ಕಾರವಾರ: ವಿವಿಧ ಸಂಘ- ಸಂಸ್ಥೆಗಳ ಸಹಯೋಗದೊಂದಿಗೆ ತಜ್ಞ ವೈದ್ಯರಿಂದ ಉಚಿತ ವೈದ್ಯಕೀಯ ತಪಾಸಣೆ ಮತ್ತು ಚಿಕಿತ್ಸಾ ಶಿಬಿರ ಸದಾಶಿವಗಡಲ್ಲಿ ಆಗಸ್ಟ್ 13ರಂದು ನಡೆಯಲಿದೆ ಎಂದು ಕಲ್ಲೂರ್ ಎಜ್ಯುಕೇಶನ್ ಟ್ರಸ್ಟ್ ಅಧ್ಯಕ್ಷ ಇಬ್ರಾಹಿಂ ಕಲ್ಲೂರ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲಯನ್ಸ್ ಕ್ಲಬ್ ಕಾರವಾರ, ಲಯನ್ಸ್ ಕ್ಲಬ್ ಸದಾಶಿವಗಡ, ಪ್ರೇಮಾಶ್ರಮ ಚಾರಿಟೇಬಲ್ ಟ್ರಸ್ಟ್ ಅಮದಳ್ಳಿ, ಕಲ್ಲೂರ್ ಎಜ್ಯುಕೇಶನ್ ಟ್ರಸ್ಟ್, ಮರ್ಕ್ಯೂರಿ ಶಿಪ್ ರಿಪೇರಿ ಪ್ರೈ.ಲಿ., ಸದಾಶಿವಗಡ ಶಿಕ್ಷಣ ಸಂಸ್ಥೆ ಹಾಗೂ ಶ್ರೀನಿವಾಸ್ ಮೆಡಿಕಲ್ ಕಾಲೇಜು ಮತ್ತು ಹಾಸ್ಪಿಟಲ್ ಮಂಗಳೂರು ಇವರ ಸಹಯೋಗದೊಂದಿಗೆ ಈ ವೈದ್ಯಕೀಯ ತಪಾಸಣಾ ಶಿಬಿರ ನಡೆಯಲಿದೆ. ಆ.13ರಂದು ಸದಾಶಿವಗಡದ ಹೈಸ್ಕೂಲ್‌ನಲ್ಲಿ ಬೆಳಿಗ್ಗೆ 9ರಿಂದ ಮಧ್ಯಾಹ್ನ 1ರವರೆಗೆ ಶಿಬಿರ ನಡೆಯಲಿದೆ ಎಂದು ಅವರು ಹೇಳಿದರು.
ಶಿಬಿರದಲ್ಲಿ ಹೃದಯರೋಗ ತಜ್ಞ ಡಾ.ಅಮಿತ್ ಕಿರಣ್, ಇಎನ್‌ಟಿ ತಜ್ಞ ಡಾ.ಡೇವಿಡ್ ರೊಸಾರಿಯೋ, ಜನರಲ್ ಮೆಡಿಸಿನ್ ವಿಭಾಗದ ಡಾ.ಅನಿತಾ ಸಿಲ್ವರ್, ಎಲುಬು ಮತ್ತು ನರ ತಜ್ಞ ಡಾ.ಶಶಿರಾಜ್ ಶೆಟ್ಟಿ, ಚರ್ಮರೋಗ ತಜ್ಞ ಡಾ.ಸೌರಭ ಹೊಳ್ಳ, ನೇತ್ರ ತಜ್ಞ ಡಾ.ದೀಪ್ತಿ ಹಾಗೂ ಪೀಡಿಯಾಟ್ರಿಕ್ ತಜ್ಞರು ಭಾಗವಹಿಸಲಿದ್ದಾರೆ. ಬೆಳಿಗ್ಗೆ 8 ಗಂಟೆಯಿಂದ ಸ್ಥಳದಲ್ಲೇ ನೋಂದಣಿ ಆರಂಭಿಸಲಾಗುತ್ತದೆ ಎಂದು ಅವರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಲಯನ್ಸ್ ಕ್ಲಬ್‌ನ ಗಣೇಶ್ ಬಿಷ್ಠಣ್ಣನವರ್, ಅಲ್ತಾಫ್ ಶೇಖ್ ಹಾಜರಿದ್ದರು.