ಶಿರಸಿ: 2022-23ನೇ ಸಾಲಿನ ದಸರಾ ಕ್ರೀಡಾಕೂಟವು ತಾಲೂಕಾ ಮಟ್ಟದಿಂದ ರಾಜ್ಯ ಮಟ್ಟದವರೆಗೆ ನಡೆಯಲಿದ್ದು, ಶಿರಸಿ ತಾಲೂಕಾ ಮಟ್ಟದ ದಸರಾ ಕ್ರೀಡಾ ಕೂಟಗಳನ್ನು ದಿನಾಂಕ: 2, 3, ಸೆಪ್ಟೆಂಬರ್ 2022ರಂದು ನಡೆಸಲಾಗುವುದು, ಈ ಕ್ರೀಡಾಕೂಟದಲ್ಲಿ ಭಾಗವಹಿಸಿ ವಿಜೇತರಾದ ಮಹಿಳೆಯರನ್ನು ಜಿಲ್ಲಾ ಮಟ್ಟದ ಮಹಿಳಾ ಕ್ರೀಡಾಕೂಟಕ್ಕೆ ಆಯ್ಕೆ ಮಾಡಲಾಗುವುದು.
ಸ್ಥಳ: ಶ್ರೀ ಮಾರಿಕಾಂಬಾ ಜಿಲ್ಲಾ ಕ್ರೀಡಾಂಗಣ ಸಿರಸಿ,
ನೋಂದಣಿ: ಕೊನೆಯ ದಿನಾಂಕ 01.09.2022 (ನೋಂದಣಿ ಕಡ್ಡಾಯ)
ಸಂಪರ್ಕಿಸುವ ವಿಳಾಸ :- ಕಿರಣಕುಮಾರ್, ಕ್ರೀಡಾಧಿಕಾರಿ, ತಾಲೂಕಾ ಪಂಚಾಯತ್ ಶಿರಸಿ ಮೊಬೈಲ್ ಸಂಖ್ಯೆ : 9449801404
ಅಣ್ಣಪ್ಪ ನಾಯ್ಕ, ತರಬೇತುದಾರರು ಶಿರಸಿ 9663348911
ಪುರುಷರಿಗಾಗಿ ಗುಂಪು ಸ್ಪರ್ಧೆ:
ಕಬ್ಬಡಿ, ಖೋ-ಖೋ, ವಾಲಿಬಾಲ್, ಬಾಲ್ ಬ್ಯಾಡ್ಮಿಂಟನ್, ಫುಟ್ ಬಾಲ್, ಥ್ರೋ ಬಾಲ್
ಪುರುಷರಿಗಾಗಿ ಅಥ್ಲೆಟಿಕ್ಸ್ ಸ್ಪರ್ಧೆಗಳು
100ಮೀ, 200ಮೀ, 400ಮೀ, 800ಮೀ,1500ಮೀ, 5000 ಮೀಟರ್ ಓಟ,ಹಾಗೂ 4X100 ರಿಲೇ , 4X400 ಮೀ ರಿಲೇ, ಉದ್ದ ಜಿಗಿತ,ಎತ್ತರ ಜಿಗಿತ,ಚಕ್ರ ಎಸೆತ, ಗುಂಡು ಎಸೆತ, ಟ್ರಿಪಲ್ ಜಂಪ್, ಜಾವಲಿನ್ ಥ್ರೋ, ಡಿಸ್ಕಸ್ ಥ್ರೋ, 110 ಮೀ ಹರ್ಡಲ್ಸ್
ಮಹಿಳೆಯರಿಗಾಗಿ ಗುಂಪು ಸ್ಪರ್ಧೆ:
ಕಬ್ಬಡಿ, ಖೋ-ಖೋ, ವಾಲಿಬಾಲ್, ಬಾಲ್ ಬ್ಯಾಡ್ಮಿಂಟನ್,
ಮಹಿಳೆಯರ ಅಥ್ಲೆಟಿಕ್ ಸ್ಪರ್ಧೆಗಳು:
100ಮೀ, .200ಮೀ,. 400ಮೀ, 800ಮೀ,1500ಮೀ, ೩000ಮೀ ಓಟ, 4X100 ರಿಲೇ, 4X400 ರಿಲೇ, ಉದ್ದ ಜಿಗಿತ, ಎತ್ತರ ಜಿಗಿತ, ಚಕ್ರ ಎಸೆತ ಗುಂಡುಎಸೆತ ಟ್ರಿಪಲ್ ಜಂಪ್,ಜಾವ್ಲಿನ್ ಥ್ರೋ, ಡಿಸ್ಕಸ್ ಥ್ರೋ, 100 ಮೀ ಹರ್ಡಲ್ಸ್
ಸೂಚನೆಗಳು:
- ಭಾಗವಹಿಸುವ ಸ್ಪರ್ಧಾಳುಗಳು ಕಡ್ಡಾಯವಾಗಿ ಆಯಾ ತಾಲೂಕಿನವರೇ ಆಗಿರಬೇಕು.
- ಭಾಗವಹಿಸುವವರಿಗೆ ವಯಸ್ಸಿನ ನಿರ್ಬಂಧ ಇರುವದಿಲ್ಲ.
- ಕಬ್ಬಡಿ ಮತ್ತು ವಾಲಿಬಾಲ್ ಆಟಗಳನ್ನು ಅಂದು ಬೆಳಿಗ್ಗೆ 11.00 ಗಂಟೆಯಿಂದ ಪಾರಂಭಿಸಲಾಗುತ್ತದೆ.
- ಒಬ್ಬರಿಗೆ ಎರಡು ವೈಯಕ್ತಿಕ ಮತ್ತು ಒಂದು ಗುಂಪು ಸ್ಪರ್ಧೆಯಲ್ಲಿ ಭಾಗವಹಿಸಲು ಮಾತ್ರ ಅವಕಾಶವಿರುತ್ತದೆ.
- ಭಾಗವಹಿಸುವವರು ಕ್ರೀಡಾ ದಿನದಂದು ಬೆಳಿಗ್ಗೆ 10.00 ಗಂಟೆ ಒಳಗಾಗಿ ನೊಂದಾಯಿಸಿಕೊಳ್ಳಬೇಕು.
- ಭಾಗವಹಿಸುವವರಿಗೆ ಮಧ್ಯಾಹ್ನದ ಉಪಹಾರದ ವ್ಯವಸ್ಥೆ ಮಾಡಲಾಗುತ್ತದೆ.
- ನಿಯಮಾವಳಿಯಲ್ಲಿ ತೀರ್ಪುಗಾರರ ಮತ್ತು ಸಂಘಟಕರ ತೀರ್ಮಾನವೇ ಅಂತಿಮವಾಗಿರುತ್ತದೆ.
ವೈಯಕ್ತಿಕ ಆಟದಲ್ಲಿ ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡದವರು ಬ್ಯಾಂಕ್ ಖಾತೆ ಸಂಖ್ಯೆ, ಆಧಾರ ಕಾರ್ಡ ಭಾವಚಿತ್ರ ಸ್ಥಳದಲ್ಲಿ ನೀಡುವುದು.