Slide
Slide
Slide
previous arrow
next arrow

ಮುಂಜಾಗೃತಾ ಕ್ರಮವಾಗಿ ಬೂಸ್ಟರ್ ಡೋಸ್ ಹಾಕಿಸಿಕೊಳ್ಳಿ: ಹಳೆಮನೆ

300x250 AD

ಶಿರಸಿ: ನಗರದ ಎಂಇಎಸ್ ನ ಎಂಎಂ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದ ಎನ್ ಸಿ ಸಿ, ರೆಡ್ ಕ್ರಾಸ್ ವಿಭಾಗ ಮಹಾವಿದ್ಯಾಲಯದ ಸಿಬ್ಬಂದಿಗಳಿಗೆ ಮತ್ತು ವಿದ್ಯಾರ್ಥಿಗಳಿಗೆ ತಾಲೂಕು ಆರೋಗ್ಯ ಕೇಂದ್ರದ ಸಹಯೋಗದೊಂದಿಗೆ ಕೊವಿಡ್ ಬೂಸ್ಟರ್ ಡೋಸ್ ವಾಕ್ಸಿನೇಶನ್ ನೀಡಲಾಯಿತು.
ಕಾಲೇಜಿನ ಪ್ರಾಚಾರ್ಯ ಡಾ ಟಿ ಎಸ್ ಹಳೆಮನೆ ಮಾತನಾಡಿ ಕೊವಿಡ್ ರೋಗ ಇನ್ನೂ ಪ್ರಪಂಚದಿಂದ ದೂರವಾಗಿಲ್ಲ ನಿಯಂತ್ರಣದಲ್ಲಿದೆ. ಹಾಗಾಗಿ ನಾವು ನಮ್ಮ ಜಾಗೃತೆಯನ್ನು ನೋಡಿಕೊಳ್ಳಬೇಕು. ಪರೀಕ್ಷೆ ಸದ್ಯದಲ್ಲೇ ಪ್ರಾರಂಭವಾಗಲಿದ್ದು ಮುನ್ನೆಚ್ಚರಿಕೆ ಕ್ರಮವಾಗಿ ಎಲ್ಲರೂ ಬೂಸ್ಟರ್ ಡೋಸ್ ಹಾಕಿಸಿಕೊಳ್ಳಿ ಎಂದರು. ಕಾಲೇಜಿನ ಎಲ್ಲಾ ಸಿಬ್ಬಂದಿಗಳು, ವಿದ್ಯಾರ್ಥಿಗಳು ವ್ಯಾಕ್ಸಿನೇಷನ್‌ ಹಾಕಿಸಿಕೊಂಡರು.

300x250 AD
Share This
300x250 AD
300x250 AD
300x250 AD
Back to top