ಹೊನ್ನಾವರ: ತಾಲೂಕಿನ ಮಾಗೋಡ್ ಕೊಡ್ಲಗದ್ದೆ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿ ಆಕಾಶ್ ನಾಯ್ಕ್, ಕಳೆದ ವಾರದಲ್ಲಿ ಸುರಿದ ಅತಿಯಾದ ಮಳೆಯ ರಜೆಯಲ್ಲಿ ಮನೆಯಲ್ಲೇ ಕುಳಿತು, ನಿರುಪಯುಕ್ತ ವಸ್ತುಗಳನ್ನು ಬಳಸಿ ವಾಟರ್ ಪಂಪ್ ಮಾದರಿ ತಯಾರಿಸಿ ಎಲ್ಲರ ಗಮನ ಸೆಳೆದಿದ್ದಾನೆ. ಆಕಾಶ್‌ನ ಉಜ್ವಲ ಭವಿಷ್ಯ ಆಕಾಶದೆತ್ತರಕೆ ಪ್ರಜ್ವಲಿಸಲೆಂದು, ಮುಖ್ಯಾಧ್ಯಾಪಕ ಮಾರುತಿ ನಾಯ್ಕ್ ಮತ್ತು ಶಿಕ್ಷಕ ವೃಂದ, ಆಕಾಶ್ ಕುಟುಂಬದವರು ಹಾಗೂ ಊರಿನವರು ಶುಭ ಹಾರೈಸಿದ್ದಾರೆ.
ಮಳೆ ರಜೆ ಸದ್ವಿನಿಯೋಗಿಸಿಕೊಂಡು ವಾಟರ್ ಪಂಪ್ ಮಾದರಿ ತಯಾರಿಕೆ
