Slide
Slide
Slide
previous arrow
next arrow

ರೈಲು ಸಂಘಟನೆಗಳು ಆಕ್ರೋಶಕ್ಕೆ ಮಣಿದ ಇಲಾಖೆ: ಮುಂದುವರಿಯಲಿದೆ ಬೆಂಗಳೂರು ಮುರುಡೇಶ್ವರ ರೈಲು

300x250 AD

ಕಾರವಾರ: ಜನಪ್ರಿಯತೆಯಿಂದ ಓಡುತ್ತಿದ್ದ ಯಶವಂತಪುರ ಮುರುಡೇಶ್ವರ ಪಡೀಲ್ ಬೈಪಾಸ್ ಮಾರ್ಗದ ವಿಶೇಷ ರೈಲಿನ ಓಡಾಟ ರದ್ದು ಮಾಡಲು ತಿರ್ಮಾನಿಸಿದ್ದ ರೈಲ್ವೇ ಇಲಾಖೆ ವಿರುದ್ಧ ಕುಂದಾಪುರ ಮತ್ತು ಉತ್ತರ ಕನ್ನಡ ರೈಲು ಸಂಘಟನೆಗಳು ಆಕ್ರೋಶಗೊಂಡ ಬಳಿಕ ಇಲಾಖೆ ರೈಲನ್ನು ಮುಂದುವರಿಸುವ ತೀರ್ಮಾನಕ್ಕೆ ಬಂದಿದೆ.

ಮoಗಳೂರು ನಗರ ನಿಲ್ದಾಣಕ್ಕೆ ತೆರಳಿ ಘಂಟೆಗಟ್ಟಲೆ ಕಾಯ ಬೇಕಾದ ಪರಿಸ್ತಿತಿ ಇಲ್ಲದೆ ಪಡೀಲ್ ಬೈಪಾಸ್ ಮಾರ್ಗದಿಂದ ಓಡುವ ಯಶವಂತಪುರ ಮುರುಡೇಶ್ವರ ರೈಲು ಬೆಂಗಳೂರಿನಿ0ದ ಶನಿವಾರ ರಾತ್ರಿ ತಡವಾಗಿ ಹೊರಡುವ ಮತ್ತು ಬಾನುವಾರ ಬೇಗನೆ ಬೆಂಗಳೂರು ತಲುಪ ಬಯಸುವ ಪ್ರಯಾಣಿಕರಿಗೆ ಹೇಳಿ ಮಾಡಿಸಿದಂತಿತ್ತು. ನೂರಾ ಹತ್ತು ಶೇಕಡಾಕಿಂತಲೂ ಜಾಸ್ತಿ ಜನಭರಿತವಾಗಿ ಪ್ರತೀ ಟ್ರಿಪ್ನಲ್ಲೂ ಓಡುತಿದ್ದ ಈ ರೈಲನ್ನು ಪ್ರತೀನಿತ್ಯ ಓಡಿಸುವಂತೆ ಕುಮಟಾ ಶಾಸಕ ದಿನಕರ್ ಶೆಟ್ಟಿ, ಸಂಸದ ಅನಂತ್‌ಕುಮಾರ್ ಹೆಗಡೆ, ಶೋಭಾ ಕರಂದ್ಲಾಜೆ ಮತ್ತಿತರರು ಒತ್ತಡ ತಂದಿದ್ದರು.

300x250 AD

ಇಷ್ಟಾಗಿಯೂ ಈ ರೈಲನ್ನು ರದ್ದು ಮಾಡ ಹೊರಟ ಇಲಾಕೆತ ವಿರುದ್ದ ವ್ಯಾಪಕ ಆಕ್ರೋಶ ಮೂಡಿತ್ತು. ಪಂಚಗ0ಗಾ ರೈಲಿಗೆ ಸರಿ ಸಮನಾಗಿ ಜನಪ್ರಿಯತೆ ಪಡೆದಿದ್ದ ರೈಲು ಕರಾವಳಿ ಜನರಿಗೆ ಬೇಕಾದ ಅತೀ ಅಗತ್ಯದ ಪಂಚಗ0ಗಾ ರೈಲಿಗೆ ಪರ್ಯಾಯ ರೈಲಾಗಿ ಜನಪ್ರಿಯವಾಗಿತ್ತು. ಇದೀಗ ಮುಂದಿನ ಜುಲೈವರೆಗೆ ಓಡಾಟಕ್ಕೆ ಪ್ರಕಟಣೆ ಹೊರಟಿದ್ದು, ಈ ರೈಲನ್ನು ಶಾಶ್ವತವಾಗಿ ಓಡಿಸಲು ಸಂಸದ ಅನಂತ್‌ಕುಮಾರ್, ಕುಮಟಾ ಶಾಸಕ ದಿನಕರ್ ಶೆಟ್ಟಿ, ಕಾರವಾರ ಶಾಸಕ ಸತೀಶ್ ಸೈಲ್ ನೈರುತ್ಯ ರೈಲ್ವೆಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.

Share This
300x250 AD
300x250 AD
300x250 AD
Back to top