Slide
Slide
Slide
previous arrow
next arrow

ಕಬ್ಬು ಬೆಳೆಗಾರರ ಹೋರಾಟಕ್ಕೆ ಸ್ವರ್ಣವಲ್ಲಿ ಶ್ರೀಗಳ ಬೆಂಬಲ

300x250 AD

ಹಳಿಯಾಳ: ವೈಜ್ಞಾನಿಕ ಬೆಲೆ ನೀಡಿಕೆ ಹಿನ್ನೆಲೆಯಲ್ಲಿ ನಡೆಯುತ್ತಿರುವ ರೈತರ ಸತ್ಯಾಗ್ರಹಕ್ಕೆ ನ. 2ರಂದು ಶ್ರೀ ಸ್ವರ್ಣವಲ್ಲಿ ಸ್ವಾಮೀಜಿಯವರ ಪರವಾಗಿ ಪರಿಸರ ಹೋರಾಟಗಾರರ ತಂಡ ಭೇಟಿ ನೀಡಿತು. ಶ್ರೀ ಸ್ವರ್ಣವಲ್ಲಿ ಸ್ವಾಮೀಜಿಯವರ ಬೆಂಬಲದ ಪತ್ರವನ್ನು ಅನಂತ್ ಹೆಗಡೆ ಅಶೀಸರ್ ನೀಡಿದರು. ಕಬ್ಬು ಬೆಳೆಗಾರರ ಸಮಸ್ಯೆಗಳನ್ನು ಪರಿಹರಿಸಲು ಸರಕಾರ ತುರ್ತು ಗಮನ ನೀಡಬೇಕೆಂದು ಮನವಿ ಮಾಡಿದರು. ಇದೇ ಸಂದರ್ಭದಲ್ಲಿ ಉಪವಾಸದಿಂದ ಅಸ್ವಸ್ಥರಾದ ಪರಮಾತ್ಮ ಸ್ವಾಮೀಜಿ ಮತ್ತು ರೈತ ಕಾರ್ಯಕರ್ತರಿಗೆ ಉಪವಾಸ ಕೈ ಬಿಡಲು ಮನವಿ ಮಾಡಿದರು. ವನವಾಸಿ ಕಲ್ಯಾಣದ ದೊಂಡು ಪಾಟೀಲ್ , ವೃಕ್ಷಲಕ್ಷದ ಟಿ ಆರ್ ಹೆಗಡೆ , ಗಣಪತಿ ಕೆ ಸತ್ಯಾಗ್ರಹದಲ್ಲಿ ಪಾಲ್ಗೊಂಡರು . ರೈತ ಮುಖಂಡ ಬೋಬಾಟಿ , ಅಪ್ಪರಾವ್ ಪೂಜಾರ್ , ನಾಗೇಂದ್ರ ಮುಂತಾದವರು ಸತ್ಯಾಗ್ರಹದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು.

300x250 AD
Share This
300x250 AD
300x250 AD
300x250 AD
Back to top