Slide
Slide
Slide
previous arrow
next arrow

ತಾಲೂಕು ಆಸ್ಪತ್ರೆಯಲ್ಲಿ ಅವ್ಯವಸ್ಥೆ; ದಲಿತ ಸಂಘಟನೆ ಆಕ್ರೋಶ

300x250 AD

ಹಳಿಯಾಳ: ಪಟ್ಟಣದ ತಾಲೂಕು ಆಸ್ಪತ್ರೆಯಲ್ಲಿ ಗುಣಮಟ್ಟದ ಮಾತ್ರೆಗಳನ್ನು ವಿತರಿಸುತ್ತಿಲ್ಲ ಹಾಗೂ ಡಯಾಲಿಸಿಸ್ ಕೇಂದ್ರದಲ್ಲಿ ಕಳಪೆ ಗುಣಮಟ್ಟದ ಕೈಗವಸುಗಳನ್ನು ವಿತರಿಸಲಾಗುತ್ತಿದೆ ಎಂದು ದಲಿತ ಸಂಘರ್ಷ ಸಮಿತಿ ಕೆಂಪು ಸೇನೆ ಜಿಲ್ಲಾಧ್ಯಕ್ಷ ಎ.ಬಿ.ರಾಮಚಂದ್ರ ಗಂಭೀರವಾಗಿ ಆರೋಪಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತಾಲೂಕ ಆಸ್ಪತ್ರೆಯೂ ಅವ್ಯವಸ್ಥೆಗಳ ಆಗರವಾಗಿದೆ. ಆಯಾ ವಿಭಾಗಗಳಿಗೆ ಸಂಬಂಧಪಟ್ಟಂತೆ ನುರಿತ ತಜ್ಞ ವೈದ್ಯರಿಲ್ಲದ ಕಾರಣ ತಾಲೂಕಿನ ಜನತೆ ಪಕ್ಕದ ಧಾರವಾಡದಲ್ಲಿರುವ ಆಸ್ಪತ್ರೆಗಳಿಗೆ ಅಲೆಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು. ಹೆರಿಗೆ ವಿಭಾಗದಲ್ಲಿರುವ ವೈದ್ಯರು ತಾಲೂಕ ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆಯನ್ನು ನೀಡದೆ. ಪಕ್ಕದ ಧಾರವಾಡದಲ್ಲಿರುವ ಸಿವಿಲ್ ಆಸ್ಪತ್ರೆಗೆ ದಾಖಲಾಗುವಂತೆ ತಿಳಿಸುತ್ತಿದ್ದಾರೆ. ಇದರಿಂದಾಗಿ ತಾಲೂಕಿನ ಗರ್ಭಿಣಿಯರು ತೊಂದರೆ ಅನುಭವಿಸುತ್ತಿದ್ದಾರೆ. ಆದರಿಂದ ಇವರನ್ನು ಬದಲಾಯಿಸಿ ಜನಸ್ನೇಹಿ ವೈದ್ಯರನ್ನು ನೇಮಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

300x250 AD

ಆಸತ್ರೆಯಲ್ಲಿನ ಅವ್ಯವಸ್ಥೆಗಳ ಕುರಿತು. ಮೇ ತಿಂಗಳಿನಲ್ಲಿ ತಾಲೂಕ ಆಸ್ಪತ್ರೆ ವೈದ್ಯಾಧಿಕಾರಿ ಹಾಗೂ ತಾಲೂಕ ಪಂಚಾಯತ್ ಕಾರ್ಯ ನಿರ್ವಹಣಾ ಅಧಿಕಾರಿಗಳಿಗೆ ಮನವಿ ಸಲ್ಲಿಸಿ ಸಮಸ್ಯೆಗಳನ್ನು ಸರಿಪಡಿಸುವಂತೆ ವಿನಂತಿಸಲಾಗಿತ್ತು. ಆದರೆ ಇಲ್ಲಿಯವರೆಗೂ ಸಮಸ್ಯೆಗಳನ್ನು ಸರಿಪಡಿಸಲು ಅಧಿಕಾರಿಗಳು ಮುಂದಾಗಿಲ್ಲ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಂಘಟನೆ ತಾಲೂಕಾ ಅಧ್ಯಕ್ಷ ಚಂದ್ರಕಾಂತ ಕಲಬಾವಿ, ಉಪಾಧ್ಯಕ್ಷ ಶಕೀಲ ಚೌಕಿದಾರ, ಪ್ರಧಾನ ಕಾರ್ಯದರ್ಶಿ ಗಣೇಶ ಅಂಬೋಳ್ಳಿ ಹಾಗೂ ಪದಾಧಿಕಾರಿಗಳಾದ, ರಾಜು ಕುರುಬುರ, ನಾರಾಯಣ ಬೋಗೂರಕರ, ಮುಕುಂದ ಕಿನಗೇಕರ, ಹನುಮಂತ ಚಲವಾದಿ, ಅಪ್ಪಾರಾವ ಮಕಾದಂ, ಅಣ್ಣಪ್ಪಾ ಮಿರಾಶಿ, ಪರಶುರಾಮ ಹೊನೋಜಿ ಉಪಸ್ಥಿತರಿದ್ದರು.

Share This
300x250 AD
300x250 AD
300x250 AD
Back to top