ದಾಂಡೇಲಿ : ನಗರದ ಖ್ಯಾತ ಗುತ್ತಿಗೆದಾರರು ಹಾಗೂ ಸಮಾಜಸೇವಕರಾಗಿದ್ದ ಜೆ.ಎನ್.ರಸ್ತೆಯ ನಿವಾಸಿ ಆರ್.ಡಿ.ಜನ್ನು (ರವಿಶಂಕರ ಜನ್ನು) ಅವರು ಭಾನುವಾರ ಸಂಜೆ ವಿಧಿವಶರಾಗಿದ್ದಾರೆ. ಮೃತರಿಗೆ 60 ವರ್ಷವಯಸ್ಸಾಗಿತ್ತು.
ಸರಳ ಸಜ್ಜನಿಕೆಯ ವ್ಯಕ್ತಿತ್ವದವರಾಗಿದ್ದ ಆರ್.ಡಿ.ಜನ್ನು ಅವರಿಗೆ ಎದೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ತಕ್ಷಣವೇ ನಗರದ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುವಷ್ಟರೊಳಗಡೆ ವಿಧಿವಶರಾಗಿದ್ದಾರೆ. ಹಿತವಾದ ಮಾತು, ಜನಸ್ನೇಹಿ ನಡವಳಿಕೆ, ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಕಾರ್ಯ ಚಟುವಟಿಕೆಗಳಿಗೆ ಸದ್ದಿಲ್ಲದೆ ಸದಾ ಸೇವೆಯನ್ನು ನೀಡುತ್ತಲೇ ಬಂದಿದ್ದ ಆರ್.ಡಿ.ಜನ್ನು ಅವರು ಹೆಸರಾಂತ ಗುತ್ತಿಗೆದಾರರಾಗಿ ಗಮನ ಸೆಳೆದಿದ್ದರು.
ಅಜಾತಶತ್ರು ಆರ್.ಡಿ.ಜನ್ನು ಅವರು ಪತ್ನಿ, ಪುತ್ರಿ ಹಾಗೂ ಸಹೋದರಿ, ಓರ್ವ ಸಹೋದರ ಮತ್ತು ಅಪಾರ ಸಂಖ್ಯೆಯಲ್ಲಿ ಬಂಧು ಬಳಗವನ್ನು ಅಗಲಿದ್ದಾರೆ. ಮೃತರ ನಿಧನಕ್ಕೆ ನಗರದ ಗಣ್ಯರನೇಕರು ಕಂಬನಿಯನ್ನು ಮಿಡಿದು ಸಂತಾಪವನ್ನು ಸೂಚಿಸಿದ್ದಾರೆ.