ಹಳಿಯಾಳ: ಜಿಲ್ಲೆಯಲ್ಲಿ ಭಾರೀ ಮಳೆಯಾಗುತ್ತಿದ್ದು, ಹಲವೆಡೆ ಅವಾಂತರ ಸೃಷ್ಟಿಯಾಗಿದೆ. ಮಳೆಯ ಆರ್ಭಟಕ್ಕೆ ಮನೆ ಗೋಡೆ ಕುಸಿದ ಪರಿಣಾಮ ತಾಯಿ, ಮಗಳು ಇಬ್ಬರು ಸಾವನ್ನಪ್ಪಿದ ಘಟನೆಯೊಂದು ತಾಲೂಕಿನ ಮುರ್ಕವಾಡ ಗ್ರಾಮದಲ್ಲಿ ನಡೆದಿದೆ.
ಮನೆಯೊಳಗೆ ಗೋಡೆ ಪಕ್ಕದಲ್ಲೇ ತಾಯಿ-ಮಗಳು ಮಲಗಿದ್ದರು ಎನ್ನಲಾಗಿದ್ದು, ಬೆಳಗಿನ ಜಾವ ಈ ದುರಂತ ನಡೆದಿದೆ. ರುಕ್ಕಿಣಿ ಮಾಚಕ (37) ಮತ್ತು ಶ್ರೀದೇವಿ ಮಾಚಕ (13) ಮೃತ ದುರ್ದೈವಿಗಳು ಎಂದು ತಿಳಿದುಬಂದಿದೆ. ಮಣ್ಣಿನ ಮನೆಯಾಗಿದ್ದರಿಂದ ನಿರಂತರ ಮಳೆಗೆ ಗೋಡೆ ಕುಸಿದು ಬಿದ್ದಿದೆ. ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.