ಶಿರಸಿ : ಬಸವ ವಸತಿ ಯೋಜನೆಯ ಫಲಾನುಭವಿಗಳಿಗೆ ಸರ್ಕಾರದ ಸಹಾಯಧನ ವಿಳಂಬವಾದ ಹಿನ್ನಲೆಯಲ್ಲಿ ತಾಲೂಕಿನ ಕುಳವೆ ಗ್ರಾಮ ಪಂಚಾಯತ ಅಧ್ಯಕ್ಷೆ ರಂಜಿತಾ ಹೆಗಡೆ ಬೆಂಗಳೂರಿನಲ್ಲಿ ವಸತಿ ನಿಗಮಕ್ಕೆ ಭೇಟಿ ನೀಡಿ ಮನವಿ ಸಲ್ಲಿಸಿದರು.
ಹಲವು ತಿಂಗಳಿಂದ ಬಸವ ವಸತಿ ಯೋಜನೆಯ ಫಲಾನುಭವಿಗಳಿಗೆ ಸಹಾಯಧನ ಪಾವತಿ ಆಗದೆ ವಿಳಂಬವಾಗಿದ್ದು, ಇದರಿಂದ ಬಡವರು ತೊಂದರೆ ಪಡುವಂತಾಗಿದೆ. ಕಾರಣ ತಕ್ಷಣ ಹಣ ಬಿಡುಗಡೆ ಮಾಡಿಕೊಡುವಂತೆ ಸೋಮವಾರ ವಸತಿ ನಿಗಮದ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಿಸಿದರು. ಈ ವೇಳೆ ಸದ್ಯದಲ್ಲೇ ಹಣ ಪಾವತಿಸುವ ಕುರಿತು ಭರವಸೆ ನೀಡಿದ್ದಾಗಿ ರಂಜಿತಾ ಹೆಗಡೆ ತಿಳಿಸಿದರು.