ದೇನೆ’ಎಂಬ ಸಮಾಧಾನ ಇದೆ ಎಂದರು.

300x250 AD

ಹಿರಿಯ ಪತ್ರಕರ್ತ ರವೀಂದ್ರ ಭಟ್ಟ ಐನಕೈ, ಅರ್ಥದಾರಿ ಅಶೋಕ ಭಟ್ಟ ಉಜಿರೆ, ಯಕ್ಷ ಶಾಲ್ಮಲಾದ ಕಾರ್ಯಾಧ್ಯಕ್ಷ ಆರ್.ಎಸ್.ಹೆಗಡೆ ಭೈರುಂಬೆ, ಕಾರ್ಯದರ್ಶಿ ನಾಗರಾಜ ಜೋಶಿ, ಪ್ರಮುಖರಾದ ಶ್ರೀನಿವಾಸ ಮತ್ತಿಘಟ್ಟ, ಶಂಕರ ಭಟ್ಟ, ಸುನಿತಾ ಭಟ್ಟ ಥಂಡಿಮನೆ ಇತರರು ಇದ್ದರು.

Share This
300x250 AD
300x250 AD
300x250 AD
Back to top