Slide
Slide
Slide
previous arrow
next arrow

ಕಸ್ತೂರ್ಬಾ ಆಸ್ಪತ್ರೆಯಲ್ಲಿ ಅಪರೂಪದ ಶಸ್ತ್ರಚಿಕಿತ್ಸೆ

300x250 AD


ಹೊನ್ನಾವರ: ಗರ್ಭಿಣಿಯ ಗರ್ಭಕೋಶದ ಬಾಯಿಗೆ ಮಗುವಿನ ಕಸ ಅಡ್ಡಲಾಗಿರುವ ಹಾಗೂ ಹೆರಿಗೆಯ ಬಳಿಕ ಸಹಜವಾಗಿ ಕಸ ಬೇರ್ಪಡದ ಸ್ಥಿತಿ ಇರುವ ಅಪರೂಪದ ಪ್ರಕರಣದಲ್ಲಿ ರಾಜ್ಯದಲ್ಲಿ ಪ್ರಥಮಬಾರಿ ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ತಜ್ಞ ವೈದ್ಯರು ಈ ಸಂಕೀರ್ಣ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಿದ್ದಾರೆ.

ಎರಡನೇ ಬಾರಿ ಗರ್ಭ ಧರಿಸಿದ್ದ ಮಹಿಳೆ 34ನೇ ವಾರದ ಗರ್ಭಾವಸ್ಥೆಯಲ್ಲಿ ವೈದ್ಯರನ್ನು ಸಂಪರ್ಕಿಸಿದಾಗ ಈ ಸ್ಥಿತಿ ಬೆಳಕಿಗೆ ಬಂತು. ಅಲ್ಟ್ರಾಸೌಂಡ್ ಪರೀಕ್ಷೆ ಮಾಡಿದ ನಂತರ ಎಂಆರ್‌ಐ ಈ ತೊಂದರೆಯನ್ನು ದೃಢಪಡಿಸಿತು. ಸ್ತ್ರೀರೋಗ ವಿಭಾಗದ ಮುಖ್ಯಸ್ಥರಾದ ಡಾ.ಶ್ರೀಪಾದ ಹೆಬ್ಬಾರ ಅವರ ನೇತೃತ್ವದ ತಂಡ ವಿವಿಧ ವಿಭಾಗದ ತಜ್ಞರೊಂದಿಗೆ ಈ ಶಸ್ತ್ರಚಿಕಿತ್ಸೆ ನಡೆಸಿತು. ಡಾ.ಮಿಥುನ ಶೇಖರ, ಡಾ.ಹರ್ಷಿತ ಕ್ರಮಧಾರಿ ಸಹಕರಿಸಿದರು. ಶಸ್ತ್ರಚಿಕಿತ್ಸೆಯ ನಂತರ ತಾಯಿ ಮತ್ತು ಮಗುವನ್ನು ಗರ್ಭದಲ್ಲಿಯೇ ಸುರಕ್ಷಿತವಾಗಿ ಉಳಿಸಲಾಯಿತು.
ಈ ಸಂಕೀರ್ಣ ಶಸ್ತ್ರಚಿಕಿತ್ಸೆ ಮಾಡಿದ ವೈದ್ಯರ ತಂಡವನ್ನು ಕಸ್ತೂರ್ಬಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ|| ಅವಿನಾಶ ಶೆಟ್ಟಿ ಅಭಿನಂದಿಸಿದ್ದಾರೆ. ವಿಶೇಷ ತಂತ್ರಜ್ಞರು ಮತ್ತು ಉಪಕರಣಗಳನ್ನೊಳಗೊಂಡ ಈ ವೈದ್ಯರ ಸೇವೆಯನ್ನು ಜನ ಪಡೆದುಕೊಳ್ಳಬಹುದು ಎಂದು ಅವರು ಹೇಳಿದ್ದಾರೆ.

300x250 AD
Share This
300x250 AD
300x250 AD
300x250 AD
Back to top