• Slide
  Slide
  Slide
  previous arrow
  next arrow
 • ಹಳಿಯಾಳ ಮುಖ್ಯಾಧಿಕಾರಿ ಅಶೋಕಕುಮಾರ ವರ್ಗಾವಣೆಗೆ ಆಗ್ರಹ

  300x250 AD

  ಕಾರವಾರ: ಕಳೆದ ಅನೇಕ ವರ್ಷಗಳಿಂದ ವಿವಿಧ ಇಲಾಖೆಯಲ್ಲಿ ಅಧಿಕಾರಿಯಾಗಿ ಹಳಿಯಾಳದಲ್ಲಿ ಕಾರ್ಯನಿರ್ವಹಿಸಿ, ಪ್ರಸ್ತುತ ಹಳಿಯಾಳ ಪುರಸಭೆಯ ಮುಖ್ಯಾಧಿಕಾರಿಯಾಗಿ ಮುಂಬಡ್ತಿ ಹೊಂದಿರುವ ಅಶೋಕಕುಮಾರ ಸಾಳೆನ್ನವರ ಅವರನ್ನ ಸಾರ್ವಜನಿಕರ ಹಿತದೃಷ್ಟಿಯಿಂದ ಹಾಗೂ ಮುಕ್ತ ಚುನಾವಣೆ ನಡೆಸಲು ಅನುಕೂಲವಾಗುವಂತೆ ಬೇರೆಡೆ ವರ್ಗಾವಣೆ ಮಾಡಲು ಕರ್ನಾಟಕ ದಲಿತ ಸಂರಕ್ಷಾ ಸಮಿತಿ ಆಗ್ರಹಿಸಿದೆ.

  ಜಿಲ್ಲಾ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ಜಿಲ್ಲಾಧ್ಯಕ್ಷ ಹನುಮಂತ ಹರಿಜನ್, ಅಶೋಕಕುಮಾರ ಸಾಳೆನ್ನವರನ್ನು ಕಂದಾಯ ಅಧಿಕಾರಿಯಿಂದ ಮುಖ್ಯಾಧಿಕಾರಿ ಹುದ್ದೆಗೆ ಹಳಿಯಾಳ ಪುರಸಭೆಗೆ ಮುಂಬಡ್ತಿ ನೀಡಿ ಒಂದೇ ಸ್ಥಳದಲ್ಲಿ ನೇಮಕ ಮಾಡಿದ್ದು, ಇದರಲ್ಲಿ ಸರಕಾರದ ನಿಯಮಗಳನ್ನು ಗಾಳಿಗೆ ತೂರಲಾಗಿದೆ ಎಂಬುದು ಮೇಲ್ನೋಟಕ್ಕೆ ಕಂಡುಬರುತ್ತದೆ ಎಂದು ಆರೋಪಿಸಿದರು.

  300x250 AD

  ಹಳಿಯಾಳ ಪುರಸಭೆಯಲ್ಲಿ ಮುಖ್ಯಾಧಿಕಾರಿಯಾಗಿದ್ದ ಪರಶುರಾಮ ಶಿಂಧೆ ಎನ್ನುವವರು ಕೇವಲ ಆರು ತಿಂಗಳಲ್ಲೇ ಎತ್ತಂಗಡಿ ಮಾಡಿ ಅಶೋಕಕುಮಾರ ಅವರನ್ನು ಆ ಹುದ್ದೆಗೆ ಬಡ್ತಿ ನೀಡಲಾಗಿದೆ. ಇದರಿಂದ ಪರಿಶಿಷ್ಟ ಜಾತಿ ನೌಕರರಿಗೆ ಅನ್ಯಾಯವಾಗಿದೆ. ಸತತ 11 ವರ್ಷಗಳಿಂದ ಹಳಿಯಾಳದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಸರ್ಕಾರದ ಆದೇಶದಂತೆ ಅವರನ್ನು ಬೇರೆ ಸ್ಥಳೀಯ ಸಂಸ್ಥೆಗಳಿಗೆ ವರ್ಗವಣೆಗೊಳಿಸಲು ಆಗ್ರಹಿಸಿದ್ದಾರೆ.
  ಕರ್ನಾಟಕ ರಾಜ್ಯ ವಿಧಾನಸಭೆ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಅನೇಕ ಅಧಿಕಾರಿಗಳನ್ನ ವರ್ಗಾವಣೆ ಮಾಡಿ ಆದೇಶಿಸಲಾಗಿದೆ. ಆದರೆ 11 ವರ್ಷದಿಂದ ಒಂದೇ ಸ್ಥಳದಲ್ಲಿ ಇರುವ ಅಶೋಕಕುಮಾರ್ ಅವರನ್ನ ಮಾತ್ರ ವರ್ಗಾವಣೆ ಮಾಡದೆ, ಅವರಿಗೆ ಮುಂಬಡ್ತಿ ನೀಡಿ ಹಳಿಯಾಳದಲ್ಲೇ ಕಾರ್ಯನಿರ್ವಹಿಸಲು ಅವಕಾಶ ನೀಡಲಾಗಿದೆ. ಇದು ಸಂವಿಧಾನಾತ್ಮಕವಾಗಿ ಒಪ್ಪಿತವಲ್ಲ ಹಾಗೂ ಸರ್ಕಾರದ ಆದೇಶ, ನಿಯಮಗಳನ್ನ ಇಲ್ಲಿ ಉಲ್ಲಂಘಿಸಲಾಗಿದೆ ಎಂದು ದೂರಿದರು. ಒಂದುವೇಳೆ ಇವರನ್ನು ವರ್ಗಾವಣೆಗೊಳಿಸದಿದ್ದರೆ ನ್ಯಾಯ ಸಿಗುವವರೆಗೆ ಸಂಘಟನೆಯಿಂದ ರಾಜ್ಯಾದ್ಯಂತ ಹೋರಾಟ ನಡೆಸಲಾಗುವುದು. ಮುಂದಾಗುವ ಅನಾಹುತಗಳಿಗೆ ಸರಕಾರವೇ ನೇರ ಹೊಣೆಯಾಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
  ಪತ್ರಿಕಾಗೋಷ್ಠಿಯಲ್ಲಿ ನಾರಾಯಣ ಬಾಂದೋಡ್ಕರ್, ಚಂದ್ರಕಾಂತ ಗಂಗಾಧರ್, ನಾಗರಾಜ ದೊಡ್ಮನಿ, ಶ್ರೀಧರ್ ಸೋನಾರ್ ಇದ್ದರು.

  Share This
  300x250 AD
  300x250 AD
  300x250 AD
  Leaderboard Ad
  Back to top