Slide
Slide
Slide
previous arrow
next arrow

ಮಾ.19ಕ್ಕೆ‌ ‘ಹಣತೆ’ ಯಲ್ಲಾಪುರ ಕಾರ್ಯಕಾರಿ ಸಮಿತಿ ಉದ್ಘಾಟನೆ

300x250 AD

ಯಲ್ಲಾಪುರ: ‘ಹಣತೆ’ ಸಾಹಿತ್ಯಕ ಸಾಂಸ್ಕೃತಿಕ ಜಗಲಿ ತಾಲೂಕು ಘಟಕದ ನೂತನ ಕಾರ್ಯಕಾರಿ ಸಮಿತಿಯ ಉದ್ಘಾಟನೆ ಮಾ.19ರ ಮಧ್ಯಾಹ್ನ 3 ಗಂಟೆಗೆ ಪಟ್ಟಣದ ಎಪಿಎಂಸಿ ಎದುರಿನ ಅರಣ್ಯ ಉದ್ಯಾನವನದಲ್ಲಿ (ಇಕೋ ಗಾರ್ಡನ್) ನಡೆಯಲಿದೆ ಎಂದು ಹಣತೆ ತಾಲೂಕು ಅಧ್ಯಕ್ಷ ರಾಘವೇಂದ್ರ ಹೊನ್ನಾವರ ತಿಳಿಸಿದ್ದಾರೆ.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ‘ಹಣತೆ’ ಜಿಲ್ಲಾಧ್ಯಕ್ಷ ಅರವಿಂದ ಕರ್ಕಿಕೋಡಿ ವಹಿಸಲಿದ್ದು, ಉದ್ಘಾಟನೆಯನ್ನು ಹಿರಿಯ ಸಾಹಿತಿ ವನರಾಗ ಶರ್ಮ ಹಣತೆ ಬೆಳಗಿ ನೆರವೇರಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕುಮಟಾದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಇಂಗ್ಲಿಷ್ ವಿಭಾಗದ ಸಹಾಯಕ ಪ್ರಾಧ್ಯಾಪಕ, ಕವಿ ಪ್ರೊ.ಸಂದೇಶ ರತ್ನಪುರಿ, ಸಹಕಾರಿ ಚಿಂತಕ ಜಿ.ಆರ್.ಹೆಗಡೆ ಕುಂಬ್ರಿಗುಡ್ಡೆ ಪಾಲ್ಗೊಳ್ಳಲಿದ್ದಾರೆ.
ಹಣತೆ ಜಿಲ್ಲಾ ಪ್ರಧಾನ ಸಂಚಾಲಕ ಎನ್. ಜಯಚಂದ್ರನ್, ಹಣತೆ ಜಿಲ್ಲಾ ಸಮಿತಿ ಸದಸ್ಯ ಪ್ರೊ. ಉಪೇಂದ್ರ ಘೋರ್ಪಡೆ, ಹಣತೆ ಮುಂಡಗೋಡ ತಾಲೂಕು ಘಟಕದ ಅಧ್ಯಕ್ಷ ವಿನಯ ಪಾಲನಕರ, ಶಿರಸಿ ಜಿಲ್ಲಾ ಸರಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ನಾರಾಯಣ ನಾಯಕ, ತಾಲೂಕು ಸರಕಾರಿ ನೌಕರರ ಸಂಘದ ಅಧ್ಯಕ್ಷ ಪ್ರಕಾಶ ನಾಯಕ, ತಾಲೂಕು ಸರಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಆರ್.ಆರ್.ಭಟ್ ಗೌರವ ಉಪಸ್ಥಿತರಿರುವರು ಎಂದು ರಾಘವೇಂದ್ರ ಹೊನ್ನಾವರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹಣತೆ ಯಲ್ಲಾಪುರ ಕಾರ್ಯಕಾರಿ ಸಮಿತಿ
ಹಣತೆ ಸಾಹಿತ್ಯಕ, ಸಾಂಸ್ಕೃತಿಕ ಜಗಲಿ ಯಲ್ಲಾಪುರ ತಾಲೂಕು ಘಟಕದ ನೂತನ ಕಾರ್ಯಕಾರಿ ಸಮಿತಿಯನ್ನು ಹಣತೆ ಜಿಲ್ಲಾಧ್ಯಕ್ಷ ಅರವಿಂದ ಕರ್ಕಿಕೋಡಿ ಅವರ ಅನುಮೋದನೆಯೊಂದಿಗೆ ತಾಲೂಕು ಅಧ್ಯಕ್ಷ ರಾಘವೇಂದ್ರ ಹೊನ್ನಾವರ ಅವರು ಪ್ರಕಟಣೆ ಬಿಡುಗಡೆ ಮಾಡಿದ್ದಾರೆ.
ಹಣತೆ ತಾಲೂಕು ಅಧ್ಯಕ್ಷರಾಗಿ ರಾಘವೇಂದ್ರ ಹೊನ್ನಾವರ, ಗೌರವ ಕಾರ್ಯದರ್ಶಿಗಳಾಗಿ ಯಮುನಾ ನಾಯ್ಕ, ಪವನ ಕುಮಾರ, ಗೌರವ ಕೋಶಾಧ್ಯಕ್ಷರಾಗಿ ವಿಶ್ವನಾಥ ಸಿದ್ದಿ, ಸದಸ್ಯರಾಗಿ ಶಂಕರಾನಂದ, ವಿನಾಯಕ ಗಾಂವ್ಕರ್, ಇಂದಿರಾ ನಾಯಕ, ರಘುಪತಿ ತಳೇಕರ, ಸಂತೋಷ ಮಾಸ್ತಿಮನೆ, ಅಜಿತ ನಾಯಕ, ಗೌರವ ಸಲಹೆಗಾರರಾಗಿ ವಿಶಾಲ ನಾಯಕ, ದಿನೇಶ ಭಟ್ಟ, ನಾಗಪ್ಪ ನಾಗನೂರ, ಅಮಿತ ಚೌಹಾಣ, ಪದ್ಮಾ ಪಟಗಾರ, ರೇಖಾ ಭಟ್ಟ, ಕವಿತಾ ಪಟಗಾರ ನೇಮಕಗೊಂಡಿದ್ದಾರೆ ರಾಘವೇಂದ್ರ ಹೊನ್ನಾವರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top