ಕಾರವಾರ: ಬ್ರಿಟಿಷರೊಂದಿಗೆ ಹೋರಾಡಿದ್ದ ಹೆಂಜಾ ನಾಯ್ಕರು ನಮ್ಮ ಇಂದಿನ ಯುವಕರಿಗೆ ಸ್ಫೂರ್ತಿ. ನಾವು ಸದಾ ಅವರನ್ನು ನೆನಪು ಮಾಡಿಕೊಳ್ಳುತ್ತಿರಬೇಕು. ಅವರು ನಮ್ಮ ಕಾರವಾರದ ಎಲ್ಲಾ ಸಮಾಜದ ಆಸ್ತಿ ಎಂದು ಶಾಸಕಿ ರೂಪಾಲಿ ನಾಯ್ಕ ಹೇಳಿದರು.
ನಗರಸಭೆಯ ಉದ್ಯಾನದಲ್ಲಿರುವ ಹೆಂಜಾ ನಾಯ್ಕ ಪುತ್ಥಳಿಗೆ ಅಭಿಷೇಕ ಮಾಡಿ, ಹೂವಿನ ಹಾರ ಹಾಕಿ ಗೌರವ ನಮನ ಸಲ್ಲಿಸಿ ಮಾತನಾಡಿದ ಅವರು, ಹೆಂಜಾ ನಾಯ್ಕರ ಹೆಸರು ಚಿರಕಾಲವಾಗಿ ಇರುವಂತೆ ನಮ್ಮ ಬಿಜೆಪಿ ಸರ್ಕಾರ ಬಂದ ಮೇಲೆ ಕೋಡಿಬಾಗ ರಸ್ತೆಗೆ ಅವರ ಹೆಸರು ಇಟ್ಟಿದ್ದೇವೆ ಮತ್ತು ನಮ್ಮ ಸರ್ಕಾರದಿಂದ ಕಾರವಾರದಲ್ಲಿ ಹೆಂಜಾ ನಾಯ್ಕ ಹೆಸರಿನಲ್ಲಿ ಸೈನಿಕ ತರಬೇತಿ ಶಾಲೆಯನ್ನು ಆರಂಭಿಸಿದ್ದೇವೆ ಎಂದರು.
ನಗರಸಭೆ ಅಧ್ಯಕ್ಷ ಡಾ.ನಿತಿನ್ ಪಿಕಳೆ ಮಾತನಾಡಿ, ಸಧೃಡ ಸಮಾಜ ಕಟ್ಟಲು ಹೆಂಜಾ ನಾಯ್ಕ ಹೆಸರಿನಲ್ಲಿ ಉತ್ತಮ ಸಂಘಟನೆ ಕಟ್ಟುವ ಅಗತ್ಯ ಇದೆ ಎಂದರು.
ನಗರಸಭೆ ಉಪಾಧ್ಯಕ್ಷ ಪ್ರಕಾಶ ಪಿ.ನಾಯ್ಕ, ಹೆಂಜಾ ನಾಯ್ಕ ಅಭಿಮಾನಿ ಬಳಗದ ಅಧ್ಯಕ್ಷ ರಾಘು ನಾಯ್ಕ, ಗೌರವಾಧ್ಯಕ್ಷ ಡಾ. ಗಜೇಂದ್ರ ನಾಯ್ಕ, ಸಮಾಜ ಸೇವಕ ಮಾಧವ ನಾಯಕ ಹಾಗೂ ಸಾರ್ವಜನಿಕರು ಇದ್ದರು.