ಸಿದ್ದಾಪುರ: ತಾಲೂಕಿನ ಶ್ರೀಮನ್ನೆಲೆಮಾವಿನಮಠದ ಶ್ರೀ ಮಾಧವಾನಂದ ಭಾರತಿ ಮಹಾಸ್ವಾಮಿಗಳವರ ನಾಲ್ಕನೇಯ ಚಾತುರ್ಮಾಸ್ಯ ವ್ರತ ಜು.10 ರಿಂದ ಸೆ.7 ರವರೆಗೆ ಶ್ರೀಮನ್ನೆಲೆಮಾವು ಮಠದಲ್ಲಿ ಜರುಗಲಿದೆ.
ಜು.10 ಗುರುಪೂರ್ಣಿಮೆಯಂದು ಬೆಳಗ್ಗೆ ವ್ಯಾಸ ಪೂಜೆಯೊಂದಿಗೆ ಶ್ರೀಗಳು ಚಾತುರ್ಮಾಸ್ಯ ವ್ರತವನ್ನು ಸಂಕಲ್ಪ ಮಾಡಲಿದ್ದಾರೆ. ವ್ರತದ ಮೊದಲ ದಿನ ಶ್ರೀಮಠದ ಸಮಸ್ತ ಶಿಷ್ಯ -ಭಕ್ತರ ಪರವಾಗಿ ಪಾದ ಪೂಜೆ ಮತ್ತು ಭಿಕ್ಷಾವಂದನೆ ನಡೆಯಲಿದೆ. ಎರಡು ತಿಂಗಳುಗಳ ಕಾಲ ವಿಶೇಷ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ.
ಜುಲೈ.27 ಹಾಗೂ ಆಗಸ್ಟ 31ರಂದು ಮಧ್ಯಾಹ್ನ 3ರಿಂದ ಧಾರ್ಮಿಕ ಗೋಷ್ಠಿ ಹಾಗೂ ಉಪನ್ಯಾಸಗಳು ನಡೆಯಲಿದೆ.
ಶ್ರೀ ಲಕ್ಷ್ಮಿನೃಸಿಂಹ ಸಂಸ್ಕೃತಿ ಸಂಪದ ವೇದಿಕೆ ಅಡಿಯಲ್ಲಿ ಪ್ರತಿ ಶನಿವಾರ ಮಧ್ಯಾಹ್ನ 3 ರಿಂದ 6 ರವರೆಗೆ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಶ್ರೀಮಠದ ಪ್ರಕಟಣೆ ತಿಳಿಸಿದೆ.