Slide
Slide
Slide
previous arrow
next arrow

ಕೆಂಪೇಗೌಡ ಜಯಂತಿಗೆ ಅಧಿಕಾರಿಗಳ ಗೈರು: R.V. ದೇಶಪಾಂಡೆ ಆಕ್ರೋಶ

300x250 AD

ಹಳಿಯಾಳ: ಪಟ್ಟಣದ ಆಡಳಿತಸೌಧದಲ್ಲಿಯ ಸಭಾಭವನದಲ್ಲಿ ನಡೆದ ನಾಡಪ್ರಭು ಕೆಂಪೇಗೌಡರ ಜಯಂತಿ ಕಾರ್ಯಕ್ರಮದಲ್ಲಿ ಬಹುಪಾಲು ಅಧಿಕಾರಿಗಳ ಗೈರು ಹಾಜರಿ ಕಂಡು ಶಾಸಕ ಆರ್.ವಿ.ದೇಶಪಾಂಡೆ ಆಕ್ರೋಶ ವ್ಯಕ್ತಪಡಿಸಿದ ವಿದ್ಯಮಾನ ನಡೆಯಿತು.
ತಾಲೂಕಾ ಆಡಳಿತ, ತಾಲೂಕ ಪಂಚಾಯತ್, ಪುರಸಭೆ ಹಾಗೂ ಶಿಕ್ಷಣ ಇಲಾಖೆಯಿಂದ ಹಳಿಯಾಳ ಪಟ್ಟಣದ ಆಡಳಿತ ಸೌಧದ ಸಭಾಂಗಣದಲ್ಲಿ ಕೆಂಪೇಗೌಡರ 514 ನೇ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಶಾಸಕರು ನಾಡಪ್ರಭು ಶ್ರೀಕೆಂಪೇಗೌಡರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಅನೇಕ ಇಲಾಖೆಯ ಅಧಿಕಾರಿಗಳ ಗೈರು ಹಾಜರಿಯನ್ನು ಕಂಡು ಆಕ್ರೋಶ ವ್ಯಕ್ತಪಡಿಸಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಸರ್ಕಾರಿ ಕಾರ್ಯಕ್ರಮಗಳಿಗೂ ಈ ರೀತಿಯ ಅಸಡ್ಡೆ ಸರಿಯಲ್ಲ ಎಂದು ಎಚ್ಚರಿಕೆ ನೀಡಿದರು.

ಬಳಿಕ ಮಾತನಡಿದ ಅವರು, ಸೃಷ್ಟಿಯಲ್ಲಿ ಸರ್ವರೂ ಸಮಾನರು ಎಂಬ ತತ್ವವನ್ನು ಅರಿತಿದ್ದ ಕೆಂಪೇಗೌಡರು ಪ್ರಕೃತಿಯಲ್ಲಿ ಸಮತೋಲನವಿರಬೇಕಾದರೆ ಮಾನವ ಸೃಷ್ಟಿಯ ಜೊತೆಗೆ ಜೀವ ಸಂಕುಲಗಳು,ಜೀವ ವೈವಿದ್ಯಗಳು ಸಾಮರಸ್ಯದಿಂದಿರಬೇಕೆನ್ನುವ ಉದ್ದೇಶದಿಂದ ಕೆಂಪೇಗೌಡರು ಹಲವಾರು ಕೆರೆ ಕಟ್ಟೆಗಳನ್ನು ನಿರ್ಮಿಸಿ ಜೀವ ವೈವಿದ್ಯತೆಯನ್ನು ಸಮತೋಲನದಲ್ಲಿ ಇರಿಸಿದ್ದ ಮಹಾತ್ಮರಾಗಿದ್ದಾರೆ. ಕಲೆ, ಕ್ರೀಡೆ, ಸಾಹಿತ್ಯ, ಪ್ರಕೃತಿ ಸಂರಕ್ಷಣೆಯ ಧರ್ಮಭೀರು ಆಗಿದ್ದ ನಾಡಿನ ಧೀರೋದಾತ್ತ ನಾಡಪ್ರಭು ಕೆಂಪೇಗೌಡರ ದೂರದೃಷ್ಟಿ, ಸಮರ್ಥ ಹಾಗೂ ಜನಪರ ಆಡಳಿತ ನಮ್ಮಲ್ಲರಿಗೂ ಸದಾ ಪ್ರೇರಣೆಯಾಗಿವೆ ಎಂದರು.
ವೇದಿಕೆಯಲ್ಲಿ ಗ್ರೇಡ್ 2 ತಹಶೀಲ್ದಾರ್ ಜಿ.ಕೆ.ರತ್ನಾಕರ್, ತಾಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಪರಶುರಾಮ ಗಸ್ತೆ, ಉಪನ್ಯಾಸಕ ಎಸ್.ಜಿ.ಕಡೆಮನಿ, ಪುರಸಭೆ ನಿಕಟಪೂರ್ವ ಅಧ್ಯಕ್ಷ ಅಜರುದ್ದೀನ್ ಬಸರಿಕಟ್ಟಿ ಇದ್ದರು.

300x250 AD
Share This
300x250 AD
300x250 AD
300x250 AD
Back to top