ಸಿದ್ದಾಪುರ: ಶಿರಸಿ-ಸಿದ್ದಾಪುರ ಕ್ಷೇತ್ರದ ಕಾಂಗ್ರೆಸ್ ಟಿಕೇಟ್ ಆಕಾಂಕ್ಷಿಯಾಗಿ ಕೆಲ ಕಾಲ ಕ್ಷೇತ್ರದಲ್ಲಿ ಪಕ್ಷ ಸಂಘಟನೆ ಮಾಡಿದ ಸುಷ್ಮಾ ರಾಜಗೋಪಾಲ ಕಾಂಗ್ರೆಸ್ ತೊರೆದು ಜೆಡಿಎಸ್ ಸೇರಲಿದ್ದಾರೆ ಎಂದು ತಿಳಿದುಬಂದಿದೆ.
ಕಾಂಗ್ರೆಸ್ ಮುಖಂಡ ದಿವಂಗತ ದೀಪಕ್ ಹೊನ್ನಾವರ ಸಹೋದರಿಯಾದ ಸುಷ್ಮಾ ರಾಜಗೋಪಾಲ ಕೆಪಿಸಿಸಿ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದರು. ಈ ಬಾರಿ ಶಿರಸಿ ಕ್ಷೇತ್ರದಿಂದ ಕಣಕ್ಕೆ ಇಳಿಯುವ ಉದ್ದೇಶದಿಂದ ಶಿರಸಿಗೆ ಆಗಮಿಸಿ ಪಕ್ಷ ಸಂಘಟನೆಯಲ್ಲಿ ತೊಡಗಿದ್ದರು.
ಕ್ಷೇತ್ರಕ್ಕೆ ಬಂದ ನಂತರ ಪಕ್ಷ ಸಂಘಟನೆ, ಕ್ರೀಡಾಕೂಟಗಳಿಗೆ ಆರ್ಥಿಕ ಸಹಾಯ, ಕೊರೋನಾ ಸಂಧರ್ಭದಲ್ಲಿ ಕಿಟ್ ವಿತರಣೆ ಹೀಗೆ ಸಮಾಜಸೇವೆಯಲ್ಲಿ ತೊಡಗಿಕೊಂಡು ಕ್ಷೇತ್ರದಲ್ಲಿ ಕಡಿಮೆ ಅವಧಿಯಲ್ಲಿಯೇ ಗಮನ ಸೆಳೆದಿದ್ದರು.
ಕೆಲ ಕಾರಣಗಳಿಂದ ಶಿರಸಿ ತೊರೆದು, ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ತನಗೆ ಅಥವಾ ತನ್ನ ಪತಿಗೆ ಟಿಕೇಟ್ ಕೊಡುವಂತೆ ಹೇಳಿ ಬೆಂಗಳೂರಿನತ್ತ ಸುಷ್ಮಾ ತೆರಳಿದ್ದರು. ಆದರೆ ಬೆಂಗಳೂರು ದಕ್ಷಿಣ ಕ್ಷೇತ್ರದ ಟಿಕೇಟ್ ಬೇರೆಯವರಿಗೆ ಪಾಲಾಗಿದೆ.
ಈ ಹಿನ್ನಲೆಯಲ್ಲಿ ಪಕ್ಷವನ್ನು ತೊರೆಯಲು ಸುಷ್ಮಾ ನಿರ್ಧರಿಸಿದ್ದು, ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಜೊತೆ ಸಂಪರ್ಕದಲ್ಲಿದ್ದು ಇಂದು ಬಹುತೇಕ ಜೆಡಿಎಸ್ ಸೇರಲಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸುಷ್ಮಾ ತನಗೆ ಟಿಕೇಟ್ ಕೊಡದೇ ಮೋಸವಾಗಿದ್ದು, ಕುಮಾರಸ್ವಾಮಿ ಭೇಟಿಯಾಗಲಿದ್ದಾರೆ. ನಂತರ ಪಕ್ಷ ಬಿಡುವ ಬಗ್ಗೆ ನಿರ್ಧರಿಸಲಾಗುವುದು ಎಂದಿದ್ದಾರೆ.