Slide
Slide
Slide
previous arrow
next arrow

ಸಾಧನೆ ಮಾಡುವ ಭರದಲ್ಲಿ ನಮ್ಮತನ ಮರೆಯಬಾರದು: ಡಾ. ವೇಂಕಟೇಶ್ ನಾಯ್ಕ

300x250 AD

ಶಿರಸಿ: ಸಾಧನೆ ಮಾಡುವ ಭರದಲ್ಲಿ ನಮ್ಮತನ ನಮ್ಮ ಸಂಸ್ಕೃತಿಯನ್ನು ಮರೆಯಬಾರದು ಎಂದು ಸ್ಕೋಡ್ ವೇಸ್ ಸಂಸ್ಥೆಯ ಮುಖ್ಯಕಾರ್ಯನಿರ್ವಾಹಕ ನಿರ್ದೇಶಕ ಡಾ.ವೇಂಕಟೇಶ್ ನಾಯ್ಕ  ಹೇಳಿದರು.

ಅವರು ಸ್ನೇಹಿತರ ಬಳಗ ಕಾನಸೂರು ಹಾಗೂ ಕರ್ನಾಟಕ ರಕ್ಷಣಾ ವೇದಿಕೆ ಗಜಸೇನೆ ಶಿರಸಿ ಸಿದ್ದಾಪುರ ಇವರ ಸಂಯುಕ್ತ ಆಶ್ರಯದಲ್ಲಿ ಕಾನಸೂರಿನ ಸರ್ಕಾರಿ ಪ್ರಾಥಮಿಕ ಶಾಲೆ ಆವರಣದಲ್ಲಿ ನಡೆದ ಎರಡನೇ ವರ್ಷದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ವನ್ನು ಉದ್ಘಾಟಿಸಿ ಮಾತನಾಡಿದರು.

ಕನ್ನಡ ರಾಜ್ಯೋತ್ಸವ ವನ್ನು ನಾವು ಮನೆಯ ಹಬ್ಬವಾಗಿ ಆಚರಿಸುತ್ತಿದ್ದೆವೆ. ಕನ್ನಡ ಭಾಷೆ ನೆಲ ಜಲ ಸಂಸ್ಕೃತಿ ಶ್ರೀಮಂತ ವಾಗಿದೆ. ನಮ್ಮ ಜಿಲ್ಲೆ ಭೌಗೋಳಿಕವಾಗಿ  ವೈವಿಧ್ಯಮಯ ಜಿಲ್ಲೆಯಾಗಿದೆ. ಜಿಲ್ಲೆಯ ಜನರು ದೇಶ ವಿದೇಶಗಳಲ್ಲಿ ವಿವಿಧ ಕ್ಷೇತ್ರಗಳಲ್ಲಿ ಅಪಾರ ಸಾಧನೆ ಮಾಡಿದ್ದಾರೆ.   ನಮ್ಮ ಜಿಲ್ಲೆಯ ಕಲೆ ಸಾಹಿತ್ಯ ಸಂಪ್ರದಾಯ ಗಳನ್ನು ಇನ್ನಷ್ಟು ಶ್ರೀಮಂತಗೊಳಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.

ಭಾಷೆ ಕೇವಲ ಮಾಧ್ಯಮವೇ ಹೊರತು ಬದುಕಲ್ಲ. ನಾವು ಎಲ್ಲೆ ಹೋದರೂ ನಮ್ಮ ಮಾತೃಭಾಷೆ ಕನ್ನಡ ವನ್ನು ಮರೆಯಬಾರದು. ವಿದ್ಯಾರ್ಥಿಗಳಿಗೆ ಮಾತೃಭಾಷೆ ಯ ಮಹತ್ವವನ್ನು ತಿಳಿಸುವ ಕಾರ್ಯ ಶಾಲೆಗಳಲ್ಲಿ ಹಾಗೂ ಮನೆಗಳಲ್ಲಿ ಆಗಬೇಕಿದೆ.ಮಕ್ಕಳಿಗೆ ಚಿಕ್ಕಂದಿನಿಂದಲೆ ಕನ್ನಡ ಭಾಷೆಯ ಮಹತ್ವನ್ನು ತಿಳಿಸುವ ಕೆಲಸ ಪಾಲಕರು ಮಾಡಬೇಕು.ಆಗ ಮಕ್ಕಳಲ್ಲಿ ನಮ್ಮ ಸಂಸ್ಕೃತಿ, ಭಾಷೆ,ನಾಡು ನುಡಿಯ ಬಗ್ಗೆ ಅಭಿಮಾನ ಬೆಳೆಯುತ್ತದೆ ಎಂದರು.

ಕರೋನಾ ಮಹಾಮಾರಿಯ ವೇಳೆಯಲ್ಲಿ ಎಲ್ಲಾ ಭಯವನ್ನು ಬಿಟ್ಟು ಜೀವದ ಹಂಗು ತೊರೆದು ಸಾರ್ವಜನಿಕ ಸೇವೆ ಮಾಡಿದ ಅಗ್ರಗಣ್ಯ ವೈದ್ಯರು ಡಾ.ವಿನಾಯಕ ಭಟ್ ಅವರು. ಸಾರ್ವಜನಿಕರಲ್ಲಿ ಭಯದ ವಾತಾವರಣ ನಿರ್ಮಾಣ ಸಂದರ್ಭದಲ್ಲಿ ಕರೋನಾ ಸೇನಾನಿಯಾಗಿ ಸಾರ್ವಜನಿಕರ ಸೇವೆ ಮಾಡಿ ಬಹಳಷ್ಟು ಜನರ ಜೀವವನ್ನು ಉಳಿಸಿದ ಸಾಹಸಿ ವೈದ್ಯರು ಡಾ.ವಿನಾಯಕ ಭಟ್ ಅವರು ಎಂದರು.

ಉದ್ಯಮಿ ಆರ್ ಜಿ ಶೇಟ್ ಕಾನಸೂರು ಮಾತನಾಡಿ ಕಾನಸೂರಿನಲ್ಲಿ ಇಂತಹ‌ ಕಾರ್ಯಕ್ರಮಗಳು ನಡೆಯುತ್ತಿರುವುದು ಸಂತಸ ತಂದಿದೆ ಎಂದರು. ಗ್ರಾ ಪಂ ಕಾನಸೂರು ಉಪಾಧ್ಯಕ್ಷೆ ಶಶಿಪ್ರಭಾ ಹೆಗಡೆ ಮಾತನಾಡಿ ಎಲ್ಲ ಭಾಷೆಯ ಜೊತೆಗೆ ಕನ್ನಡ ಭಾಷೆಯನ್ನು ಗೌರವಿಸಬೇಕು. ಮಾತೃಭಾಷೆ ಮನುಷ್ಯನಿಗೆ ಅತೀ ಶ್ರೇಷ್ಠ ಭಾಷೆಯಾಗಿರುತ್ತದೆ. ಕನ್ನಡ ಭಾಷೆಯನ್ನು ಉಳಿಸಿ ಬೆಳೆಸುವ ಕಾರ್ಯ ಎಲ್ಲರಿಂದಲೂ ಆಗಬೇಕು ಎಂದರು.

300x250 AD

ಸಾಧಕರಿಗೆ ಸಮ್ಮಾ‌ನ: ಈ ಸಂದರ್ಭದಲ್ಲಿ ಶಿರಸಿ ತಾಲೂಕಾ ವೈದ್ಯಾಧಿಕಾರಿ ಡಾ.ವಿನಾಯಕ ಭಟ್ ಕಣ್ಣಿ ಹಾಗೂ ಮಾದ್ನಕಳ್ ನ ಕೌಸಲ್ಯ ವೆಂಕಟ್ರಮಣ ಹೆಗಡೆ , ಧನ್ಯಾ ಚಂದ್ರಶೇಖರ ನಾಯ್ಕ ಇವರನ್ನು ಸನ್ಮಾನಿಸಲಾಯಿತು.

ಸನ್ಮಾನ ಸ್ವೀಕರಿಸಿ ಮಾತನಾಡಿದ ತಾಲೂಕಾ ವೈದ್ಯಾಧಿಕಾರಿ ಡಾ.ವಿನಾಯಕ ಭಟ್ , ಕನ್ನಡ ರಾಜ್ಯೋತ್ಸವ ದ ದಿನವೆ ನನಗೆ ಸನ್ಮಾನ ಮಾಡುತ್ತಿರುವುದು ಸಂತಸ ತಂದಿದೆ. ಜನಮಾಡುವ ಸನ್ಮಾನವೆ ಜೀವನದ ಬಹುದೊಡ್ಡ ಸನ್ಮಾನವಾಗಿದೆ. ಜನರ ಸಹಕಾರ ಪ್ರೀತಿಯಿಂದ ಸೇವೆಯನ್ನು ನೀಡುತ್ತಿದ್ದೇನೆ. ನಿಮ್ಮೆಲ್ಲರ ಸಹಕಾರ ಪ್ರೀತಿ ವಿಶ್ವಾಸ ಸದಾ ನನ್ನ ಮೇಲಿರಲಿ ಎಂದರು.

ಈ ಸಂದರ್ಭದಲ್ಲಿ  ಕಾನಸೂರು ಗ್ರಾ ಪಂ ಅಧ್ಯಕ್ಷ ವೀರಭದ್ರ ಜಂಗಣ್ಣನವರ್ ,ಸದಸ್ಯರಾದ ಶಶಿಕಾಂತ ನಾಮಧಾರಿ, ಮನೋಜ ಶ್ಯಾನುಭೋಗ, ಸವಿತಾ ಕಾನಡೆ ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷ ರಾಘವೇಂದ್ರ ನಾಯ್ಕ ಸೇರಿ ಹಲವರು ಉಪಸ್ಥಿತರಿದ್ದರು.

ಸಾಂಸ್ಕೃತಿಕ ಸಂಜೆ: ವಿಶ್ವಶಾಂತಿ ಸೇವಾ ಟ್ರಸ್ಟ್ ಕರ್ನಾಟಕವು ಬೆಂಗಳೂರಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಕಾರದಲ್ಲಿ ಯಕ್ಷ ರೂಪಕ ‘ಶ್ರೀಕೃಷ್ಣಂ ವಂದೇ’ ಪ್ರದರ್ಶಿಸಲಾಯಿತು.  ಪ್ರೊ..ಎಂ.ಎ.ಹೆಗಡೆ ವಿರಚಿತ ಈ ರೂಪಕವನ್ನು ಕು. ತುಳಸಿ ಹೆಗಡೆ ಶಿರಸಿ ಮನೋಜ್ಞವಾಗಿ ಪ್ರದರ್ಶಿಸಿದಳು. ಭಾಗವತ ಕೇಶವ ಹೆಗಡೆ ಕೊಳಗಿ, ಮದ್ದಲೆಯಲ್ಲಿ ಶರತ್ ಜಾನಕೈ, ಚಂಡೆಯಲ್ಲಿ ಲಕ್ಷ್ಮೀನಾರಾಯಣ ಸಂಪ, ಪ್ರಸಾದನದಲ್ಲಿ ವೆಂಕಟೇಶ ಬೊಗ್ರಿಮಕ್ಕಿ ಸಹಕಾರ ನೀಡಿದರು. 

ನಂತರ ಕದಂಬ ಕಲಾ ವೇದಿಕೆ ಶಿರಸಿ ಇವರಿಂದ ರಸಮಂಜರಿ ಕಾರ್ಯಕ್ರಮ ನಡೆಯಿತು. ಎಂದೆಂದಿಗೂ ನೀ, ಕನ್ನಡವಾಗಿರು, ಒಳಿತು ಮಾಡು ಮನುಷ, ಹುಟ್ಟಿದರೆ, ಸೇರಿದಂತೆ ಅನೇಕ ಕನ್ನಡ ಪದ್ಯಗಳನ್ನು ಶಿರಸಿ ರತ್ನಾಕರ, ದಿವ್ಯಾ ಶೇಟ್ , ಉಮಾಕಾಂತ ಗೌಡ, ಜ್ಯೋತಿ ರತ್ನಾಕರ, ಶಿಲ್ಪಾ ಭಟ್,  ನೇತ್ರ ಹಾಗೂ ದೀಕ್ಷಾ ಹಾಡಿ ಕನ್ನಡದ ಸಂಭ್ರಮ ಹೆಚ್ವಿಸಿದರು. ಸಂಘಟಕ ರಾಜು ಕಾನಸೂರು ಸ್ವಾಗತಿಸಿ ನಿರೂಪಿಸಿದರು.

Share This
300x250 AD
300x250 AD
300x250 AD
Back to top