• Slide
    Slide
    Slide
    previous arrow
    next arrow
  • ಮೌಲ್ಯಯುತವಾದ ಶಿಕ್ಷಣದಿಂದ ಮಕ್ಕಳ ಪ್ರತಿಭೆ ಅನಾವರಣ: ಶ್ರೀನಿವಾಸ ಧಾತ್ರಿ

    300x250 AD

    ಯಲ್ಲಾಪುರ: ತಾಲೂಕಿನ ಇಡಗುಂದಿಯ ಸ್ನೇಹಸಾಗರ ಶಾಲೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಆದೇಶ ಮತ್ತು ಬಿಆರ್‌ಸಿ ಅವರ ಮಾರ್ಗದರ್ಶನದಂತೆ ಪ್ರಸಕ್ತ ಸಾಲಿನ ಯಲ್ಲಾಪುರ – 02 ಕ್ಲಸ್ಟರ್ ಮಟ್ಟದ ಮಕ್ಕಳ ಪ್ರತಿಭಾಕಾರಂಜಿ ಸ್ಪರ್ಧೆಯನ್ನು ನಡೆಸಲಾಯಿತು.
    ಅಥಿತಿಗಳಾಗಿ ಆಗಮಿಸಿದ ಧಾತ್ರಿ ಸಂಸ್ಥಾಪಕರಾದ ಶ್ರೀನಿವಾಸ ಭಟ್ ಹಾಗೂ ಶಾಲೆಯ ವ್ಯವಸ್ಥಾಪಕರಾದ ಎಸ್. ಎಲ್ ಭಟ್, ಬಿಆರ್‌ಸಿ ವೆರ್ಣೆಕರ್ ಅವರು ದೀಪ ಬೆಳಗಿ ಭಾರತ ಮಾತೆಗೆ ಹೂವು ಅರ್ಪಿಸುವ ಮೂಲಕ ತಾಲೂಕಿನ ಯಲ್ಲಾಪುರ – 02 ವಲಯ ಮಟ್ಟದ ಪ್ರತಿಭಾಕಾರಂಜಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
    ಆಡಳಿತಾಧಿಕಾರಿ ಎನ್. ಎ ಭಟ್ ಸ್ಪರ್ಧೆಗಳ ವಿಷಯವಾಗಿ ಪ್ರಸ್ತಾವನೆಯನ್ನು ಮಾಡಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸೇವಕರಾದ ಶ್ರೀಯುತರು ಅನೇಕ ಶಾಲೆಗಳಿಗೆ ಪೀಠೋಪಕರಣ ವೈದ್ಯಕೀಯ ಶಿಬಿರಗಳು ಹೀಗೆ ಅನೇಕ ಸಮಾಜ ಮುಖಿ ಕಾರ್ಯದಲ್ಲಿ ತೊಡಗಿಕೊಂಡಿರುವ ಮುಖ್ಯ ಅತಿಥಿಗಳನ್ನು ಸ್ವಾಗತಿಸಿದರು.
    ಅತಿಥಿಗಳು ಮಾತನಾಡಿ ನಮ್ಮ ಜೀವನ ಘಟ್ಟ ಎತ್ತರಕ್ಕೆ ಏರಲು ಈ ಪ್ರತಿಭಾ ಕಾರಂಜಿ ಒಂದು ಸಾಧನೆಯಾಗಿದೆ. ಸ್ವತಂತ್ರ ಪೂರ್ವ ಭಾರತ ಮತ್ತು ಸ್ವತಂತ್ರ ನಂತರದ ಭಾರತವನ್ನು ಅವಲೋಕಿಸಿ ಹಿರಿಯರಂತೆ ನಾವು ದೇಶಕ್ಕಾಗಿ ಕೊಡುಗೆಯನ್ನು ನೀಡಬೇಕು ಹಾಗಾಗಿ ನಮ್ಮ ಪ್ರತಿಭೆಗಳನ್ನು ಅನಾವರಣ ಮಾಡಿಕೊಳ್ಳಬೇಕು. ಈ ಜಗತ್ತು ವೇಗವಾಗಿ ಓಡುತ್ತಿದೆ, ನಾವು ಇಂದಿನ ಶಿಕ್ಷಣದ ಕಾಲಘಟ್ಟಕ್ಕೆ ತಕ್ಕಂತೆ ನಮ್ಮ ಪ್ರತಿಭೆಯನ್ನು ತೋರಿಸಿದಾಗ ಜಗತ್ತಿನ ಜೊತೆಗೆ ಸಾಗಲು ಸಾಧ್ಯವೆಂದು ಹೇಳಿದರು.
    ಮೌಲ್ಯಯುತವಾದ ಶಿಕ್ಷಣ ಮಾತ್ರ ಮಕ್ಕಳ ಪ್ರತಿಭೆಯನ್ನು ಅನಾವರಣಗೊಳಿಸುತ್ತದೆ. ಶಿಕ್ಷಣ , ಸಾಂಸ್ಕೃತಿಕ, ರಾಷ್ಟ್ರೀಯ ಭಾವನೆಯೊಂದಿಗೆ ಜಗತ್ತಿನ ಆಗುಹೋಗುಗಳನ್ನು ಅರಿತಾಗ ನಾವು ಮುಂದಿನ ರಾಷ್ಟ್ರ ನಿರ್ಮಾಣ ಸಾಧ್ಯ ಎಂದರು. ಕುವೆಂಪು ಅವರು ನುಡಿದಂತೆ ಕಲಿಕೆ ನಿರಂತರ ಯೋಚನೆ ಭವ್ಯವಾಗಿರಲಿ, ಬದುಕು ಅನಂತವಾಗಿರಲಿ ಹೀಗೆ ಜಗತ್ತನ್ನೇ ಗೆಲ್ಲುವೆ ಎಂಬ ಯೋಚನೆ ಇದ್ದಾಗ ಇಲ್ಲಿ ನಡೆಯುವ ಸ್ಪರ್ಧೆಗಳಲ್ಲಿ ಮುಖ್ಯ ಸ್ಥಾನಮಾನವನ್ನು ಪಡೆಯಲು ಸಾಧ್ಯ. ಎಲ್ಲಾ ರೀತಿಯ ಕೊರತೆಯನ್ನು ಮೀರಿಯೇ ಸಾಧನೆಯು ಹುಟ್ಟಿದೆ. ಕಲಾಂ, ಬಸವಣ್ಣ, ಕಲ್ಪನಾ ಚಾವ್ಲಾ ರಂತವರ ಸಾಧನೆಯ ಪ್ರತಿಭೆಗಳು ಬಡತನದಲ್ಲಿಯೇ ಹುಟ್ಟಿದೆ. ಆದಕಾರಣ ಯಾವದನ್ನು ಚಿಂತಿಸದೆ ಅಧಮ್ಯವಾದ ಯೋಚನೆಯಿಂದ ಮಕ್ಕಳ ಕೌಶಲ್ಯಗಳು ಅನಾವರಣವಾಗಲಿ ಎಂದು ಶುಭಾಶಯವನ್ನು ಹೇಳಿದರು.

    ಎಸ್. ಎಲ್ ಭಟ್ ಅವರು ಮಾತನಾಡಿ ಆರು ಶಾಲೆಗಳ ಮಕ್ಕಳು ಇಲ್ಲಿ ನಡೆಯುವ ಪ್ರತಿಭಾಕಾರಂಜಿಯ ಸ್ಪರ್ಧೆಗಳಲ್ಲಿ ಭಾಗವಹಿಸಿರುವುದು ಸಂತಸ ತಂದಿದೆ. ಪ್ರತಿಯೊಬ್ಬರಲ್ಲೂ ಒಂದೊಂದು ಪ್ರತಿಭೆ ಹವ್ಯಾಸಗಳು ಇರುತ್ತವೆ, ಅದನ್ನು ಇಂತಹ ಕಾರ್ಯಕ್ರಮದಅಡಿಯಲ್ಲಿ ಪ್ರತಿಭೆಯನ್ನು ಅನಾವರಣವನ್ನು ಮಾಡಿಕೊಳ್ಳಬೇಕು ಸ್ಪರ್ಧೆಗಳ ಉಪಯೋಗನ್ನು ಪಡೆದುಕೊಂಡು ಕೌಶಲ್ಯಾಭಿವೃದ್ಧಿಯನ್ನು ವಿಸ್ತರಿಸಿಕೊಳ್ಳಬೇಕೆಂದರು.ಎಲ್ಲಾ ವಿದ್ಯಾರ್ಥಿಗಳು ಸೋಲು ಗೆಲುವಿನ ಫಲಿತಾಂಶವನ್ನು ಸಮಚಿತ್ತದಿಂದ ಸ್ವೀಕರಿಸಬೇಕುಎಂದು ಕಿವಿ ಮಾತನ್ನುಹೇಳಿದರು.

    300x250 AD

    ಯಲ್ಲಾಪುರ – 02 ವಲಯ ಮಟ್ಟದ ವಿಭಾಗದಲ್ಲಿ ಸ್ನೇಹಸಾಗರ, ವಿಶ್ವದರ್ಶನ ಆಂಗ್ಲ ಮತ್ತುಕನ್ನಡ ಮಾಧ್ಯಮ ಶಾಲೆ, ವಾಯ್. ಟಿ. ಎಸ್. ಎಸ್‌ ಯಲ್ಲಾಪುರ, ಸರ್ಕಾರಿ ಹಿ. ಪ್ರಾಉರ್ದು ಶಾಲೆ ಸರ್ಕಾರಿ ಪ್ರೌಢಶಾಲೆ, ಹಂಸನಗದ್ದೆ. ಶಾಲೆಯ ಮಕ್ಕಳು ವೈಯಕ್ತಿಕ ಮತ್ತು ಸಾಮೂಹಿಕ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು. ಶಿಕ್ಷಕಿ ಯಶೋಧಾ ಭಟ್ ನಿರೂಪಿಸಿ, ಅಭಿನಂದನೆಯನ್ನು ಸಲ್ಲಿಸಿದರು.

    Share This
    300x250 AD
    300x250 AD
    300x250 AD
    Leaderboard Ad
    Back to top