ಸಿದ್ದಾಪುರ: ಜು: 9, ಬುಧವಾರದಂದು ಮಧ್ಯಾಹ್ನ 3.30ಕ್ಕೆ ಬೆಟ್ಟ ಜಾಗೃತಿ ಅಭಿಯಾನ ಕಾರ್ಯಕ್ರಮವನ್ನು ಸಿದ್ದಾಪುರ ಟಿ.ಎಂ.ಎಸ್. ಸಭಾಭವನದಲ್ಲಿ ಏರ್ಪಡಿಸಲಾಗಿದೆ.
ಕಾರ್ಯಕ್ರಮದಲ್ಲಿ ಅಡಿಕೆ ಬೆಳೆಗಾರರು, ಸಹಕಾರೀ ಧುರೀಣರು, ಪರಿಸರ ತಜ್ಞರು ಪಾಲ್ಗೊಳ್ಳಲಿದ್ದು, ಸಭೆಯ ಅಧ್ಯಕ್ಷತೆಯನ್ನು ಟಿ.ಎಮ್.ಎಸ್ ಅಧ್ಯಕ್ಷ ಆರ್.ಎಮ್.ಹೆಗಡೆ ಬಾಳೆಸರ ವಹಿಸಲಿದ್ದಾರೆ. ಅತಿಥಿಗಳಾಗಿ ರಾಜ್ಯ ಜೀವ ವೈವಿಧ್ಯ ಮಂಡಳಿ ಮಾಜಿ ಅಧ್ಯಕ್ಷ ಅನಂತ ಹೆಗಡೆ ಅಶೀಸರ, ಪರಿಸರ ತಜ್ಞ ಡಾ|| ಕೇಶವ ಹೆಚ್ ಕೊರ್ಸೆ, ಜಿ.ಆರ್. ಹೆಗಡೆ, ಬೆಳ್ಳೇಕೇರಿ ಅಡಿಕೆ ಟಾಸ್ಕಫೋರ್ಸನ ಮಾಜಿ ಸದ್ಯರು ನರೇಂದ್ರ ಹೊಂಡಗಾಶಿ ಬೆಟ್ಟ ಕಾನೂನು ಅಧ್ಯಯನಕಾರರು, ವಿಶ್ವೇಶ್ವರ ಭಟ್, ಜಿಲ್ಲಾ ಸಾವಯವ ಬೆಳೆಗಾರರ ಒಕ್ಕೂಟದ ಅಧ್ಯಕ್ಷರು ಇವರು ಆಗಮಿಸಿ ವಿಶೇಷ ಮಾಹಿತಿ ನೀಡಲಿದ್ದಾರೆ .ಈ ವಿಶೇಷ ಬೆಟ್ಟ ಸಂರಕ್ಷಣೆ ಮತ್ತು ಸುಸ್ಥಿರ ಅಭಿವೃದ್ಧಿ ಸಮಾಲೋಚನಾ ಸಭೆಗೆ ಕಂದಾಯ, ಅರಣ್ಯ ಅಧಿಕಾರಿಗಳನ್ನು ಆಹ್ವಾನಿಸಲಾಗಿದೆ. ಹಾಗೂ
ಸಿದ್ದಾಪುರ ತಾಲೂಕಿನ ಎಲ್ಲ ಸಹಕಾರಿ ಸಂಘಗಳ ಆಡಳಿತ ಮಂಡಳಿಗಳು , ಅಡಿಕೆ ಬೆಳೆಗಾರರು ಪಾಲ್ಗೊಳ್ಳಲಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಅಡಿಕೆ ಬೆಳೆಗಾರರಿಗೆ ಸ್ವಾತ್ರಂತ್ರ್ಯ ಪೂರ್ವದಿಂದ ನೀಡಲಾದ ಕೆನರಾ ಪ್ರಿವಿಲೆಜ್ ಬೆಟ್ಟ ಸೌಲಭ್ಯ ಮುಂದುವರೆಸುವುದು, ಬೆಟ್ಟ ಭೂಮಿಯನ್ನು ‘ಬ’ ಖರಾಬ ವ್ಯಾಪ್ತಿಗೆ ಸೇರ್ಪಡೆ ಮಾಡಿದ್ದಕ್ಕೆ ವಿರೋಧ, ಬೆಟ್ಟ ಅಭಿವೃದ್ಧಿ ಯೋಜನೆ ಜಾರಿ ಮಾಡುವುದು, ಬೆಟ್ಟ ವನೀಕರಣ, ಬೆಟ್ಟ ಜೀವ ವೈವಿಧ್ಯ ಸಂವರ್ಧನೆ ಹೀಗೆ ಹಲವು ಮಹತ್ವದ ವಿಷಯಗಳ ಬಗ್ಗೆ ಸಮಾಲೋಚನೆ ನಡೆಸುವ ಉದ್ದೇಶ ಸಮಾಲೋಚನಾ ಸಭೆಯದ್ದಾಗಿದೆ.
ಹಾಗೇಯೇ ಜುಲೈ 9ರಂದು ಬೆಳಿಗ್ಗೆ 10 ಗಂಟೆಗೆ ತ್ಯಾಗಲಿ ಸಹಕಾರಿ ಸಂಘದಲ್ಲಿ ಹಾಗೂ 11:30ಕ್ಕೆ ಹಾರ್ಸಿಕಟ್ಟಾ ಸಹಕಾರಿ ಸಂಘದಲ್ಲಿ ಬೆಟ್ಟ ಜಾಗೃತಿ ಅಭಿಯಾನ ಸಭೆ ನಡೆಯಲಿದೆ.