Slide
Slide
Slide
previous arrow
next arrow

ಅಸ್ನೋಟಿಕರ್ ಮನೆಯಲ್ಲಿ ಆಪ್ತನಿಂದಲೇ ಕಳ್ಳತನ: ದೂರು ದಾಖಲು

300x250 AD

ಕಾರವಾರ: ಮನೆಯಲ್ಲಿದ್ದ ಹಣವನ್ನ ಕದ್ದು ಪರಾರಿಯಾದ ಪ್ರಕರಣ ಸಂಬಂಧ ಮಾಜಿ ಸಚಿವ ಆನಂದ್ ಅಸ್ನೋಟಿಕರ್ ಆಪ್ತನ ವಿರುದ್ಧ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ ಎನ್ನಲಾಗಿದೆ.

ನಗರದ ಶಿವಾಜಿ ವೃತ್ತದ ಬಳಿ ಇರುವ ಅರ್ಗೇಕರ್ ಎನ್ನುವವರ ಮನೆಯಲ್ಲಿ ಸುಮಾರು 50 ಲಕ್ಷಕ್ಕೂ ಅಧಿಕ ಹಣವನ್ನ ಇಡಲಾಗಿತ್ತು ಎನ್ನಲಾಗಿದೆ. ಇನ್ನು ಜಮೀನು ಮಾರಿದ ಹಣವನ್ನ ಈ ಮನೆಯಲ್ಲಿ ಇಟ್ಟಿದ್ದು ಈ ಬಗ್ಗೆ ಆನಂದ್ ಅಸ್ನೋಟಿಕರ್ ಕಾರು ಚಾಲಕನಾಗಿದ್ದ ಆದೇಶ್ ಎನ್ನುವವನಿಗೆ ತಿಳಿದಿತ್ತು ಎನ್ನಲಾಗಿದೆ.

300x250 AD

ಸೋಮವಾರ ಮನೆಗೆ ಭೇಟಿ ನೀಡಿದ್ದ ಆದೇಶ ಹಣವನ್ನ ಕದ್ದು ಪರಾರಿಯಾಗಿದ್ದು ಹಣ ಇಲ್ಲದೇ ಇರುವುದನ್ನ ಗಮನಿಸಿ ಸಿಸಿಟಿವಿ ದೃಶ್ಯಗಳನ್ನ ಹುಡುಕಿದಾಗ ದೃಶ್ಯಾವಳಿಗಳಲ್ಲಿ ಆದೇಶ ಹಣ ತೆಗೆದುಕೊಂಡು ಹೋಗುವ ದೃಶ್ಯ ಸೆರೆಯಾಗಿದೆ ಎನ್ನಲಾಗಿದೆ. ತಕ್ಷಣ ವಿಷಯವನ್ನ ಪೊಲೀಸರಿಗೆ ತಿಳಿಸಿದ್ದು ಸ್ಥಳಕ್ಕೆ ದಾವಿಸಿದ ಪೊಲೀಸರು ಸಿಸಿಟಿವಿ ದೃಶ್ಯಗಳನ್ನ ಗಮನಿಸಿ ನಾಪತ್ತೆಯಾಗಿರುವ ಆದೇಶ ವಶಕ್ಕೆ ಪಡೆಯಲು ತನಿಖೆ ನಡೆಸಿದ್ದಾರೆ ಎನ್ನಲಾಗಿದೆ.

Share This
300x250 AD
300x250 AD
300x250 AD
Back to top