ಸಿದ್ದಾಪುರ: ಸಂಧ್ಯಾವಂದನೆ, ದೇವಪೂಜೆ, ಗಾಯಿತ್ರಿ ಜಪ ಮಂತ್ರ, ಭಜನೆ ,ನಿತ್ಯ ಪಠಿಸುವುದರಿಂದ ನಮ್ಮ ಸಮಾಜ, ನಮ್ಮ ಕುಟುಂಬ,ನಮ್ಮ ಮನೆ ಭದ್ರವಾಗಿ, ಅತ್ಯಂತ ದಿವ್ಯವಾಗಿ, ಭವ್ಯವಾಗಿ, ಸುಸಂಸ್ಕೃತವಾಗಿ ಸಾಗಲು ಸಾಧ್ಯ.ಯೋಗ್ಯ ಮಾರ್ಗದಿಂದ ಸಾಗಲು ಜ್ಞಾನದ ದಾರಿ ಜೀವನದುದ್ದಕ್ಕೂ ನಾವು ಏನು ಮಾಡಬೇಕು, ಜ್ಞಾನದ ಪ್ರಾಪ್ತಿ , ಜೀವನ ಅಭ್ಯುದಯ ಇದು ಬ್ರಹ್ಮೋಪದೇಶದ ಮುಖ್ಯ ಸಂದೇಶ ಎಂದು ಕರ್ಕಿ ಮಠದ ಶ್ರೀ ಶ್ರೀ ಸಚ್ಚಿದಾನಂದ ಜ್ಞಾನೇಶ್ವರ ಭಾರತಿ ಮಹಾಸ್ವಾಮಿಗಳು ನುಡಿದರು.
ಶ್ರೀಗಳು ಸಿದ್ದಾಪುರದ ಹಾಳದಕಟ್ಟಾದ “ಪದ್ಮರಾಜ ವಿಲ್ಲಾ”ದಲ್ಲಿ ಮೇ.22, ಗುರುವಾರದಂದು ಜರುಗಿದ ಗಣಪತಿ ನಾಗೇಶ್ ಶೆಟ್ ರವರ ಸುಪುತ್ರ ಚಿ.ತೇಜಸ್ ನ ಬ್ರಹ್ಮೋಪದೇಶ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿ ನಾವು ಎಲ್ಲ ಜನರೊಡನೆ ಪ್ರೀತಿ-ವಿಶ್ವಾಸದಿಂದ ಇರಲು ವ್ಯವಸ್ಥೆಯನ್ನು ಕಲ್ಪಿಸಿಕೊಳ್ಳಬೇಕು.ಗಾಯಿತ್ರಿ ಜಪ ಮಂತ್ರದಲ್ಲಿ ಅಗಾಧ ಶಕ್ತಿ ಇದೆ ಎಂದು ಶ್ರೀಗಳು ಆಶಯ ವ್ಯಕ್ತಪಡಿಸಿ ಎಲ್ಲರಿಗೂ ಒಳಿತಾಗಲೆಂದು ಶುಭ ಹಾರೈಸಿದರು.ಗಣಪತಿ ನಾಗೇಶ ಶೇಟ ದಂಪತಿಗಳು ಶ್ರೀಗಳ ಪಾದಪೂಜೆ ಯನ್ನು ನೆರವೇರಿಸಿ ಫಲ ತಾಂಬೂಲ ಅರ್ಪಿಸಿ ಶ್ರೀಗಳನ್ನು ಸತ್ಕರಿಸಿದರು. ಈ ಬ್ರಹ್ಮೋಪದೇಶದ ಕಾರ್ಯಕ್ರಮವನ್ನು ಕರ್ಕಿ ಮಠದ ಪ್ರಧಾನ ಪುರೋಹಿತರಾದ ವೇದಮೂರ್ತಿ ಯೋಗೀಶ್ ಭಟ್ ಹಾಗೂ ವೇದಮೂರ್ತಿ ಗುರು ಭಟ್ ನೇತೃತ್ವದಲ್ಲಿ ನಡೆಯಿತು.ಸಿದ್ದಾಪುರದ ಹೊಸೂರಿನ ಜೋಗ ವೃತ್ತದಿಂದ ಬೈಕ್ ರ‌್ಯಾಲಿಯ ಮುಖಾಂತರ ಪೂರ್ಣ ಕುಂಭ ಸ್ವಾಗತದೊಂದಿಗೆ ಬರಮಾಡಿಕೊಳ್ಳಲಾಯಿತು. ಕುಮಾರಿ ಶಿವಾನಿ ವೆರಣೆಕರ್ ಮತ್ತು ಕುಮಾರಿ ನಿಕಿತಾ ವೇರ್ಣೇಕರ ಪ್ರಾರ್ಥನ ಗೀತೆ ಹಾಡಿದರು. ಗಣಪತಿ ನಾಗೇಶ್ ಶೇಟ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು.ಮಹೇಶ್ ವಿ.ಶೇಟ ಕಾರ್ಯಕ್ರಮ ನಿರೂಪಿಸಿದರು. ಪ್ರಶಾಂತ್ ಡಿ. ಶೇಟ್ ಆಭಾರ ಮನ್ನಿಸಿದರು.