ಶಿರಸಿ: ತಾಲೂಕಿನ ಶಿವಳ್ಳಿ – ಪಂಚಲಿಂಗದ ಶ್ರೀ ಲಕ್ಷ್ಮೀನಾರಾಯಣ ದೇವರ ನೂತನ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮ ಮೇ.24 ರಿಂದ 26 ರವರೆಗೆ ನಡೆಯಲಿದ್ದು, ಈ ನಿಮಿತ್ತ ನಾನಾ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
24 ರಂದು ಬೆಳಗ್ಗೆ ಪಂಚಗವ್ಯ – ಕೂಷ್ಮಾಂಡ ಹೋಮ, ಗಣಪತಿ ಪೂಜೆ, ನಾಂದಿ, ಮಾತೃಕಾ ಪೂಜೆ, ದೇವಬಿಂಬ ಜಲಾಧಿವಾಸ, ಸಾಯಂಕಾಲ: ಸಪ್ತಶುದ್ಧಿ, ವಾಸ್ತು ರಾಕ್ಷೋಘ್ನ ಹೋಮ, ಶ್ರೀ ಲಕ್ಷ್ಮೀನಾರಾಯಣ ದೇವರ ನೂತನ ಬಿಂಬಕ್ಕೆ ಅಧಿವಾಸ, ಈಶ್ವರ ದೇವರಲ್ಲಿ ಕಲಾಸಂಕೋಚ ಪೂರ್ವಕ ಜೀವಕುಂಭ ಸ್ಥಾಪನೆ ಕಾರ‌್ಯಕ್ರಮಗಳು ನಡೆಯಲಿವೆ.
25ರಂದು ಬೆಳಗ್ಗೆ ಶ್ರೀ ಲಕ್ಷ್ಮೀನಾರಾಯಣ ದೇವರ ನೂತನ ಮೂರ್ತಿ ಪ್ರತಿಷ್ಠೆ, ಅಷ್ಠಬಂಧ ಹಾಗೂ ಈಶ್ವರ ದೇವರಿಗೆ ಜೀರ್ಣಾಷ್ಠಬಂಧ. ಸಾಯಂಕಾಲ: ಈಶ್ವರ ದೇವರ ಪಲ್ಲಕ್ಕಿ ಉತ್ಸವ, ಶ್ರೀ ಲಕ್ಷ್ಮೀನಾರಾಯಣ ದೇವಸ್ಥಾನದಲ್ಲಿ ಅಷ್ಠಾವಧಾನ ಸೇವೆ ನಡೆಯಲಿದೆ. ಬಳಿಕ ಭಕ್ತಿ ಲಹರಿ, ಭಜನೆ, ಕೀರ್ತನೆ, ಕಿರುನಾಟಕ ಪ್ರದರ್ಶನ ಆಯೋಜಿಸಲಾಗಿದೆ.
26 ರಂದು ಬೆಳಗ್ಗೆ ತತ್ತ್ವಕಲಾ ಹೋಮ, ಪೂರ್ಣಾಹುತಿ, ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳು ಹಾಗೂ ಶ್ರೀ ಆನಂದಭೋಧೇಂದ್ರ ಸರಸ್ವತೀ ಮಹಾಸ್ವಾಮಿಗಳ ಅಮೃತ ಹಸ್ತದಿಂದ ಬ್ರಹ್ಮಕುಂಭಾಭಿಷೇಕ, ಶ್ರೀಗಳ ಪಾದುಕಾಪೂಜೆ, ಮಹಾಮಂಗಳಾರತಿ ನಡೆಯಲಿದೆ. ಮಧ್ಯಾಹ್ನ ಧರ್ಮ ಸಭೆ, ಗೌರವಾರ್ಪಣೆ ಕಾರ್ಯಕ್ರಮ ನಡೆಯಲಿದೆ. ಬಳಿಕ ಮನರಂಜನಾ ಕಾರ್ಯಕ್ರಮ ಮತ್ತು ಯಕ್ಷಗಾನ ಪ್ರದರ್ಶನ ಆಯೋಜಿಸಲಾಗಿದೆ.
ಧಾರ್ಮಿಕ ಕಾರ್ಯಕ್ರಮಗಳು ವೇ. ಮೂ ಶ್ರೀನಿವಾಸ ಭಟ್ಟ ಅವರ ಮಾರ್ಗದರ್ಶನ ಹಾಗೂ ವೇ. ಮೂ. ಶ್ರೀ ಕುಮಾರ ಭಟ್ಟ ಅವರ ಅಧ್ವೈರ್ಯದಲ್ಲಿ ನಡೆಯಲಿವೆ ಎಂದು ಶ್ರೀ ಶ್ರೀ ಲಕ್ಷ್ಮೀನಾರಾಯಣ ಪಂಚಲಿಂಗೇಶ್ವರ ದೇವಸ್ಥಾನ ಟ್ರಸ್ಟ್ ಆಡಳಿತ ಮಂಡಳಿ ತಿಳಿಸಿದೆ.