ಸಿದ್ದಾಪುರ: ಪತಂಜಲಿ ಯೋಗ ಸಮಿತಿ ಮತ್ತು ಮಹಿಳಾ ಪತಂಜಲಿ ಯೋಗ ಸಮಿತಿ ಸಿದ್ದಾಪುರ ಇವುಗಳ ಆಶ್ರಯದಲ್ಲಿ ಪಟ್ಟಣದ ಶೃಂಗೇರಿ ಶಂಕರಮಠದ ಯೋಗಕೇಂದ್ರದಲ್ಲಿ ಜು.10ರಂದು ಗುರುಪೂರ್ಣಿಮಾ ಉತ್ಸವದ ಅಂಗವಾಗಿ ಬೆಳಗ್ಗೆ 5 ರಿಂದ 6ವರೆಗೆ ಯೋಗ ಅಭ್ಯಾಸ. 6ರಿಂದ 7ರವರೆಗೆ ಉಪನ್ಯಾಸ ಕಾರ್ಯಕ್ರಮ ನಡೆಯಲಿದೆ.
ತಾಳಮದ್ದಲೆ ಅರ್ಥದಾರಿ ಜೈರಾಮ ಭಟ್ಟ ಗುಂಜಗೋಡ ಗುರುಪೂರ್ಣಿಮಾ ಉತ್ಸವದ ಕುರಿತು ಉಪನ್ಯಾಸ ನೀಡುವರು. ಸಿದ್ದಾಪುರದ ಶೃಂಗೇರಿ ಶಂಕರಮಠದ ಧರ್ಮಾಧಿಕಾರಿ ವಿಜಯ ಹೆಗಡೆ ದೊಡ್ಮನೆ, ಪತಂಜಲಿ ಯೋಗ ಸಮಿತಿಯ ತಾಲೂಕು ಪ್ರಭಾರಿ ಮಂಜುನಾಥ ನಾಯ್ಕ, ತಾಲೂಕು ಮಹಿಳಾ ಪತಂಜಲಿ ಯೋಗ ಸಮಿತಿಯ ಪ್ರಭಾರಿ ವೀಣಾ ಆನಂದ ಶೇಟ್ ಉಪಸ್ಥಿತರಿರುತ್ತಾರೆ.
ಜು.10ಕ್ಕೆ ಗುರುಪೂರ್ಣಿಮಾ: ಯೋಗಾಭ್ಯಾಸ: ಉಪನ್ಯಾಸ
